ರಜನೀಕಾಂತ್ (ರಜಿನಿಕಾಂತ್) ಮತ್ತು ಕಮಲ್ ಹಾಸನ್ ಭಾರತ ಚಿತ್ರರಂಗದ ಇಬ್ಬರು ಸೂಪರ್ ಸ್ಟಾರ್ ನಟರು. ಸುಮಾರು ಒಟ್ಟಿಗೆ ಚಿತ್ರರಂಗಕ್ಕೆ ಕಾಲಿಟ್ಟ ಇವರಿಂದಲೂ ಸ್ಟಾರ್ ಗಿರಿಯನ್ನು ಅನುಭವಿಸುತ್ತಿದ್ದಾರೆ. ಬೇರೆ ಚಿತ್ರರಂಗದಲ್ಲಿ ಸ್ಟಾರ್ ನಟರುಗಳ ನಡುವೆ ಪರಸ್ಪರ ಸ್ಪರ್ಧೆ, ವೈರತ್ನ ಇದ್ದರೆ ರಜನೀಕಾಂತ್ ಮತ್ತು ಕಮಲ್ ಹಾಸನ್ ಹಲವು ವರ್ಷಗಳಿಂದ ಬಲು ಆತ್ಮೀಯ ಗೆಳೆಯರು ಎಂಬ ವಿಶೇಷ. ಆರಂಭದ ಕೆಲವು ವರ್ಷ ಒಟ್ಟಿಗೆ ನಟಿಸಿದ ರಜನೀಕಾಂತ್ ಮತ್ತು ಕಮಲ್ ಹಾಸನ್ ಸ್ಟಾರ್ ನಟರು ಎನಿಸಿಕೊಂಡವರು ಒಟ್ಟಿಗೆ ನಟಿಸಿದ್ದಾರೆ. ಇದೀಗ ಬರೋಬ್ಬರಿ 47 ವರ್ಷಗಳ ಬಳಿಕ ರಜನೀಕಾಂತ್ ಮತ್ತು ಕಮಲ್ ಹಾಸನ್ ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ ಆದರೆ ಒಂದು ಅನುಮಾನ ಮೂಡಿದೆ ಈ ಸಿನಿಮಾದಲ್ಲಿ ನಾಯಕ ಯಾರು?
ರಜನೀಕಾಂತ್ ಮತ್ತು ಕಮಲ್ ಹಾಸನ್ ಒಟ್ಟಿಗೆ ನಟಿಸಲಿರುವ ಸಿನಿಮಾವನ್ನು ‘ಜೈಲರ್’ ಸಿನಿಮಾ ಖ್ಯಾತಿಯ ನಿರ್ದೇಶಕ ನೆಲ್ಸನ್ ನಿರ್ದೇಶಿಸಲಿದ್ದಾರೆ. ಈ ಸಿನಿಮಾಕ್ಕೆ ಸದ್ಯಕ್ಕೆ ‘ಕೆಎಚ್-ಆರ್‌ಕೆ’ ಎಂದು ತಾತ್ಕಾಲಿಕ ಹೆಸರಿಡಲಾಗಿತ್ತು, ಸಿನಿಮಾದ ಘೋಷಣೆಗೆಂದು ಒಂದು ತಮಾಷೆಯಾದ ಪ್ರೋಮೋ ಸಹ ಬಿಡುಗಡೆಯಾಗಿದೆ. ಈ ಪ್ರೊಮೊ ವಿಡಿಯೋ ಎಷ್ಟು ಮಜವಾಗಿದೆ ಎಂದರೆ, ಇಲ್ಲಿ ಸಿನಿಮಾದ ಕಥೆಗಿಂತ ಹೆಚ್ಚಾಗಿ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಹಾಗೂ ಸಂಗೀತ ನಿರ್ದೇಶಕ ಅನಿರುದ್ಧ್ ಅವರ ಗೊಂದಲವೇ ಹೈಲೈಟ್.
ವಿಡಿಯೋದ ಆರಂಭದಲ್ಲಿ ನೆಲ್ಸನ್ ಕಾರಿಡಾರ್‌ನಲ್ಲಿ ಅತ್ತಿತ್ತ ಅಡ್ಡಾಡುತ್ತಾ, ‘ಯಾರ ರೂಮಿಗೆ ಮೊದಲು ಹೋಗಲಿ? ರಜನಿ ಸಾರ್ ರೂಮಿಗೋ ಅಥವಾ ಕಮಲ್ ಸಾರ್ ರೂಮಿಗೋ?’ ಎಂದು ತಲೆ ಕೆರೆದುಕೊಳ್ಳುತ್ತಿರುತ್ತಾರೆ. ಅಷ್ಟರಲ್ಲಿ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ಎಂಟ್ರಿ ಕೊಟ್ಟು, “ಗುರುಗಳೇ, ಯಾವ ರಾಗ ಸೆಲೆಕ್ಟ್ ಮಾಡಲಿ?” ಎಂದು ಇನ್ನೊಂದು ಕನ್ಫ್ಯೂಷನ್ ಹೇಳುತ್ತಾರೆ. ಪಾಪ ನೆಲ್ಸನ್, ಇಬ್ಬರು ಸೂಪರ್‌ಸ್ಟಾರ್‌ಗಳನ್ನು ಮ್ಯಾನೇಜ್ ಮಾಡೋಕೆ ಪಡುತ್ತಿರುವ ಪಾಡು ನೋಡಿ ವೀಕ್ಷಿಸು ನಗುವಂತಿದೆ.
ಇದನ್ನೂ ಓದಿ:ಸ್ವಚ್ಛತಾ ಕಾರ್ಮಿಕ ಮಹಿಳೆ ಪದ್ಮಮ್ಮನ ಸನ್ಮಾನಿಸಿದ ರಜನೀಕಾಂತ್: ಕಾರಣ?
ಮುಂದುವರೆದಂತೆ, ರಜನೀ ಮತ್ತು ಕಮಲ್ ಅವರು ಒಬ್ಬರಿಗೊಬ್ಬರು ಯಾರಾದರೂ ಸ್ಟೈಲ್ ಆಗಿರಬೇಕು ಎಂದು ಸ್ಪರ್ಧೆಗೆ ಬಿದ್ದವರಂತೆ ತೋರಿಸಲಾಗಿದೆ. ವಿಡಿಯೋದ ಕೊನೆಯಲ್ಲಿ ಅಸಲಿ ಟ್ವಿಸ್ಟ್ ಇದೆ. ಇಬ್ಬರೂ ಲೆಜೆಂಡರಿ ನಟರು ಫುಲ್ ರೆಟ್ರೋ ಸ್ಟೈಲ್‌ನಲ್ಲಿ, ಲೆದರ್ ಜಾಕೆಟ್ ತೊಟ್ಟು ಮಸ್ತ್ ಆಗಿ ನಡೆದುಕೊಂಡು ಬರುತ್ತಾರೆ. ವಿಂಟೇಜ್ ಮರ್ಸಿಡೀಜ್ ಕಾರಿನಲ್ಲಿ ಕಮಲ್ ಹಾಸನ್ ಡ್ರೈವಿಂಗ್ ಸೀಟಿನಲ್ಲಿ ಕೂತರೆ, ರಜನಿ ಪಕ್ಕದ ಸೀಟಿನಲ್ಲಿ ಆಸೀನರಾಗುತ್ತಾರೆ. ಇವರ ಹಿಂಬದಿಯ ಸೀಟಿನಲ್ಲಿ ನೆಲ್ಸನ್ ಮತ್ತು ಅನಿರುದ್ಧ್ ಇರುತ್ತಾರೆ. ಈ ಸಮಯದಲ್ಲಿ ಗಂಭೀರವಾಗಿ ನೆಲ್ಸನ್ ಕಡೆ ನೋಡಿ, ‘ಅಂದಹಾಗೆ, ನಮ್ಮಿಬ್ಬರಲ್ಲಿ ಈ ಸಿನಿಮಾಕ್ಕೆ ಹೀರೋ ಯಾರು?’ ಎಂದು ಕೇಳುತ್ತಾರೆ. ಇಬ್ಬರು ಸ್ಟಾರ್ ನಟರ ಈ ಪ್ರಶ್ನೆಗೆ ನೆಲ್ಸನ್ ಮತ್ತಷ್ಟು ಗಾಬರಿ ಆಗುತ್ತಾರೆ.
ರಜನೀಕಾಂತ್ ಮತ್ತು ಕಮಲ್ ಹಾಸನ್ ಒಟ್ಟಿಗೆ ಏಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಜನೀಕಾಂತ್ ಅವರ ಮೊದಲ ಸಿನಿಮಾ ‘ಅಪೂರ್ವರಾಗಂಗಳ್’ನಲ್ಲಿ ಕಮಲ್ ಹಾಸನ್ ನಾಯಕ. ಆ ಬಳಿಕ ‘ಮೂದ್ರು ಮುದಿಚ್ಚು’, ‘ಅವರ್ಗಳ್’, ‘ಪದಿನಾರು ವಯತ್ತಿನಿಲೆ’, ‘ಇಳಮಾಯ್ ಉಂಜಿಲ್ ಆಡುಕಿರಾತ್ತು’, ‘ನಿನ್ನೈತಾಲೆ ಇನಿಕ್ಕುಂ’ ಮತ್ತು 1979 ರಲ್ಲಿ ಬಿಡುಗಡೆಯಾದ ‘ಅಲ್ಲಾವುದ್ದೀನ್ ಅಲ್ಬುತ ವಿಲಕ್ಕುಂ’ ಕಮಲ್ ಹಾಗೂ ರಜನೀಕಾಂತ್ ಒಟ್ಟಿಗೆ ನಟಿಸಿದ ಸಿನಿಮಾ. ಅದಾದ ಬಳಿಕ ಈ ಇಬ್ಬರು ಒಟ್ಟಿಗೆ ನಟಿಸಿಲ್ಲ ಇದೀಗ 47 ವರ್ಷಗಳ ಬಳಿಕ ಮತ್ತೆ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ಕಮಲ್ ಹಾಸನ್ ಅವರೇ ಬಂಡವಾಳ ಹೂಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ