KGF ಮೀರಿಸೋ ಟಾಕ್ಸಿಕ್: ಈ ಸಲ ಯುದ್ಧಾನೇ ಬೇರೆ! ಯಶ್ ಕೌಂಟರ್ ಕೊಟ್ಟಿದ್ದು ಯಾರಿಗೆ? | Rocking Star Yash Toxic Teaser Creates Storm Throws Royal Challenge To Bollywood Ahead Of March 19 Release Kvn

KGF ಮೀರಿಸೋ ಟಾಕ್ಸಿಕ್: ಈ ಸಲ ಯುದ್ಧಾನೇ ಬೇರೆ! ಯಶ್ ಕೌಂಟರ್ ಕೊಟ್ಟಿದ್ದು ಯಾರಿಗೆ? | Rocking Star Yash Toxic Teaser Creates Storm Throws Royal Challenge To Bollywood Ahead Of March 19 Release Kvn



KGF ಮೀರಿಸೋ ಟಾಕ್ಸಿಕ್: ಈ ಸಲ ಯುದ್ಧಾನೇ ಬೇರೆ! ಯಶ್ ಕೌಂಟರ್ ಕೊಟ್ಟಿದ್ದು ಯಾರಿಗೆ? | Rocking Star Yash Toxic Teaser Creates Storm Throws Royal Challenge To Bollywood Ahead Of March 19 Release Kvn

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಹೊಸ ಟೀಸರ್ ಬಿಡುಗಡೆಯಾಗಿದ್ದು, ಕೆಜಿಎಫ್ ಚಿತ್ರವನ್ನು ಮೀರಿಸುವಂತಹ ಹಿಂಸಾತ್ಮಕ ದೃಶ್ಯಗಳಿಂದ ಕೂಡಿದೆ. ಈ ಟೀಸರ್‌ನಲ್ಲಿ ಯಶ್ ತ್ರಿಪಾತ್ರದಲ್ಲಿ ಕಾಣಿಸಿಕೊಂಡಿರುವ ಸುಳಿವು ನೀಡಿದೆ.

ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ರಿಲೀಸ್‌ಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ. ಸದ್ಯ ಟಾಕ್ಸಿಕ್ ಮೂವಿಯ ಹೊಸ ಟೀಸರ್ ಬಂದಿದ್ದು ಅಕ್ಷರಶಃ ಸಿನಿಲೋಕದಲ್ಲಿ ಬಿರುಗಾಳಿ ಎಬ್ಬಿಸಿದೆ. ಅದ್ರಲ್ಲೂ ಟಾಕ್ಸಿಕ್‌ನ ರಾಯ ಈ ಟೀಸರ್ ಮೂಲಕ ಬಾಲಿವುಡ್‌ಗೆ ರಾಯಲ್ ಚಾಲೆಂಜ್ ಹಾಕಿದಂತೆ ಕಾಣ್ತಾ ಇದೆ.

ರಾಯನ ರಕ್ತದೋಕುಳಿ, KGF ಮೀರಿಸೋ ಟಾಕ್ಸಿಕ್..!

ಯೆಸ್ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್-2 ನಂತರ ಬರೊಬ್ಬರಿ 4 ವರ್ಷಗಳ ಕಾಲ ಗ್ಯಾಪ್ ತೆಗೆದುಕೊಂಡು , ಕೆಜಿಎಫ್‌ನೂ ಮೀರಿಸೋವಂಥಾ ಪ್ರಾಜೆಕ್ಟ್ ಮಾಡ್ತಿನಿ ಅಂತ ಶಪಥಗೈದು ಮಾಡಿರೋ ಚಿತ್ರವೇ ಟಾಕ್ಸಿಕ್. ಮಾರ್ಚ್ 19ಕ್ಕೆ ವರ್ಲ್ಡ್ ವೈಡ್ ಟಾಕ್ಸಿಕ್ ತೆರೆಗೆ ಬರ್ತಾ ಇದೆ. ಸದ್ಯ ರಿಲೀಸ್ ಹೊಸ್ತಿಲಲ್ಲಿ ಟಾಕ್ಸಿಕ್ ಸಿನಿಮಾದ ಹೊಸ ಟೀಸರ್ ಬಂದಿದೆ. ಯಶ್ ಬರ್ತ್​ಡೇಗೆ ಬಂದಿದ್ದ ಟೀಸರ್ ಬೆಂಕಿ ಹಚ್ಚಿತ್ತು. ಈಗ ಬಂದಿರೋ ಟ್ರೈಲರ್ ಅಗ್ನಿ ಪರ್ವತದಂತೆ ಇದೆ.

ಇಡೀ ಟೀಸರ್​ ತುಂಬಾ ವೈಲೆನ್ಸ್, ವೈಲೆನ್ಸ್, ವೈಲೆನ್ಸ್. ಕೆಜಿಎಫ್‌ನೂ ಮೀರಿಸೋವಂಥಾ ರಕ್ತದೋಕುಳಿಯ ದೃಶ್ಯಗಳು ಟೀಸರ್ ತುಂಬಾ ಇವೆ. ಜೊತೆಗೆ ಈ ಸಲ ಯುದ್ಧಾನೇ ಬೇರೆ ಅನ್ನೋ ಡೈಲಾಗ್ ಯಾರಿಗೋ ಸಂದೇಶ ಕೊಡುವಂತೆ ಇದೆ.

ಟಾಕ್ಸಿಕ್ ಜ್ವಾಲಾಮುಖಿ ಕಂಡು ಬಾಲಿವುಡ್ ಗಡ-ಗಡ!

ಹೌದು ಈ ಟೀಸರ್ ನೋಡ್ತಾ ಇದ್ರೆ ಯಶ್ ಮೂರು ಅವತಾರಗಳಲ್ಲಿ ಕಾಣಸಿಗ್ತಾರೆ. ಆರಂಭದಲ್ಲಿ ಉದ್ದ ಕೂದಲು ಬಿಟ್ಟು ರೆಟ್ರೋ ಲುಕ್ನಲ್ಲಿ ಯಶ್‌ ಗಮನ ಸೆಳೆದರೆ, ಟೀಸರ್ ಕೊನೆಯಲ್ಲಿ ಯಶ್ ಅವರ ಸ್ಟೈಲೀಶ್ ಲುಕ್ ನೋಡಿದ ಎಲ್ರೂ ಬಾಯ್ಮೇಲೆ ಬೆರಳಿಡೋದು ಪಕ್ಕಾ.

ಇನ್ನೂ ಟ್ಯಾಟೋ ಹಾಕಿಸಿಕೊಂಡು ಮತ್ತೊಂದು ಅವತಾರದಲ್ಲೂ ಯಶ್ ಕಾಣಿಸಿದ್ದು, ಸಿನಿಮಾದಲ್ಲಿ ಅವರದ್ದು ತ್ರಿಪಾತ್ರ ಅನ್ನೋ ಸುದ್ದಿ ಕೂಡ ಇದೆ. ಸೋ 4 ವರ್ಷ ಕಾದ ಫ್ಯಾನ್ಸ್ ಗೆ ತ್ರಿಪಾತ್ರದಲ್ಲಿ ಬಂದು ತ್ರಿಬಲ್ ಧಮಾಕಾ ಕೊಡಲಿಕ್ಕೆ ಯಶ್ ಸಜ್ಜಾದಂತೆ ಕಾಣ್ತಾ ಇದೆ.

ಇನ್ನೂ ಬಾಲಿವುಡ್ ಮೂವಿ ಧುರಂಧರ್ -2 ಕೂಡ ಮಾರ್ಚ್ 19ರಂದೇ ರಿಲೀಸ್ ಆಗ್ತಾ ಇದೆ. ಈ ಎರಡೂ ಸಿನಿಮಾಗಳ ನಡುವೆ ನಡೆಯೋದು ಶತಮಾನದ ಬಾಕ್ಸಾಫೀಸ್ ಫೈಟ್ ಎನ್ನಲಾಗ್ತಾ ಇದೆ. ಸದ್ಯ ರಿಲೀಸ್ ಆಗಿರೋ ಟಾಕ್ಸಿಕ್ ಟೀಸರ್ ನೋಡಿದ ಬಾಲಿವುಡ್ ಮಂದಿ ಶಾಕ್ ಆಗಿದ್ದಾರೆ. ಈ ಪರಿ ಮಾಸ್ ಆಗಿರೋ ಟಾಕ್ಸಿಕ್ ಸಿನಿಮಾ ಧುರಂಧರ್‌ನ ಅಡ್ಡಡ್ಡಾ ಮಲಗಿಸಿದ್ರೂ ಅಚ್ಚರಿಯಿಲ್ಲ ಅಂತಿದ್ದಾರೆ.

‘ಟಾಕ್ಸಿಕ್’ ಚಿತ್ರಕ್ಕೆ ರಾಜೀವ್ ರವಿ ಛಾಯಾಗ್ರಹಣವಿದೆ. ರವಿ ಬಸ್ರೂರ್‌ ಸಂಗೀತ ನೀಡಿದ್ದಾರೆ. ಕೆವಿಎನ್ ಪ್ರೊಡಕ್ಷನ್‌ ಹೌಸ್‌ನಲ್ಲಿ ‘ಟಾಕ್ಸಿಕ್’ ಮೂಡಿಬಂದಿದ್ದು ತಾರಾಗಣದಲ್ಲಿ ಯಶ್ ಜೊತೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಶಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಇದ್ದಾರೆ. ಗೀತು ಮೋಹನ್ ದಾಸ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಖುದ್ದು ಯಶ್ ಗೀತು ಜೊತೆ ಸೇರು ಸ್ಕ್ರಿಪ್ಟ್ ಬರೆದಿದ್ದಾರೆ. ಈ ಟೀಸರ್ ಜೊತೆಗೆ ಚಿತ್ರದ ತಂತ್ರಜ್ಞರು ಕಲಾವಿದರ ವಿವರ ಕೂಡ ರಿವೀಲ್ ಮಾಡಲಾಗಿದೆ.

ಒಟ್ಟಾರೆ 4 ವರ್ಷಗಳ ಕಾಲ ಕಾಯಿಸಿರೋ ಯಶ್, ಖಂಡಿತ ಅಷ್ಟು ವರ್ಷಗಳ ಹಸಿವನ್ನೂ ನೀಗಿಸೋ ಮಾಸ್ ಮಸಾಲ ಸಿನಿಮಾ ಕೊಡ್ತಾರೆ ಅನ್ನೋದು ಈ ಟೀಸರ್ ಮೂಲಕ ಪಕ್ಕಾ ಆಗಿದೆ. ಜೊತೆಗೆ ಬಾಲಿವುಡ್‌ಗೆ ರಾಯ ರಾಯಲ್ ಚಾಲೆಂಜ್ ಹಾಕಿದ್ದು, ಮೆಗಾ ಕ್ಲ್ಯಾಶ್‌ಗೆ ಮುನ್ನುಡಿ ಬರೆಯಲಾಗಿದೆ.

– ಫಿಲ್ಮ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್.



Source link

Leave a Reply

Your email address will not be published. Required fields are marked *