ಬಿಜೆಪಿ ಶಾಸಕ ಚಂದ್ರು ಲಮಾಣಿಚಿತ್ರ ಕ್ರೆಡಿಟ್ ಮೂಲ: tv9 ಕನ್ನಡ
ಗದಗ, ಫೆಬ್ರವರಿ 21: ಗುತ್ತಿಗೆದಾರನಿಂದ ಲಂಚ ಪಡೆಯುವಾಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದಿರುವಂತಹ ಘಟನೆ ನಡೆದಿದೆ. 11 ಲಕ್ಷ ರೂ. ಲಂಚ ಬೇಡಿಕೆ ಇಡಲಾಗಿತ್ತು, ಮುಂಗಡವಾಗಿ 5 ಲಕ್ಷ ರೂ. ಕಮಿಷನ್ ಪಡೆಯುವಾಗ ಶಾಸಕ ಸೇರಿದಂತೆ ಪಿಎಗಳಾದ ಮಂಜುನಾಥ್ ಮತ್ತು ಗುರು ಸಿಕ್ಕಿಬಿದ್ದಿದ್ದು, ಮೂವರನ್ನು ವಶಕ್ಕೆ ಪಡೆದು ಲೋಕಯುಕ್ತ ಪೊಲೀಸರಿಂದ ವಿಚಾರಣೆ ನಡೆಸಲಾಗುತ್ತಿದೆ.
ಮತ್ತಷ್ಟು ಮಾಹಿತಿ ಅಪ್ಡೇಟ್ ಆಗಲಿದೆ.