Headlines

ಪ್ರಧಾನಿ ಉದ್ಘಾಟಿಸಿದ ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ!

ಪ್ರಧಾನಿ ಉದ್ಘಾಟಿಸಿದ ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ!


ಕೋಲಾರ, ಫೆಬ್ರವರಿ 21: ಮಂಗಳವಾರ (ಫೆ.17) ಪ್ರಧಾನಿ ನರೇಂದ್ರ ಮೋದಿಯವರಿಂದ ದೇಶದ ಮೊದಲ ಮಿನಿ ಹೆಲಿಕಾಪ್ಟರ್ ಜೋಡಣಾ ಘಟಕವನ್ನು ಉದ್ಘಾಟಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನಿವಾಸಿಗಳ ನಿರ್ಲಕ್ಷ್ಯದ ವಿರುದ್ಧ ಜಿಲ್ಲೆಯ ವೇಮಗಲ್ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಕಿಡಿಕಾರಿದ್ದಾರೆ. ಅವರ ಹೇಳಿಕೆಗಳಿಂದ ವಿವಾದಗಳೆದ್ದಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಹೆಲಿಕಾಪ್ಟರ್ ಘಟಕದ ಉದ್ಘಾಟನಾ ಕಾರ್ಯಕ್ರಮಕ್ಕೆ ವೇಮಗಲ್ ಪಟ್ಟಣ ಪಂಚಾಯತ್ ಅಧ್ಯಕ್ಷರನ್ನು ಆಹ್ವಾನಿಸಲಾಗಿದೆ ಎಂದು ದೂರಿದ ಶಾಸಕ, ಕೈಗಾರಿಕಾ ಪ್ರದೇಶಕ್ಕೆ ಪ್ರತ್ಯೇಕ ಪೀಡರ್ ವ್ಯವಸ್ಥೆ ಮಾಡದೇ, ವೇಮಗಲ್‌ನಿಂದಲೇ ವಿದ್ಯುತ್ ಪೂರೈಕೆ ಮಾಡುತ್ತಿರುವುದರಿಂದ ಸ್ಥಳೀಯರಿಗೆ ತೊಂದರೆ ಉಂಟಾಗಿದೆ. ಇದೇ ರೀತಿಯಲ್ಲಿ ಮುಂದುವರಿದ ಕೈಗಾರಿಕೆಗಳಿಗೆ ನೀಡುತ್ತಿರುವ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಂತೆ ಒತ್ತಾಯಿಸಿದರು. ಸ್ಥಳೀಯ ಯುವಕರಿಗೆ ಕೇವಲ ತಳಮಟ್ಟದ ಕೆಲಸಗಳನ್ನು ನೀಡಿ, ಹೊರಗಿನವರಿಗೆ ಅಧಿಕಾರಿಗಳು ಹುದ್ದೆ ನೀಡುತ್ತಿರುವುದನ್ನೂ ಅವರು ಟೀಕಿಸಿದರು. ಈಗ ಅವರ ಈ ಎಲ್ಲಾ ಹೇಳಿಕೆಗಳಿಗೆ ವಿರೋಧವಾಗಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *