Headlines

‘ಹೆಂಡ್ತಿಗೆ ಹೊಡೆಯಿರಿ.. ಆದ್ರೆ ಮೂಳೆ ಮುರೀಬೇಡಿ..’ ಈ ದೇಶದ ಹೊಸ ಕಾನೂನಿಗೆ ಸ್ವರಾ ಭಾಸ್ಕರ್‌ ಕಿಡಿ! | Swara Bhasker Slams Taliban New Law On Wife Beating Afghanistan San

‘ಹೆಂಡ್ತಿಗೆ ಹೊಡೆಯಿರಿ.. ಆದ್ರೆ ಮೂಳೆ ಮುರೀಬೇಡಿ..’ ಈ ದೇಶದ ಹೊಸ ಕಾನೂನಿಗೆ ಸ್ವರಾ ಭಾಸ್ಕರ್‌ ಕಿಡಿ! | Swara Bhasker Slams Taliban New Law On Wife Beating Afghanistan San



‘ಹೆಂಡ್ತಿಗೆ ಹೊಡೆಯಿರಿ.. ಆದ್ರೆ ಮೂಳೆ ಮುರೀಬೇಡಿ..’ ಈ ದೇಶದ ಹೊಸ ಕಾನೂನಿಗೆ ಸ್ವರಾ ಭಾಸ್ಕರ್‌ ಕಿಡಿ! | Swara Bhasker Slams Taliban New Law On Wife Beating Afghanistan San

ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವು ಪತ್ನಿಯ ಮೂಳೆ ಮುರಿಯದಂತೆ ಅಥವಾ ಗಾಯಗಳಾಗದಂತೆ ಹೊಡೆಯುವುದನ್ನು ಕಾನೂನುಬದ್ಧಗೊಳಿಸುವ ವಿಚಿತ್ರ ಕಾನೂನನ್ನು ಜಾರಿಗೆ ತಂದಿದೆ. ಈ ಹೊಸ ದಂಡ ಸಂಹಿತೆಯು ಮಹಿಳೆಯರಿಗೆ ಗುಲಾಮರ ಸ್ಥಾನಮಾನ ನೀಡಿದೆ ಎಂದು ವಿಶ್ವಾದ್ಯಂತ ಟೀಕೆ ವ್ಯಕ್ತವಾಗಿದೆ.

ನವದೆಹಲಿ (ಫೆ.21): ಮುಸ್ಲಿಂ ದೇಶಗಳಲ್ಲಿ ಮಹಿಳೆಯರನ್ನು ಗುಲಾಮರಿಗಿಂತ ಕೀಳಾಗಿ ನಡೆಸಿಕೊಳ್ಳಲಾಗುತ್ತದೆ. ಅಲ್ಲಿ ಮಹಿಳೆಯರ ಅಸ್ತಿತ್ವಕ್ಕೆ ಯಾವುದೇ ಬೆಲೆಯಿಲ್ಲ. ಯಾವಾಗಲೂ ಮಹಿಳೆಯರಿಗಾಗಿ ವಿಚಿತ್ರ ಮತ್ತು ಗಂಡಸರ ಮನಸ್ಸಿಗೆ ಮುದ ನೀಡುವ ಕಾನೂನುಗಳನ್ನು ಮಾಡಲಾಗುತ್ತದೆ. ಈಗ ಮಾಡಿರುವ ಹೊಸ ಕಾನೂನಿನ ಅಡಿಯಲ್ಲಿ, ಗಂಡ ತನ್ನ ಹೆಂಡತಿಯನ್ನು ಹೊಡೆಯಬಹುದು ಮತ್ತು ಅದು ಯಾವುದೇ ರೀತಿಯ ಅಪರಾಧವಾಗುವುದಿಲ್ಲ. ಅಂಥ ಕಾನೂನನ್ನು ಈ ದೇಶ ರಚಿಸಿದೆ. ಜಗತ್ತಿನ ಯಾವ ದೇಶದಲ್ಲೂ ಇಲ್ಲದೇ ಇರುವ ಕಾನೂನನ್ನು ಅಫ್ಘಾನಿಸ್ತಾನದಲ್ಲಿ ಮಾಡಲಾಗಿದೆ.

ಹೌದು, ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವು ಇಂಥ ವಿಚಿತ್ರ ಕಾನೂನನ್ನು ತಂದಿದೆ. ಈಗ ಗಂಡ ತನ್ನ ಹೆಂಡತಿಯನ್ನು ಹೊಡೆಯುವುದು ಕಾನೂನುಬದ್ಧ. ಈ ಕಾನೂನನ್ನು ಪ್ರಪಂಚದಾದ್ಯಂತ ಚರ್ಚೆ ಮಾಡಲಾಗುತ್ತಿದೆ. ತಾಲಿಬಾನ್‌ನ ಈ ಕಾನೂನನ್ನು ಜನರು ವಿರೋಧಿಸುತ್ತಿರುವಾಗ, ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಕೂಡ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ. ಅಂತಹ ಕಾನೂನನ್ನು ಮಾಡಿದ ಜನರನ್ನು ಸ್ವರ ಅತ್ಯಂತ ಕ್ರೂರ ಹಾಗೂ ರಾಕ್ಷಸ ಮನಸ್ಥಿತಿಯುಳ್ಳ ವ್ಯಕ್ತಿಗಳು ಎಂದಿದ್ದಾರೆ.

ಹೊಸ ತಾಲಿಬಾನ್ ಕಾನೂನಿನ ಪ್ರಕಾರ, ಗಂಡನಿಗೆ ತನ್ನ ಹೆಂಡತಿಯನ್ನು ಹೊಡೆಯುವ ಸ್ವಾತಂತ್ರ್ಯ ನೀಡಲಾಗಿದೆ.ಆದರೆ, ಹೊಡೆಯುವಾಗ ಆತನ ಗಮನದಲ್ಲಿ ಇರಬೇಕಾದ ವಿಚಾರ ಒಂದೇ ಒಂದು. ಹೊಡೆಯುವಾಗ ಹೆಂಡತಿ ದೇಹದ ಮೂಳೆ ಮುರಿಯಬಾರದು ಮತ್ತು ಆಕೆಯ ಮೈಮೇಲೆ ಯಾವುದೇ ಗಾಯ ಗಾಯಗಳು ಕಾಣಬಾರದು. ಪತ್ನಿಯ ಮೈಮೇಲೆ ಯಾವುದೇ ಗಾಯವಾಗದೇ ಹೊಡೆಯುವುದು ತಾಲಿಬಾನ್‌ ಆಡಳಿತದಲ್ಲಿ ಇನ್ನು ಅಪರಾಧವಲ್ಲ. ಇಂಥದೊಂದು ವಿಚಿತ್ರ ಕಾನೂನುನ್ನು ಇತ್ತೀಚೆಗೆ ಜಾರಿಗೆ ತಂದಿದೆ.

ತಾಲಿಬಾನ್‌ ಹೊಸ ಕಾನೂನಿಗೆ ಸ್ವರಾ ಭಾಸ್ಕರ್‌ ಆಕ್ರೋಶ

ಹೊಸ ತಾಲಿಬಾನ್ ಕಾನೂನಿಗೆ ಪ್ರತಿಕ್ರಿಯೆ ನೀಡಿರುವ ಬಾಲಿವುಡ್‌ ನಟಿ ಸ್ವರಾ ಭಾಸ್ಕರ್ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿಯನ್ನು ಪೋಸ್ಟ್ ಮಾಡಿದ ಸ್ವರಾ, ‘ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ತಾಲಿಬಾನ್ ಮಾನವೀಯತೆಯ ಅತ್ಯಂತ ಅಸಹ್ಯಕರ ಉದಾಹರಣೆಗಳಲ್ಲಿ ಒಂದಾಗಿದೆ. ಕ್ರೂರ ಮತ್ತು ರಾಕ್ಷಸೀಯ… ಇದು ಮಾನವೀಯತೆ ಮತ್ತು ಅವರು ಪ್ರತಿನಿಧಿಸುವ ಧರ್ಮಕ್ಕೆ ಮಾಡಿದ ಅವಮಾನ. ಇದು ಸಂಪೂರ್ಣವಾಗಿ ಅಸಹ್ಯಕರ’ ಎಂದು ಬರೆದುಕೊಂಡಿದ್ದಾರೆ.

ತಾಲಿಬಾನ್ ತಮ್ಮ ನಾಯಕ ಹಿಬತುಲ್ಲಾ ಅಖುಂಡ್ಜಾಡಾ ಸಹಿ ಮಾಡಿದ 90 ಪುಟಗಳ ಹೊಸ ದಂಡ ಸಂಹಿತೆಯನ್ನು ಜಾರಿಗೆ ತಂದಿದೆ ಎಂಬ ಸುದ್ದಿ ಹೊರಬಿದ್ದಿರುವ ಸಮಯದಲ್ಲಿ ಸ್ವರಾ ಭಾಸ್ಕರ್ ಈ ಪ್ರತಿಕ್ರಿಯೆ ನೀಡಿದ್ದಾರೆ. ಇದರಲ್ಲಿ ಮಹಿಳೆಯರಿಗೆ ಗುಲಾಮರ ಸ್ಥಾನಮಾನ ನೀಡಲಾಗಿದೆ. ಅಷ್ಟೇ ಅಲ್ಲ, ಗಂಡನು ತನ್ನ ಹೆಂಡತಿಯನ್ನು ಹೊಡೆಯಬಹುದು. ಹೆಂಡತಿಯನ್ನು ತೀವ್ರವಾಗಿ ಥಳಿಸಿದರೆ, ಅವಳು ದೂರು ದಾಖಲಿಸಬಹುದು. ಆದರೆ ಮಹಿಳೆ ನ್ಯಾಯಾಲಯದಲ್ಲಿ ಇದಕ್ಕೆ ಪುರಾವೆಗಳನ್ನು ಒದಗಿಸಬೇಕಾಗುತ್ತದೆ.

ಮಹಿಳೆ ದೂರು ದಾಖಲಿಸಲು ಷರತ್ತು

ಹೊಸ ದಂಡ ಸಂಹಿತೆಯ ಪ್ರಕಾರ, ಮಹಿಳೆಯರಿಗೆ ಕೌಟುಂಬಿಕ ಹಿಂಸಾಚಾರದ ವಿರುದ್ಧ ದೂರು ದಾಖಲಿಸುವ ಹಕ್ಕನ್ನು ನೀಡಲಾಗಿದೆ, ಆದರೆ ಕೆಲವು ಕಠಿಣ ಷರತ್ತುಗಳನ್ನು ಸಹ ವಿಧಿಸಲಾಗಿದೆ. ಮಹಿಳೆ ತನ್ನ ಪತಿ ಅಥವಾ ಪೋಷಕರೊಂದಿಗೆ ನ್ಯಾಯಾಲಯಕ್ಕೆ ಬರಬೇಕಾಗುತ್ತದೆ… ನ್ಯಾಯಾಲಯಕ್ಕೆ ತನಗೆ ಆಗಿರುವ ಗಾಯಗಳನ್ನು ತೋರಿಸಬೇಕಾಗುತ್ತದೆ. ಹೆಂಡತಿ ತನ್ನ ಪತಿ ತನ್ನನ್ನು ಹೊಡೆದಿದ್ದಾನೆಂದು ಸಾಬೀತುಪಡಿಸಿದರೆ, ಗಂಡನಿಗೆ 15 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದು. ಯಾವುದೇ ಗೋಚರ ಗಾಯಗಳು ಮತ್ತು ಮೂಳೆ ಮುರಿತಗಳು ಇಲ್ಲದಿದ್ದರೆ, ಗಂಡನಿಗೆ ಯಾವುದೇ ಶಿಕ್ಷೆ ಇರೋದಿಲ್ಲ.



Source link

Leave a Reply

Your email address will not be published. Required fields are marked *