ಡಯಟ್ ಸೀಕ್ರೆಟ್ ಕೊನೆಗೂ ಹೇಳಿದ ರಶ್ಮಿಕಾ ಮಂದಣ್ಣ; ಎಲ್ಲಾ ಊಟಕ್ಕಿಂತ 'ಈ ಊಟ'ವೇ ಶ್ರೇಷ್ಠ ಎಂದ ಕನ್ನಡದ ಕುವರಿ!

ಡಯಟ್ ಸೀಕ್ರೆಟ್ ಕೊನೆಗೂ ಹೇಳಿದ ರಶ್ಮಿಕಾ ಮಂದಣ್ಣ; ಎಲ್ಲಾ ಊಟಕ್ಕಿಂತ 'ಈ ಊಟ'ವೇ ಶ್ರೇಷ್ಠ ಎಂದ ಕನ್ನಡದ ಕುವರಿ!

ಡಯಟ್ ಸೀಕ್ರೆಟ್ ಕೊನೆಗೂ ಹೇಳಿದ ರಶ್ಮಿಕಾ ಮಂದಣ್ಣ; ಎಲ್ಲಾ ಊಟಕ್ಕಿಂತ 'ಈ ಊಟ'ವೇ ಶ್ರೇಷ್ಠ ಎಂದ ಕನ್ನಡದ ಕುವರಿ!

ರಶ್ಮಿಕಾ ಒಬ್ಬ ಪಕ್ಕಾ ‘ಫೂಡಿ’. ಅವರಿಗೆ ಸಮತೋಲಿತ ಆಹಾರದ ಮೇಲೆ ನಂಬಿಕೆ ಇದೆ. ಬೆಳಿಗ್ಗೆ ಎದ್ದ ಕೂಡಲೇ ಅವರು ಆಪಲ್ ಸೈಡರ್ ವಿನೆಗರ್ ಕುಡಿಯುವುದನ್ನು ಮರೆಯುವುದಿಲ್ಲ. ಇದರ ರುಚಿ ಅವರಿಗೆ ಇಷ್ಟವಿಲ್ಲದಿದ್ದರೂ, ಆರೋಗ್ಯಕ್ಕಾಗಿ ತಪ್ಪದೇ ಸೇವಿಸುತ್ತಾರೆ. ಆದರೆ ಅದೊಂದು ಸೀಕ್ರೆಟ್ ತಪ್ಪದೇ ನೋಡಿ..

ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಸೌತ್ ಸುಂದರಿ ರಶ್ಮಿಕಾ ಮಂದಣ್ಣ (Rashmika Mandanna) ಅವರನ್ನು ಅಭಿಮಾನಿಗಳು ಪ್ರೀತಿಯಿಂದ ‘ನ್ಯಾಷನಲ್ ಕ್ರಶ್’ ಎಂದು ಕರೆಯುತ್ತಾರೆ. ರಶ್ಮಿಕಾ ಕೇವಲ ಅಭಿನಯಕ್ಕಷ್ಟೇ ಅಲ್ಲದೆ, ತಮ್ಮ ಅದ್ಭುತ ಮೈಕಟ್ಟು ಮತ್ತು ನಗುವಿನಿಂದಲೂ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಅಷ್ಟಕ್ಕೂ ‘ಪುಷ್ಪ’ ಖ್ಯಾತಿಯ ಈ ನಟಿಯ ಸದಾ ಲವಲವಿಕೆಯಿಂದ ಇರಲು ಮತ್ತು ಅಷ್ಟು ಫಿಟ್ ಆಗಿರಲು ಏನು ಮಾಡುತ್ತಾರೆ ಗೊತ್ತಾ? ಅವರ ಫಿಟ್ನೆಸ್ ಸೀಕ್ರೆಟ್ ಇಲ್ಲಿದೆ ನೋಡಿ.

ಮನೆಯ ಊಟವೇ ಶ್ರೇಷ್ಠ ಎಂದ ರಶ್ಮಿಕಾ:

ಸಾಮಾನ್ಯವಾಗಿ ನಟಿಯರು ಡಯಟ್ ಎಂದ ಕೂಡಲೇ ಅತಿ ಕಟ್ಟುನಿಟ್ಟಾದ ಆಹಾರ ಕ್ರಮ ಪಾಲಿಸುತ್ತಾರೆ ಎಂದು ನಾವು ಭಾವಿಸುತ್ತೇವೆ. ಆದರೆ ರಶ್ಮಿಕಾ ಅವರ ಪ್ರಕಾರ "ಮನೆಯ ಊಟವೇ ಶ್ರೇಷ್ಠ". ಅವರು ಪ್ರಪಂಚದ ಎಲ್ಲಾ ರೀತಿಯ ಡಯಟ್ ಪ್ಲಾನ್‌ಗಳನ್ನು ಪ್ರಯತ್ನಿಸಿ ನೋಡಿದ್ದಾರಂತೆ, ಆದರೆ ಅಂತಿಮವಾಗಿ ಅವರಿಗೆ ತೃಪ್ತಿ ಮತ್ತು ಪೋಷಣೆ ನೀಡಿದ್ದು ನಾವು ಬೆಳೆದು ಬಂದ ‘ಮನೆಯ ಊಟ’ (Ghar ka khana) ಮಾತ್ರವಂತೆ.

ರಶ್ಮಿಕಾ ಒಬ್ಬ ಪಕ್ಕಾ ‘ಫೂಡಿ’. ಅವರಿಗೆ ಸಮತೋಲಿತ ಆಹಾರದ ಮೇಲೆ ನಂಬಿಕೆ ಇದೆ. ಬೆಳಿಗ್ಗೆ ಎದ್ದ ಕೂಡಲೇ ಅವರು ಆಪಲ್ ಸೈಡರ್ ವಿನೆಗರ್ ಕುಡಿಯುವುದನ್ನು ಮರೆಯುವುದಿಲ್ಲ. ಇದರ ರುಚಿ ಅವರಿಗೆ ಇಷ್ಟವಿಲ್ಲದಿದ್ದರೂ, ಆರೋಗ್ಯಕ್ಕಾಗಿ ತಪ್ಪದೇ ಸೇವಿಸುತ್ತಾರೆ. ಇನ್ನು ದಕ್ಷಿಣ ಭಾರತದ ಊಟವೆಂದರೆ ಇವರಿಗೆ ಪಂಚಪ್ರಾಣ. ಮಧ್ಯಾಹ್ನದ ಊಟದಲ್ಲಿ ಅವರು ಅನ್ನದ ಬದಲು ತರಕಾರಿಗಳಿಂದ ಕೂಡಿದ ವಿವಿಧ ಸಾಂಬಾರ್ ಅಥವಾ ಪಲ್ಯಗಳನ್ನು ಮಿಕ್ಸ್ ಮಾಡಿ ತಿನ್ನುವುದನ್ನು ಇಷ್ಟಪಡುತ್ತಾರೆ.

ಸಿಹಿ ತಿಂಡಿಗಳೆಂದರೆ ಬಲು ಇಷ್ಟ:

ಸದಾ ಡಯಟ್ ಎಂದು ಉಪವಾಸ ಇರುವವರಲ್ಲ ರಶ್ಮಿಕಾ. ವಾರಾಂತ್ಯದಲ್ಲಿ ಅವರು ಸುಶಿ, ಸೂಪ್ ನೂಡಲ್ಸ್ ಮತ್ತು ತಮಗೆ ಇಷ್ಟವಾದ ಸಿಹಿ ತಿಂಡಿಗಳನ್ನು ಸವಿಯುತ್ತಾರೆ. ಅವರಿಗೆ ಚಾಕೊಲೇಟ್, ಐಸ್ ಕ್ರೀಮ್ ಮತ್ತು ಡೆಸರ್ಟ್‌ಗಳೆಂದರೆ ಸಖತ್ ಇಷ್ಟ. ಆದರೆ ಅದನ್ನು ಮಿತವಾಗಿ ಸೇವಿಸುವುದನ್ನು ಮತ್ತು ಜೀರ್ಣಿಸಿಕೊಳ್ಳಲು ವರ್ಕೌಟ್ ಮಾಡುವುದನ್ನು ಅವರು ಮರೆಯುವುದಿಲ್ಲ. ಅವರ ಅಂದದ ಮುಖದ ಹೊಳಪಿಗೆ ಮುಖ್ಯ ಕಾರಣ ‘ಹೈಡ್ರೇಶನ್’. ಅವರು ಎಲ್ಲೇ ಹೋದರೂ ತಮ್ಮ ನೀರಿನ ಬಾಟಲಿಯನ್ನು ಜೊತೆಗೆ ಕೊಂಡೊಯ್ಯುತ್ತಾರೆ.

ಕಿಕ್ ಬಾಕ್ಸಿಂಗ್ ಮತ್ತು ಕಠಿಣ ವರ್ಕೌಟ್:

ರಶ್ಮಿಕಾ ಅವರ ಕಟ್ಟುಮಸ್ತಾದ ಮೈಕಟ್ಟಿನ ಹಿಂದೆ ಕಠಿಣ ಪರಿಶ್ರಮವಿದೆ. ಅವರು ಪ್ರತಿ ದಿನವೂ ಜಿಮ್‌ನಲ್ಲಿ ಬೆವರುತ್ತಾರೆ. ಅವರು ತಮ್ಮ ವರ್ಕೌಟ್‌ನಲ್ಲಿ ‘ಕಿಕ್ ಬಾಕ್ಸಿಂಗ್’ಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಇದು ಕೇವಲ ತೂಕ ಇಳಿಸಲು ಮಾತ್ರವಲ್ಲದೆ, ಮಾನಸಿಕ ಒತ್ತಡ ಕಡಿಮೆ ಮಾಡಲು ಮತ್ತು ದೇಹದ ಚಟುವಟಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಅವರು ನಂಬುತ್ತಾರೆ.

"ಎಷ್ಟೇ ಕೆಲಸವಿದ್ದರೂ, ಯಾವುದೇ ಪರಿಸ್ಥಿತಿಯಲ್ಲೂ ನಾನು ವರ್ಕೌಟ್ ಮಾಡುವುದನ್ನು ನಿಲ್ಲಿಸುವುದಿಲ್ಲ" ಎಂದು ಅವರು ಈ ಹಿಂದೆ ಹೇಳಿದ್ದರು. ಅವರ ಫಿಟ್ನೆಸ್ ಕೇವಲ ಬಾಹ್ಯ ರೂಪಕ್ಕಲ್ಲ, ಬದಲಾಗಿ ದೇಹದ ನಮ್ಯತೆ (Flexibility) ಮತ್ತು ಬಲವನ್ನು ಹೆಚ್ಚಿಸುವುದಕ್ಕಾಗಿ ಎಂಬುದು ಅವರ ಅಭಿಪ್ರಾಯ.

ಒಟ್ಟಿನಲ್ಲಿ, ಸಮತೋಲಿತ ಆಹಾರ, ಮನೆಯ ಊಟ ಮತ್ತು ನಿಯಮಿತ ವ್ಯಾಯಾಮವೇ ರಶ್ಮಿಕಾ ಮಂದಣ್ಣ ಅವರ ಗ್ಲಾಮರ್ ಹಿಂದಿರುವ ನಿಜವಾದ ಗುಟ್ಟು. ವಿಜಯ್ ದೇವರಕೊಂಡ ಅವರೊಂದಿಗೆ ಮದುವೆಯ ಸುದ್ಧಿ ಹರಿದಾಡುತ್ತಿರುವ ಈ ಸಮಯದಲ್ಲಿ, ರಶ್ಮಿಕಾ ಅವರ ಈ ಫಿಟ್ನೆಸ್ ಮಂತ್ರಗಳು ಫ್ಯಾನ್ಸ್ ಪಾಲಿಗೆ ಸ್ಪೂರ್ತಿಯಾಗಿವೆ.

Source link

Leave a Reply

Your email address will not be published. Required fields are marked *