ಕಾಸ್ಮೆಟಿಕ್ ಸರ್ಜರಿ ನಡೆಸಿದ ನಾಲ್ಕೇ ದಿನಕ್ಕೆ 20ರ ಹರೆಯದ ಇನ್‌ಫ್ಲುಯೆನ್ಸರ್ ಸಾವು, ವೈದ್ಯರ ಎಚ್ಚರಿಕೆ

ಕಾಸ್ಮೆಟಿಕ್ ಸರ್ಜರಿ ನಡೆಸಿದ ನಾಲ್ಕೇ ದಿನಕ್ಕೆ 20ರ ಹರೆಯದ ಇನ್‌ಫ್ಲುಯೆನ್ಸರ್ ಸಾವು, ವೈದ್ಯರ ಎಚ್ಚರಿಕೆ

ಕಾಸ್ಮೆಟಿಕ್ ಸರ್ಜರಿ ನಡೆಸಿದ ನಾಲ್ಕೇ ದಿನಕ್ಕೆ 20ರ ಹರೆಯದ ಇನ್‌ಫ್ಲುಯೆನ್ಸರ್ ಸಾವು, ವೈದ್ಯರ ಎಚ್ಚರಿಕೆ

ಕಾಸ್ಮೆಟಿಕ್ ಸರ್ಜರಿ ನಡೆಸಿದ ನಾಲ್ಕೇ ದಿನಕ್ಕೆ 20ರ ಹರೆಯದ ಇನ್‌ಫ್ಲುಯೆನ್ಸರ್ ಸಾವು, ಸೌಂಧರ್ಯ ವರ್ಧಕಕ್ಕಾಗಿ ಪಡೆದ ಚಿಕಿತ್ಸೆ ಈಕೆಗೆ ಮಳುವಾಗಿದೆ. ಇದರ ಬೆನ್ನಲ್ಲೇ ವೈದ್ಯರು ಮಹತ್ವದ ಎಚ್ಚರಿಕೆ ನೀಡಿದ್ದಾರೆ.

ಸೌಂದರ್ಯ ವರ್ಧಕ ಚಿಕಿತ್ಸೆ, ಔಷಧಿಗಳು ಮಾರಕವಾಗುತ್ತಿರುವುದು ಹೊಸದೇನಲ್ಲ. ಹಲವರು ಸೌಂದರ್ಯ ವರ್ಧಕ ಮೊರೆ ಹೋಗಿ ಪಡಬಾರದ ಕಷ್ಟ ಪಟ್ಟಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾ ಮೂಲಕ ತನ್ನ ಸೌಂದರ್ಯ ಹಾಗೂ ಮೈಮಾಟದ ಮೂಲಕ ಭಾರಿ ಫಾಲೋವರ್ಸ್ ಹೊಂದಿದ್ದ 20 ಹರೆಯದ ಮಾಡೆಲ್ ಸೌಂದರ್ಯ ವೃದ್ಧಿಸಲು ಹೋಗಿ ಸಾವು ಕಂಡಿದ್ದಾರೆ.

ಈ ಇನ್‌ಫ್ಲುಯೆನ್ಸರ್ ವಯಸ್ಸು ಕೇವಲ 20. ಬ್ರೆಜಿಲ್‌ನ ಜನಪ್ರಿಯ ಇನ್‌ಫ್ಲುಯೆನ್ಸರ್ ಬಿಯಾನ್ಕ ಡಿಯಾಸ್ ಸೋಶಿಯಲ್ ಮೀಡಿಯಾ ಮೂಲಕ ಭಾರಿ ಜನಪ್ರಿಯತೆ ಪಡೆದಿದ್ದರು. ಫೋಟೋಸ್, ವಿಡಿಯೋಗಳನ್ನು ಹಂಚಕೊಂಡು ಹಲವರ ನಿದ್ದಿಗೆಡಿಸಿದ್ದರು. ಆದರೆ ಜನವರಿ ತಿಂಗಳಲ್ಲಿ ಈಕೆ ಸೌಂದರ್ಯ ಇನ್ನೂ ಹೆಚ್ಚಾಗಬೇಕು ಎಂದು ಬಯಸಿದ್ದಾಳೆ. ಇದೇ ಈಕೆಗೆ ಮುಳುವಾಗಿದೆ.

ಡಿಸೆಂಬರ್ 2025, ಜನವರಿ ತಿಂಗಳಲ್ಲಿ ಈಕೆ ಸೋಶಿಯಲ್ ಮೀಡಿಯೂ ಮೂಲಕ ಸತತವಾಗಿ ಪೋಸ್ಟ್ ಹಾಕಿ ಫಾಲೋವರ್ಸ್ ಮೆಚ್ಚುಗೆಗೆ ಪಾತ್ರರಾಗಿದ್ದರು. ತನ್ನ ಸೌಂದರ್ಯಕ್ಕೆ ಮತ್ತಷ್ಟು ಮೆರೆಗು ನೀಡಲು ಈಕೆ ಕೆಲ ದಿನಗಳ ಹಿಂದೆ ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಿದ್ದಾರೆ. ಇದಾದ ಬಳಿಕ ಈಕೆ ಆರೋಗ್ಯ ಕ್ಷೀಣಿಸಿದೆ. ಇದೀಗ ಬಿಯಾನ್ಕಾ ಡಿಯಾಸ್ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಬ್ರೆಜಿಲ್ ಇನ್‌ಫ್ಲುಯೆನ್ಸರ್ ಸಾವಿಗೆ ನಿಖರ ಕಾರಣ ಬಹಿರಂಗವಾಗಿಲ್ಲ. ಆದರೆ ಆಕೆಯ ಅಭಿಮಾನಿಗಳು, ಫಾಲೋವರ್ಸ್ ಸಾವಿಗೆ ಕಾಸ್ಮೆಟಿಕ್ ಸರ್ಜರಿ ಕಾರಣ ಎಂದಿದ್ದಾರೆ. ಕಾಸ್ಮೆಟಿಕ್ ಸರ್ಜರಿ ಬಳಿಕ ಬ್ರೆಜಿಲ್ ಇನ್‌ಫ್ಲುಯೆನ್ಸರ್ ಚೇತರಿಸಿಕೊಂಡಿಲ್ಲ. ಒಂದೇ ಒಂದು ಪೋಸ್ಟ್ ಹಾಕಿಲ್ಲ. ಇದೇ ಈಕೆ ಜೀವನಕ್ಕೆ ಮಳುವಾಗಿದೆ ಎಂದಿದ್ದಾರೆ.

ಕಾಸ್ಮೆಟಿಕ್ ಸರ್ಜರಿಗಳು ಅಪಾಯಕಾರಿ. ಈ ಸರ್ಜರಿ ಮಾಡುವ ಮೊದಲು ನುರಿತ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು. ಅವರ ಮಾರ್ಗದರ್ಶನ ಸಲಹೆಯಂತೆ ನಡೆದುಕೊಳ್ಳಬೇಕು ಎಂದಿದ್ದಾರೆ. ಎಲ್ಲರಿಗೂ ಎಲ್ಲಾ ಕಾಸ್ಮೆಟಿಕ್ ಸರ್ಜರಿಗಳು ಹೊಂದಿಕೆಯಾಗುವುದಿಲ್ಲ. ಬ್ಲಡ್ ಕ್ಲಾಟ್ ಸೇರಿದಂತೆ ಹಲವು ಸಮಸ್ಯೆಗಳು ಎದುರಾದರೆ ಜೀವಕ್ಕೆ ಅಪಾಯ ಎಂದು ವೈದ್ಯರು ಎಚ್ಚರಿಸಿದ್ದಾರೆ.

Source link

Leave a Reply

Your email address will not be published. Required fields are marked *