Bitter Gourd Deathಹಾಗಲಕಾಯಿ ಸಾರಿಗೆ ಕೆರಳಿ ಕೆಂಡ, ಅಮ್ಮನ ಬಡಿದುಕೊಂಡು ಉಪ್ಪಿನಕಾಯಿ ನೆಕ್ಕಿ ಎರಡು ಪೆಗ್ ಏರಿಸಿದ ಮಗ | Son Kills Mother After Argument Over Bitter Gourd Meal Maharashtra Arrested

Bitter Gourd Deathಹಾಗಲಕಾಯಿ ಸಾರಿಗೆ ಕೆರಳಿ ಕೆಂಡ, ಅಮ್ಮನ ಬಡಿದುಕೊಂಡು ಉಪ್ಪಿನಕಾಯಿ ನೆಕ್ಕಿ ಎರಡು ಪೆಗ್ ಏರಿಸಿದ ಮಗ | Son Kills Mother After Argument Over Bitter Gourd Meal Maharashtra Arrested



Bitter Gourd Deathಹಾಗಲಕಾಯಿ ಸಾರಿಗೆ ಕೆರಳಿ ಕೆಂಡ, ಅಮ್ಮನ ಬಡಿದುಕೊಂಡು ಉಪ್ಪಿನಕಾಯಿ ನೆಕ್ಕಿ ಎರಡು ಪೆಗ್ ಏರಿಸಿದ ಮಗ | Son Kills Mother After Argument Over Bitter Gourd Meal Maharashtra Arrested

ಹಾಗಲಕಾಯಿ ಸಾರಿಗೆ ಕೆರಳಿ ಕೆಂಡ, ಅಮ್ಮನ ಬಡಿದುಕೊಂಡು ಉಪ್ಪಿನಕಾಯಿ ನೆಕ್ಕಿ ಎರಡು ಪೆಗ್ ಏರಿಸಿದ ಮಗ,  ಆಕ್ರೋಶ, ನಶೆಯಲ್ಲಿ ತಾಯಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಮಗನ ಬಲವಾದ ಹೊಡೆತಕ್ಕೆ 65ರ ಹರೆಯದ ತಾಯಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. 

ಚಂದ್ರಾಪುರ (ಫೆ.21) ಮಗನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದ ತಾಯಿ ಹಾಗಲಕಾಯಿ ಸಾರು ಮಾಡಿದ್ದಾಳೆ. ಆದರೆ ಕಹಿಯಾಗಿರುವ ಹಾಗಲಾಯಿಕಾಯಿ ಸಾರು ನನಗೆ ಬಡಿಸುತ್ತಿಯಾ ಎಂದು ಮಗ ಕೆರಳಿ ಕೆಂಡವಾಗಿದ್ದಾನೆ. ಮೊದಲೇ ನಶೆಯಲ್ಲಿದ್ದ ಮಗನ ಕೋಪಕ್ಕೆ ತಾಯಿ ಅಪ್ಪಚ್ಚಿಯಾಗಿದ್ದಾಳೆ. ಮುಖ, ತಲೆಗೆ ಕೊಟ್ಟ ಪಂಚ್,ಕಾಲಿನಿಂದ ಎರಡು ಕಿಕ್. ಇಷ್ಟಕ್ಕೆ 65ರ ಹರೆಯದ ತಾಯಿ ಸ್ಥಳದಲ್ಲ ಉಸಿರು ಚೆಲ್ಲಿದ್ದಾಳೆ. ತಾಯಿಯ ಕೊಂದರೂ ಈತನ ಕೋಪ ಆರಿಲ್ಲ. ಅಡುಗೆ ಕೋಣೆಯಲ್ಲಿದ್ದ ಉಪ್ಪಿನ ಕಾಯಿ ನೆಕ್ಕಿ ಮತ್ತೆರೆಡು ಪೆಗ್ ಏರಿಸಿ ಕುಳಿತ ಘಟನೆ ಮಹಾರಾಷ್ಟ್ರದ ಡೊಂಗರಗಾಂವ್ ಗ್ರಾಮದಲ್ಲಿ ನಡೆದಿದೆ.

37ರ ಹರೆಯದ ಜಗದೀಶ್ ಪೆಟ್ಕುಲೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಕ್ರೂರಿ ಮಗನ ಹೊಡೆತಕ್ಕೆ 65ರ ಹರೆಯದ ಈತನ ತಾಯಿ ಸುಮಿತ್ರ ಅಮಾನುಷವಾಗಿ ಮೃತಪಟ್ಟಿದ್ದಾರೆ. ಜಗದೀಶ್ ಪೆಟ್ಕುಲೆಯ ಅತಿಯಾದ ಕುಡಿತ ಜೀವನವನ್ನೇ ಸರ್ವನಾಶ ಮಾಡಿದೆ. ಕುಡಿದು ಬಂದು ಪತ್ನಿಗೆ ಹೊಡೆಯುತ್ತಿದ್ದ ಜಗದೀಶನಿಗೆ ಕೆಲವು ಬಾರಿ ಪಂಚಕಜ್ಜಾಯ ನೀಡಲಾಗಿತ್ತು. ಸ್ಛಳೀಯರು ಪತ್ನಿಯ ಕುಟುಂಬಸ್ಥರು ಆಗಮಿಸಿ ನಾಲ್ಕು ಬಾರಿಸಿದ್ದರು. ಎರಡು ತಿಂಗಳ ಹಿಂದೆ ಈ ಜಗದೀಶನ ಕುಡಿತ, ಹೊಡತಕ್ಕೆ ಬೇಸತು ತವರಿಗೆ ವಾಪಾಸ್ಸಾಗಿದ್ದಳು.

ಕಳೆದ ಎರಡು ತಿಂಗಳಿನಿಂದ ತಾಯಿ ಜೊತೆಯಲ್ಲಿದ್ದ ಜಗದೀಶ ತನ್ನ ಕುಡಿತ ನಿಲ್ಲಿಸಿರಲಿಲ್ಲ. ಕುಡಿದು ಬಂದು ತಾಯಿ ಜೊತೆಗೆ ವಾಗ್ವಾದ , ಜಗಳ ಮಾಡುತ್ತಿದ್ದ. ಮಗನ ಪರಿಸ್ಥಿತಿ ನೋಡಿ ಪ್ರತಿ ದಿನ ತಾಯಿ ಕಣ್ಮೀರು ಹಾಕುತ್ತಿದ್ದರು. ಹೀಗೆ ಶುಕ್ರವಾರಿ (ಫೆ.20) ಜಗದೀಶ ಮದ್ಯದ ನಶೆಯಲ್ಲಿ ಮನೆಗೆ ಆಗಮಿಸಿದ್ದಾನೆ. ಊಟಕ್ಕೆ ಬಡಿಸಲು ಹೇಳಿದ್ದಾನೆ. ಇದರಂತೆ ಮರು ಮಾತನಾಡದೇ ತಾಯಿ ಸುಮಿತ್ರ ಮಗನಿಗೆ ಊಟ ಬಡಿಸಿದ್ದಾಳೆ. ಆದರೆ ಸಾರು ನೋಡಿ ಉರಿದು ಬಿದ್ದಿದ್ದಾನೆ. ಹಾಗಲಕಾಯಿ ಸಾರು ಯಾಕೆ ಮಾಡಿದ್ದೀಯಾ, ಇದನ್ನು ಯಾರಾದರು ತಿನ್ನುತ್ತಾರಾ, ಕಹಿ ಸಾರು ತಿನ್ನುವುದು ಹೇಗೆ ಎಂದು ಗದರಿದ್ದಾನೆ. ಬೇರೆ ಯಾವ ತರಕಾರಿಯೂ ಇರಲಿಲ್ಲ. ಹಾಗಾಗಿ ಇದು ಮಾಡಿದೆ ಎಂದು ಉತ್ತರ ನೀಡಿ ಮಗನ ಸಮಾಧಾನಿಸಲು ಪ್ರಯತ್ನಿಸಿದ್ದಾರೆ. ಆದರೆ ಜಗದೀಶನ ಆಕ್ರೋಶ ಹೆಚ್ಚಾಗಿದೆ.

ತಾಯಿ ಮೇಲೆ ಎಗರಿದ ಮಗ

ಊಟದ ತಟ್ಟೆ, ಸಾರು ಕೈಯಿಂದ ದೂರ ತಳ್ಳಿದ್ದಾನೆ. ಮೊದಲೇ ಕುಡಿತದ ನಶೆಯಲ್ಲಿದ್ದ. ಕುಳಿತಲ್ಲಿಂದ ಎದ್ದು ತಾಯಿ ಮೇಲೆ ಏಕಾಏಕಿ ದಾಳಿ ಮಾಡಿದ್ದಾನೆ. ಕೈಯಿಂದ ನಾಲ್ಕು ಪಂಚ್ ನೀಡಿದ್ದಾರೆ. ಬಳಿಕ ಕಾಲಿನಿಂದ ಒದ್ದಿದ್ದಾನೆ. ಅಷ್ಟರಲ್ಲೇ ತಾಯಿ ಸುಮಿತ್ರಿ ನೆಲಕ್ಕೆ ಕುಸಿದು ಬಿದ್ದಿದ್ದಾಳೆ. ಕೆಲವೇ ನಿಮಿಷದಲ್ಲಿ ಸುಮಿತ ಪ್ರಾಣ ಪಕ್ಷಿ ಹಾರಿ ಹೋಗಿದೆ. ಇಷ್ಟಾದರೂ ಈತನ ಕೋಪ ತಣ್ಣಗಾಗಿಲ್ಲ. ಹಾಗಲಕಾಯಿ ಸಾರು ಬಿಟ್ಟರೆ ಮನೆಯಲ್ಲಿ ಬೇರೆ ಯಾವ ಪದಾರ್ಥಗಳು ಇರಲಿಲ್ಲ. ಅಡುಕೋಣೆಯಲ್ಲಿದ್ದ ಉಪ್ಪಿನಕಾಯಿ ನೆಕ್ಕಿ ಬಾಕಿ ಉಳಿದಿದ್ದ ಎರಡು ಪೆಗ್ ಹಾಕಿದ್ದಾನೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಜಗದೀಶನ ಅರೆಸ್ಟ್ ಮಾಡಿದ್ದಾರೆ. ಇತ್ತ ಸುಮಿತ್ರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.



Source link

Leave a Reply

Your email address will not be published. Required fields are marked *