Karnataka CM ಕನಕ್ಲೂಷನ್‌ಗೆ ಬಂದಿದ್ದೇವೆ, ಕರ್ನಾಟಕ ಅಧಿಕಾರ ಗೊಂದಲ ಕುರಿತು ಮಲ್ಲಿಕಾರ್ಜುನ ಖರ್ಗೆ ಬಿಗ್ ಅಪ್‌ಡೇಟ್ | We Reached Conclusion Mallikarjun Kharge Breaks Silence On Karnataka Leadership Change

Karnataka CM ಕನಕ್ಲೂಷನ್‌ಗೆ ಬಂದಿದ್ದೇವೆ, ಕರ್ನಾಟಕ ಅಧಿಕಾರ ಗೊಂದಲ ಕುರಿತು ಮಲ್ಲಿಕಾರ್ಜುನ ಖರ್ಗೆ ಬಿಗ್ ಅಪ್‌ಡೇಟ್ | We Reached Conclusion Mallikarjun Kharge Breaks Silence On Karnataka Leadership Change



Karnataka CM ಕನಕ್ಲೂಷನ್‌ಗೆ ಬಂದಿದ್ದೇವೆ, ಕರ್ನಾಟಕ ಅಧಿಕಾರ ಗೊಂದಲ ಕುರಿತು ಮಲ್ಲಿಕಾರ್ಜುನ ಖರ್ಗೆ ಬಿಗ್ ಅಪ್‌ಡೇಟ್ | We Reached Conclusion Mallikarjun Kharge Breaks Silence On Karnataka Leadership Change

ಕನಕ್ಲೂಷನ್‌ಗೆ ಬಂದಿದ್ದೇವೆ, ಕರ್ನಾಟಕ ಅಧಿಕಾರ ಗೊಂದಲ ಕುರಿತು ಮಲ್ಲಿಕಾರ್ಜುನ ಖರ್ಗೆ ಬಿಗ್ ಅಪ್‌ಡೇಟ್, ದೆಹಲಿಯಲ್ಲಿ ಸತೀಶ್ ಜಾರಕಿಹೊಳಿ ಹಾಗೂ ಖರ್ಗೆ ಭೇಟಿ ಬೆನ್ನಲ್ಲೇ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. 

ನವದೆಹಲಿ (ಫೆ.21) ಕರ್ನಾಟಕ ಕಾಂಗ್ರೆಸ್ ಆಡಳಿತದಲ್ಲಿ ಕಳೆದ ಹಲವು ದಿನಗಳಿಂದ ಅಧಿಕಾರ ಹಸ್ತಾಂತರ ಮಾತುಗಳು ಕೇಳಿಬರುತ್ತಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಂಬಲಿಗರು ಒಂದೊಂದು ಹೇಳಿಕೆ ನೀಡಿ ಗೊಂದಲ ಹೆಚ್ಚಿಸಿದ್ದಾರೆ. ಹಲವರು ಬಾರಿ ಏನಿಲ್ಲಾ ಏನಿಲ್ಲಾ ಎಂದಿದ್ದರೂ ಈ ಗೊಂದಲ ಮಾತ್ರ ಮುಂದುವರಿದಿತ್ತು. ಇತ್ತ ಕಾಂಗ್ರೆಸ್ ಹೈಕಮಾಂಡ್ ಕೂಡ ಸ್ಪಷ್ಟವಾಗಿ ಯಾವುದೇ ಉತ್ತರ ನೀಡದೆ ಒನ್ ಟು ಒನ್ ಮಾತುಕತೆಯಲ್ಲಿ ಸಮಸ್ಯೆ ಬಗೆಹರಿಸುವ ಯತ್ನ ಮಾಡಿತ್ತು. ಇದೇ ಮೊದಲ ಬಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರ್ನಾಟಕ ಅಧಿಕಾರ ಗೊಂದಲ ಕುರಿತು ಮಹತ್ವದ ಅಪ್‌ಡೇಟ್ ನೀಡಿದ್ದಾರೆ.

ನಾವು ಕನ್‌ಕ್ಲೂಷನ್ ಬಂದಿದ್ದೇವೆ

ನವೆ ದಹೆಲಿಯಲ್ಲಿ ಇಂದು ಸಚಿವ ಸತೀಶ್ ಜಾರಕಿಹೊಳಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಒನ್ ಟು ಒನ್ ಚರ್ಚೆ ನಡೆಸಿದ್ದಾರೆ. ಈ ಚರ್ಚೆ ಬೆನ್ನಲ್ಲೇ ಮಹತ್ವದ ಮಾಹಿತಿಗಳು ಹೊರಬಿದ್ದಿದೆ. ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಗೊಂದಲದ ವಾತಾವರಣದಿಂದ ಕಾಂಗ್ರೆಸ್ ಪಕ್ಷ ಹಾಗೂ ಕಾರ್ಯಕರ್ತರು ಸಮಸ್ಯೆಗೆ ಸಿಲುಕಿಕೊಳ್ಳುತ್ತಿದ್ದಾರೆ. ಹೀಗಾಗಿ ಗೊಂದಲಕ್ಕೆ ಅಂತ್ಯಹಾಡುವಂತೆ ಸತೀಶ್ ಜಾರಕಿಗೊಳಿ ಕಾಂಗ್ರೆಸ್ ಹೈಕಮಾಂಡ್ ಬಳಿ ಮನವಿ ಮಾಡಿದೆ. ಈ ಕುರಿತು ಚರ್ಚಿಸಿದ ಖರ್ಗೆ, ನಾವು ಕನ್‌ಕ್ಲೂಷನ್‌ಗೆ ಬಂದಿದ್ದೇವೆ ಎಂದಿದ್ದಾರೆ. ಈ ಗೊಂದಲ ನಿವಾರಣೆಗೆ ಚರ್ಚೆಯಾಗಿದೆ. ಈ ಕುರಿತು ಯಾರೂ ಆತಂಕಪಡುವ ಅಗತ್ಯವಿಲ್ಲ. ಕರ್ನಾಟಕ ಗೊಂದಲ ನಿವಾರಣೆ ಕುರಿತು ಗಂಭೀರ ಚರ್ಚೆ ಹೈಕಮಾಂಡ್ ನಡೆಸಿದೆ. ಎಲ್ಲವೂ ಅಂತಿಮವಾಗಿದೆ ಎಂದು ಖರ್ಗೆ, ಜಾರಕಿಹೊಳಿಗೆ ಹೇಳಿದ್ದಾರೆ.

ಸಿಎಂ ಹಾಗೂ ಡಿಸಿಎಂಗೆ ಶೀಘ್ರದಲ್ಲೇ ಹೈಕಮಾಂಡ್ ಬುಲಾವ್

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ಗೆ ಹೈಕಮಾಂಡ್ ಶೀಘ್ರದಲ್ಲೇ ಬುಲಾವ್ ನೀಡಲಿದೆ. ಕರ್ನಾಟಕ ಬಜೆಟ್‌ಗೂ ಮುನ್ನವೇ ಇಬ್ಬರನ್ನು ಕರೆಯಿಸಿ ಹೈಕಮಾಂಡ್ ಸಮ್ಮುಖದಲ್ಲಿ ಮಾತನಾಡುವ ಸಾಧ್ಯತೆ ಇದೆ. ಒಂದೇ ವೇದಿಕೆಯಲ್ಲಿ ಕೂರಿಸಿ ಮಹತ್ವದ ಮಾತುಕತೆ ನಡೆಸಲು ಹೈಕಮಾಂಡ್ ಮಂದಾಗಿದೆ. ಇತ್ತೀಚೆಗೆ ಡಿಕೆ ಶಿವಕುಮಾರ್, ವಿರೋಧ ಪಕ್ಷ ನಾಯಕ , ಕಾಂಗ್ರೆಸ್ ಪ್ರಮುಖ ನಾಯಕ ರಾಹುಲ್ ಗಾಂಧಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ವೇಳೆಯೂ ಇದೇ ಮಾತು ಹೇಳಲಾಗಿತ್ತು.

ಖರ್ಗೆ ಜೊತೆಗಿನ ಸತೀಶ್ ಜಾರಕಿಹೊಳಿ ಮಾತಕತೆ ಫಲಪ್ರದವಾಗಿ ಎಂದು ಹೇಳಲಾಗುತ್ತಿದೆ. ವಿಳಂಬ ನೀತಿಯಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ ಎಂದಿದ್ದಾರೆ. ಈ ಕುರಿತು ಈಗಾಗಲೇ ಗಂಭೀರವಾಗಿ ಹೈಕಮಾಂಡ್ ಚರ್ಚಿಸಿದೆ ಎಂದಿದ್ದಾರೆ



Source link

Leave a Reply

Your email address will not be published. Required fields are marked *