Toxic: ‘ರಾಯ’ನ ಜೊತೆ ಎಂಟ್ರಿ ಕೊಟ್ಟ ‘ಟಿಕೆಟ್’! ಯಶ್ ಹಳೇ ವಿಡಿಯೋಗೂ ಸಿನಿಮಾಗೂ ಇದೆಯೇ ನಂಟು? | Another Role Name Ticket Also Revealed As One Is Raya In Of The Film Yash Toxic Movie

Toxic: ‘ರಾಯ’ನ ಜೊತೆ ಎಂಟ್ರಿ ಕೊಟ್ಟ ‘ಟಿಕೆಟ್’! ಯಶ್ ಹಳೇ ವಿಡಿಯೋಗೂ ಸಿನಿಮಾಗೂ ಇದೆಯೇ ನಂಟು? | Another Role Name Ticket Also Revealed As One Is Raya In Of The Film Yash Toxic Movie



Toxic: ‘ರಾಯ’ನ ಜೊತೆ ಎಂಟ್ರಿ ಕೊಟ್ಟ ‘ಟಿಕೆಟ್’! ಯಶ್ ಹಳೇ ವಿಡಿಯೋಗೂ ಸಿನಿಮಾಗೂ ಇದೆಯೇ ನಂಟು? | Another Role Name Ticket Also Revealed As One Is Raya In Of The Film Yash Toxic Movie

ಯಶ್ ಅವರ ಹಳೆಯ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಯಶ್ ಅವರು ತಮ್ಮ ಶಿಕ್ಷಣ ಮುಗಿಸಿದ ಬಳಿಕ ಅತಿಥಿಯಾಗಿ ವೇದಿಕೆ ಮೇಲೆ ಬಂದಾಗ ಡಾನ್ಸ್ ಮಾಡಿದ್ದ ವಿಡಿಯೋ ಅದು. ಅಚ್ಚರಿಯ ವಿಷಯವೆಂದರೆ, ಅಷ್ಟು ಹಳೆಯ ವಿಡಿಯೋ ಈಗ ಯಾಕೆ ಇಷ್ಟೊಂದು ಸದ್ದು ಮಾಡುತ್ತಿದೆ?

‘ಟಾಕ್ಸಿಕ್’ ಲೋಕದಲ್ಲಿ ರಾಕಿ ಭಾಯ್ ಅಬ್ಬರ:

ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಟೀಸರ್ ಬಿಡುಗಡೆಯಾದಾಗಿನಿಂದ ಇಡೀ ಸಿನಿಮಾ ಲೋಕವೇ ದಂಗಾಗಿದೆ. ಕೆಜಿಎಫ್ ನಂತರ ಇಡೀ ವಿಶ್ವವೇ ಯಶ್ ಅವರ ಮುಂದಿನ ಹೆಜ್ಜೆಗಾಗಿ ಕಾಯುತ್ತಿತ್ತು, ಈಗ ಆ ಸಮಯ ಬಂದೇ ಬಿಟ್ಟಿದೆ. ಟಾಲಿವುಡ್, ಬಾಲಿವುಡ್ ಮಾತ್ರವಲ್ಲದೆ ಹಾಲಿವುಡ್ ಕೂಡ ನಿಬ್ಬೆರಗಾಗುವಂತೆ ಟೀಸರ್ ಮೂಡಿಬಂದಿದ್ದು, ಕನ್ನಡ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ರಾಮಾಚಾರಿಯ ಹಠ ಈಗ ಸಫಲವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಟೀಸರ್‌ನಲ್ಲಿ ಯಶ್ ಅವರ ಖದರ್ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

ಸಿನಿಮಾದ ಕುರಿತು ಕುತೂಹಲ ಕೆರಳಿಸಿರುವ ಪ್ರಮುಖ ಅಂಶವೆಂದರೆ ಯಶ್ ಅವರ ಪಾತ್ರಗಳು. ಈ ಸಿನಿಮಾದಲ್ಲಿ ಯಶ್ ಡಬಲ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಈಗಾಗಲೇ ಪಕ್ಕಾ ಆಗಿದೆ. ಇದರಲ್ಲಿ ಒಂದು ಪಾತ್ರದ ಹೆಸರು ‘ರಾಯ’ ಎಂಬುದು ಈ ಮೊದಲೇ ರಿವೀಲ್ ಆಗಿತ್ತು. ಆದರೆ ಟೀಸರ್ ಅಂತ್ಯದಲ್ಲಿ ಸಣ್ಣ ಹುಡುಗನಂತೆ ಕಾಣುವ ಯಶ್ ಅವರ ಮತ್ತೊಂದು ಪಾತ್ರದ ಹೆಸರು ಮಾತ್ರ ನಿಗೂಢವಾಗಿತ್ತು. ಇದೀಗ ಯಶ್ ಅವರೇ ಈ ಸಸ್ಪೆನ್ಸ್ ಅನ್ನು ಬ್ರೇಕ್ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಎರಡನೇ ಪಾತ್ರದ ಹೆಸರು ‘ಟಿಕೆಟ್’ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.

ಟೀಸರ್ ಹಲ್ ಚಲ್

ಇತ್ತ ಟೀಸರ್ ಹಲ್ ಚಲ್ ಎಬ್ಬಿಸುತ್ತಿರುವಾಗಲೇ, ಸಾಮಾಜಿಕ ಜಾಲತಾಣಗಳಲ್ಲಿ ಯಶ್ ಅವರ ಹಳೆಯ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಯಶ್ ಅವರು ತಮ್ಮ ಶಿಕ್ಷಣ ಮುಗಿಸಿದ ಬಳಿಕ ಅತಿಥಿಯಾಗಿ ವೇದಿಕೆ ಮೇಲೆ ಬಂದಾಗ ಡಾನ್ಸ್ ಮಾಡಿದ್ದ ವಿಡಿಯೋ ಅದು. ಅಚ್ಚರಿಯ ವಿಷಯವೆಂದರೆ, ಅಷ್ಟು ಹಳೆಯ ವಿಡಿಯೋ ಈಗ ಯಾಕೆ ಇಷ್ಟೊಂದು ಸದ್ದು ಮಾಡುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಸ್ವತಃ ‘ಟಾಕ್ಸಿಕ್’ ಟೀಸರ್‌ನಲ್ಲೇ ಅಡಗಿದೆ. ಈ ವಿಡಿಯೋಗೂ ಸಿನಿಮಾದ ಸೀನ್‌ಗೂ ಒಂದು ಸಣ್ಣ ಲಿಂಕ್ ಸಿಕ್ಕಿದೆ ಎನ್ನುತ್ತಿದ್ದಾರೆ ನೆಟ್ಟಿಗರು.

ಹೌದು, ಟೀಸರ್‌ನ ಕೊನೆಯಲ್ಲಿ ಯಶ್ ಅವರು ಯಂಗ್ ಲುಕ್‌ನಲ್ಲಿ ಕಾಣಿಸಿಕೊಂಡು ತಮ್ಮದೇ ಸ್ಟೈಲ್‌ನಲ್ಲಿ ಒಂದು ಡಾನ್ಸ್ ಸ್ಟೆಪ್ ಹಾಕುತ್ತಾರೆ. ಈ ಡಾನ್ಸ್ ಸ್ಟೆಪ್ ಮೈಸೂರಿನ ಮಹಾರಾಜ ಕಾಲೇಜಿನ ವೇದಿಕೆ ಮೇಲೆ ಯಶ್ ಹಾಕಿದ್ದ ಅದೇ ಸಿಗ್ನೇಚರ್ ಸ್ಟೆಪ್ ಆಗಿದೆ! ಕಾಲೇಜು ದಿನಗಳಲ್ಲಿ ಯಶ್ ಕುಣಿದಿದ್ದ ಅದೇ ಸ್ಟೆಪ್ ಅನ್ನು ಈಗ ಟಾಕ್ಸಿಕ್ ಸಿನಿಮಾದಲ್ಲೂ ಬಳಸಿಕೊಳ್ಳಲಾಗಿದೆ. ಇದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದು, ಚಿತ್ರದ ಕಥೆಗೂ ಯಶ್ ಅವರ ನೈಜ ಜೀವನದ ಹಳೆ ದಿನಗಳಿಗೂ ಅಥವಾ ಮೈಸೂರಿನ ಕಾಲೇಜು ಜೀವನಕ್ಕೂ ಏನಾದರೂ ಸಂಬಂಧ ಇದೆಯೇ ಎಂಬ ಚರ್ಚೆ ಶುರುವಾಗಿದೆ.

ಟೀಸರ್‌ನಲ್ಲಿ ಯಂಗ್ ಲುಕ್

ಒಟ್ಟಾರೆಯಾಗಿ, ಯಶ್ ಪ್ರತಿಯೊಂದು ಹೆಜ್ಜೆಯಲ್ಲೂ ಏನಾದರೂ ಒಂದು ವಿಶೇಷತೆಯನ್ನು ಉಳಿಸಿಕೊಳ್ಳುತ್ತಾರೆ ಎಂಬುದಕ್ಕೆ ಈ ‘ಡಾನ್ಸ್ ಸ್ಟೆಪ್’ ಸಾಕ್ಷಿಯಾಗಿದೆ. ಟೀಸರ್‌ನಲ್ಲಿ ಯಂಗ್ ಲುಕ್ ನೋಡಿ ಖುಷಿಯಾಗಿದ್ದ ಫ್ಯಾನ್ಸ್‌ಗೆ ಈಗ ‘ಟಿಕೆಟ್’ ಎಂಬ ಹೆಸರು ಕೂಡ ಸಿಕ್ಕಿದೆ. ಯಶ್ ಅವರ ಈ ಹೊಸ ಅವತಾರಗಳು ಮತ್ತು ಸಿನಿಮಾದ ಗುಪ್ತ ಸುಳಿವುಗಳು ಚಿತ್ರದ ಮೇಲಿನ ನಿರೀಕ್ಷೆಯನ್ನು ಆಕಾಶದ ಎತ್ತರಕ್ಕೆ ಕೊಂಡೊಯ್ದಿವೆ. ಒಟ್ಟಿನಲ್ಲಿ ‘ಟಾಕ್ಸಿಕ್’ ಸಿನೆಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆಯುವುದಂತೂ ಖಂಡಿತ.

Scroll to load tweet…



Source link

Leave a Reply

Your email address will not be published. Required fields are marked *