CBSE Exam: ಮ್ಯಾಥ್ಸ್ ಪೇಪರ್ ಟಫ್ ಇತ್ತು, ಸಿಬಿಎಸ್‌ನಿಂದ ಮೋಸ ಎಂದು ವಿದ್ಯಾರ್ಥಿಗಳ ಆಕ್ರೋಶ | Cbse Basic Maths Paper Sparks Outrage Students Claim It Was Tougher Than Standard

CBSE Exam: ಮ್ಯಾಥ್ಸ್ ಪೇಪರ್ ಟಫ್ ಇತ್ತು, ಸಿಬಿಎಸ್‌ನಿಂದ ಮೋಸ ಎಂದು ವಿದ್ಯಾರ್ಥಿಗಳ ಆಕ್ರೋಶ | Cbse Basic Maths Paper Sparks Outrage Students Claim It Was Tougher Than Standard



CBSE Exam: ಮ್ಯಾಥ್ಸ್ ಪೇಪರ್ ಟಫ್ ಇತ್ತು, ಸಿಬಿಎಸ್‌ನಿಂದ ಮೋಸ ಎಂದು ವಿದ್ಯಾರ್ಥಿಗಳ ಆಕ್ರೋಶ | Cbse Basic Maths Paper Sparks Outrage Students Claim It Was Tougher Than Standard

CBSE Exam: ಮ್ಯಾಥ್ಸ್ ಪೇಪರ್ ಟಫ್ ಇತ್ತು, ಸಿಬಿಎಸ್‌ನಿಂದ ಮೋಸ ಎಂದು ವಿದ್ಯಾರ್ಥಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಟ್ಯಾಂಡರ್ಡ್’ ಪೇಪರ್‌ಗಿಂತ ‘ಬೇಸಿಕ್’ ಪೇಪರೇ ಹೆಚ್ಚು ಟಫ್ ಇತ್ತು ಎಂದಿದ್ದಾರೆ. 

ನವದೆಹಲಿ (ಫೆ.21) ಶೈಕ್ಷಣಿಕ ವರ್ಷದಲ್ಲಿ ಇದು ಪರೀಕ್ಷೆ ಸಮಯ. ಎಲ್ಲಾ ತರಗತಿಗಳ ವಿದ್ಯಾರ್ಥಿಗಳು ಪರೀಕ್ಷೆ ತಯಾರಿಯಲ್ಲಿದ್ದಾರೆ. ಇತ್ತ ಸಿಬಿಎಸ್‌ಇ 10ನೇ ತರಗತಿ ಬೋರ್ಡ್ ಪರೀಕ್ಷೆಗಳು ಶುರುವಾಗಿವೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳು ಸಿಬಿಎಸ್ಇ ಬೋರ್ಡ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ವಿದ್ಯಾರ್ಥಿಗಳ ಜೊತೆ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ ‘ಮ್ಯಾಥಮ್ಯಾಟಿಕ್ಸ್ ಬೇಸಿಕ್’ ಆಯ್ಕೆ ಮಾಡಿಕೊಂಡಿದ್ದ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ಅನಿರೀಕ್ಷಿತವಾಗಿ ಕಠಿಣವಾಗಿತ್ತು ಅನ್ನೋದು ಪ್ರಮುಖ ದೂರಾಗಿದೆ. ಅನೇಕ ವಿದ್ಯಾರ್ಥಿಗಳು ‘ಮ್ಯಾಥಮ್ಯಾಟಿಕ್ಸ್ ಸ್ಟ್ಯಾಂಡರ್ಡ್’ ಪೇಪರ್‌ಗಿಂತ ‘ಬೇಸಿಕ್’ ಪೇಪರೇ ಹೆಚ್ಚು ಕಷ್ಟವಾಗಿತ್ತು ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

ವಿದ್ಯಾರ್ಥಿನಿಯ ಆಕ್ರೋಶ

@onlypratikhya ಇನ್‌ಸ್ಟಾಗ್ರಾಮ್ ಖಾತೆಯಿಂದ ವಿದ್ಯಾರ್ಥಿನಿಯೊಬ್ಬರು ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋದಲ್ಲಿ, ತಾನು ಪರೀಕ್ಷೆಗಾಗಿ ಓದಿದ ಪುಸ್ತಕಗಳನ್ನೆಲ್ಲಾ ಆಕೆ ತೋರಿಸಿದ್ದಾಳೆ. ಇಷ್ಟೆಲ್ಲಾ ತಯಾರಿ ನಡೆಸಿದರೂ, ತಾನು ಓದಿದ ವಿಷಯಗಳು ಪರೀಕ್ಷೆಯಲ್ಲಿ ಬರಲೇ ಇಲ್ಲ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ.

ಸಿಬಿಎಸ್ಇ ಮೋಸ

ಸಿಬಿಎಸ್‌ಇ ನಮಗೆ ಮೋಸ ಮಾಡಿದೆ. ನಾನು ಎರಡು ತಿಂಗಳು ಕಷ್ಟಪಟ್ಟು ಓದಿದ್ದೆ, ಆದರೆ ಅದರಿಂದ ಏನೂ ಪ್ರಯೋಜನ ಆಗಲಿಲ್ಲ. ಸ್ಟ್ಯಾಂಡರ್ಡ್ ಪೇಪರ್‌ಗಿಂತ ಬೇಸಿಕ್ ಪೇಪರೇ ಕಷ್ಟವಾಗಿತ್ತು. ಈಗ ನಾವು ಮಾಡರೇಟ್ ಆಗಿ ಪೇಪರ್ ತಿದ್ದುತ್ತಾರೆ ಅಂತ ಮಾತ್ರ ನಿರೀಕ್ಷೆ ಇಟ್ಟುಕೊಂಡಿದ್ದೇವೆ’ ಎಂದು ವಿದ್ಯಾರ್ಥಿನಿ ವಿಡಿಯೋದಲ್ಲಿ ಹೇಳಿದ್ದಾರೆ. ‘ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದೇ ರೀತಿ ಅನೇಕ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳ ಮೇಲಿನ ಓದಿನ ಹೊರೆ ಕಡಿಮೆ ಮಾಡಲು ಸಿಬಿಎಸ್‌ಇ 2019ರಲ್ಲಿ ಗಣಿತ ವಿಷಯದಲ್ಲಿ ಎರಡು ಹಂತದ ಪರೀಕ್ಷೆಗಳನ್ನು ಪರಿಚಯಿಸಿತ್ತು. ಮುಂದೆ ಪಿಯುಸಿಯಲ್ಲಿ (ಪ್ಲಸ್ ಒನ್, ಪ್ಲಸ್ ಟು) ಗಣಿತವನ್ನು ಮುಖ್ಯ ವಿಷಯವಾಗಿ ಓದಲು ಇಷ್ಟಪಡುವ ವಿದ್ಯಾರ್ಥಿಗಳಿಗೆ ‘ಮ್ಯಾಥಮ್ಯಾಟಿಕ್ಸ್ ಸ್ಟ್ಯಾಂಡರ್ಡ್’ ಪರೀಕ್ಷೆ ಇರುತ್ತದೆ. ಇದು ಸ್ವಲ್ಪ ಅಪ್ಲಿಕೇಷನ್ ಆಧಾರಿತವಾಗಿರುತ್ತದೆ.

ಭವಿಷ್ಯದಲ್ಲಿ ಗಣಿತವನ್ನು ಒಂದು ವಿಷಯವಾಗಿ ಓದಲು ಆಸಕ್ತಿ ಇಲ್ಲದವರಿಗಾಗಿ ‘ಮ್ಯಾಥಮ್ಯಾಟಿಕ್ಸ್ ಬೇಸಿಕ್’ ಪರೀಕ್ಷೆ ಇದೆ. ಇದು ತುಲನಾತ್ಮಕವಾಗಿ ಸುಲಭವಾಗಿರುತ್ತೆ ಎಂದು ಬೋರ್ಡ್ ತಿಳಿಸಿತ್ತು. ಎರಡೂ ಪರೀಕ್ಷೆಗಳಿಗೆ ಒಂದೇ ಪಠ್ಯಕ್ರಮವಿದ್ದರೂ, ‘ಬೇಸಿಕ್’ ಪೇಪರ್ ಕಷ್ಟವಾಗಿದ್ದು ವಿದ್ಯಾರ್ಥಿಗಳ ಮೇಲೆ ದೊಡ್ಡ ಪರಿಣಾಮ ಬೀರಿದೆ. ಮುಂಬರುವ ದಿನಗಳಲ್ಲಿ ಬೋರ್ಡ್ ಈ ಬಗ್ಗೆ ಏನಾದರೂ ಸ್ಪಷ್ಟನೆ ನೀಡುತ್ತದೆಯೇ ಎಂದು ವಿದ್ಯಾರ್ಥಿಗಳು ಎದುರು ನೋಡುತ್ತಿದ್ದಾರೆ.



Source link

Leave a Reply

Your email address will not be published. Required fields are marked *