ಬಿಜೆಪಿ ಶಾಸಕ ಚಂದ್ರು ಲಮಾಣಿ ಚಿತ್ರ ಕ್ರೆಡಿಟ್ ಮೂಲ: ಮನಿ ಕಂಟ್ರೋಲ್
ಗದಗ, ಫೆಬ್ರವರಿ 21: ಗುತ್ತಿಗೆದಾರರು ರಾಜ್ಯ ಸರ್ಕಾರದ ವಿರುದ್ಧ ಕೆರಳಿದ್ದಾರೆ. ಕಮಿಷನ್ ದಂಧೆ ಜೋರಾಗಿದೆ ಅಂತ ಆರೋಪ ಮಾಡುತ್ತಿದ್ದಾರೆ. ಇದನ್ನೇ ಬಿಜೆಪಿ ನಾಯಕರು ಅಸ್ತ್ರ ಮಾಡ್ಕೊಂಡು ವಾಗ್ದಾಳಿ ಮಾಡುತ್ತಿದ್ದಾರೆ. ಇಂತಹ ಹೊತ್ತಲ್ಲಿ ಗದಗ ಜಿಲ್ಲೆಯ ಶಿರಹಟ್ಟಿಯ ಬಿಜೆಪಿ ಶಾಸಕ ಚಂದ್ರು ಲಮಾಣಿ (ಚಂದ್ರು ಲಮಾಣಿ)ಗುತ್ತಿಗೆದಾರನಿಂದ ಕಮಿಷನ್ ಪಡೆಯುತ್ತಿರುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸದ್ಯ ಇದು ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಫೆ.18ರಂದೇ ಲೋಕಾಯುಕ್ತಕ್ಕೆ ಗುತ್ತಿಗೆದಾರ ವಿಜಯರಾಜ ಎಸ್ ಪೂಜಾರ ದೂರು ನೀಡಿದ್ದರು. ಜೊತೆಗೆ ಚಂದ್ರು ಲಮಾಣಿ ಧಮ್ಕಿ ಹಾಕಿದ್ದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಗುತ್ತಿಗೆದಾರ ನೀಡಿದ್ದ ದೂರಿನಲ್ಲೇನಿದೆ?
ಫೆಬ್ರವರಿ 18ರಂದು ಗದಗ ಜಿಲ್ಲೆಯ ಗದಗ ತಾಲೂಕಿನ ಚಿಂಚಲಿ ಗ್ರಾಮದ ಪ್ರಥಮ ದರ್ಜೆ ಸಿವಿಲ್ ಗುತ್ತಿಗೆದಾರ ವಿಜಯರಾಜ ಎಸ್.ಎಸ್.ಗದಗ ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದರು. ವಿವಿಧ ಇಲಾಖೆಗಳ ಗುತ್ತಿಗೆ ಕಾಮಗಾರಿಗಳು ನಡೆಯುತ್ತಿವೆ, 2025ರ ಜುಲೈ ತಿಂಗಳಿನಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಲಕ್ಷ್ಮೀಶ್ವರ ತಾಲೂಕು ಸಂಕದಾಳ ಗ್ರಾಮದಲ್ಲಿ ಹಳ್ಳಕ್ಕೆ ತಡೆಗೋಡೆ ನಿರ್ಮಿಸುವ ಎರಡು ಕಾಮಗಾರಿಗಳಿಗೆ ಆದೇಶ ನೀಡಲಾಗಿದೆ.
ಇದನ್ನೂ ಓದಿ: ಗದಗ: 11 ಲಕ್ಷ ರೂ. ಗುತ್ತಿಗೆದಾರನಿಂದ ಲಂಚ ಪಡೆಯುವಾಗ ಲೋಕ ಬಲೆಗೆ ಬಿದ್ದ ಬಿಜೆಪಿ ಶಾಸಕ
ಈ ಕಾಮಗಾರಿಗಳನ್ನು ಶಿರಹಟ್ಟಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂಎಲ್ ಎ ಚಂದ್ರು ಲಮಾಣಿ ತೊಂದರೆ ಮಾಡುತ್ತಿದ್ದು, ಫಿರ್ಯಾದಿದಾರರು ಅವರಿಗೆ ಬೇಟಿಯಾದ ಶಾಸಕರು ಅವರ ಪಿ.ಎ. ಮಂಜುನಾಥ್ ವಾಲ್ಮೀಕಿ ಮತ್ತು ಶಾಸಕರ ಸಂಬಂಧಿ ಗುರು ಲಮಾಣಿ ಗುತ್ತಿಗೆದಾರರಿಗೆ ಈ ಎರಡು ಕಾಮಗಾರಿಗಳನ್ನು ತಿಳಿಸದೇ ಏಕೆ ನೀಡುತ್ತಿದ್ದಾರೆ, ಈ ಟೆಂಡರ್ ರದ್ದುಪಡಿಸುತ್ತೇವೆ. 12% ಕಮಿಷನ್ ಕೊಟ್ಟರೆ ಮಾತ್ರ ನಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಲು ಬಿಡುತ್ತೇವೆ. ಇಲ್ಲದಿದ್ದರೆ ರೌಡಿಗಳನ್ನು ಕಳುಹಿಸಿ ಬುದ್ದಿ ಕಲಿಸುತ್ತೇವೆ ಎಂದು ಧಮಕಿ ಹಾಕಲಾಗುವುದು ಹಾಗೂ ಎರಡು ಕಾಮಗಾರಿಗಳಿಗೆ 11 ಲಕ್ಷ ರೂ.
ಈ ಬಗ್ಗೆ ಫಿರ್ಯಾದಿದಾರರು ನೀಡಿದ ದೂರಿನ ಗದಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನನ್ವಯ ಇಂದು ಮಧ್ಯಾಹ್ನ 02 ಗಂಟೆಯ ಸುಮಾರಿಗೆ ಫಿರ್ಯಾದಿದಾರರಿಂದ ಮೇಲ್ಕಂಡ ಮೂರು ಜನ ಆಪಾದಿತರು ಲಂಚದ ಹಣವಾಗಿ 5 ಲಕ್ಷ ರೂಗಳನ್ನು ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು, ದಸ್ತಗಿರಿ ಆಗಿರುತ್ತಾರೆ.
ಇದನ್ನೂ ಓದಿ: ಸರ್ 12 ಬೇಡ.. 11 ಪರ್ಸೆಂಟ್ ಸಾಕು: ಕಮಿಷನ್ ಪಡೆಯುವಾಗಲೇ ಬಿಜೆಪಿ ಶಾಸಕ ಲಾಕ್, ಇಲ್ಲಿದೆ ಎಕ್ಸ್ ಕ್ಲೂಸಿವ್ ವಿಡಿಯೋ
ಈ ಪ್ರಕರಣದಲ್ಲಿ ಎಡಿಜಿಪಿ ಮನೀಷ ಕರ್ಕರ್, ಐಜಿಪಿ ಸುಬ್ರಹ್ಮಣೇಶ್ವರ ರಾವ್, ಎಸ್.ಟಿ.ಸಿದ್ದಲಿಂಗಪ್ಪ, ಎಸ್.ಪಿ. ಕರ್ನಾಟಕ ಲೋಕಾಯುಕ್ತ ಧಾರವಾಡ ರವರ ಮಾರ್ಗದರ್ಶನದಲ್ಲಿ ಗದಗ ಮತ್ತು ಧಾರವಾಡ ಲೋಕಾಯುಕ್ತ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಸಿದ್ದು, ಸದ್ಯ ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.