ಬಿಗ್ಬಾಸ್ ಖ್ಯಾತಿಯ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಅವರ ಎಐ ನಿರ್ಮಿತ ಮದುವೆ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ ಗಿಲ್ಲಿ ನಟ, ಅಚ್ಚರಿ ವ್ಯಕ್ತಪಡಿಸುವುದರ ಜೊತೆಗೆ ವಿಡಿಯೋ ಮಾಡಿದವರ ಶ್ರಮವನ್ನು ಶ್ಲಾಘಿಸಿದ್ದಾರೆ.

ಗಿಲ್ಲಿ ನಟ ಮತ್ತು ಕಾವ್ಯಾ ಶೈವ (Bigg Boss Gilli Nata and Kavya Shaiva) ಈ ಬಾರಿಯ ಬಿಗ್ಬಾಸ್ನಲ್ಲಿ ಭಾರಿ ಸೌಂಡ್ ಮಾಡಿದವರು. ಇವರಿಬ್ಬರ ಜೋಡಿಯನ್ನು ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು.

ಬಿಗ್ಬಾಸ್ ನಡೆಯುತ್ತಿದ್ದ ಸಮಯದಲ್ಲಿಯೇ ಇವರಿಬ್ಬರ ಮದುವೆ ವಿಡಿಯೋ ವೈರಲ್ ಆಗಿದ್ದವು. ಇವರಿಬ್ಬರಿಗೂ ಮಗು ಆದ್ರೆ ಹೇಗಿರತ್ತೆ ಎಂದೂ ಎಐ ಮೂಲಕ ವಿಡಿಯೋ ಮಾಡಿ ಹರಿಬಿಟ್ಟಿದ್ದರು.

ಇದೀಗ, ಗಿಲ್ಲಿ ನಟ ಸಂದರ್ಶನವೊಂದರ ಸಮಯದಲ್ಲಿ ಈ ವಿಡಿಯೋ ನೋಡಿ ಶಾಕ್ ಆಗಿದ್ದಾರೆ. ಇದು ಎಐ ಅನ್ನಿಸ್ತನೇ ಇಲ್ಲ. ನಿಜವಾಗಿಯೂ ಮದ್ವೆ ಆದ ಹಾಗಿದೆ ಎಂದಿದ್ದಾರೆ. ಆದರೆ ಇದೇ ವೇಳೆ ಖುಷಿ ಪಟ್ಟುಕೊಂಡಿರುವ ಅವರು, ಅಯ್ಯಯ್ಯೋ ನಮಗಾಗಿ ಇಷ್ಟೊಂದು ಟೈಂ ಕೊಟ್ಟು ವಿಡಿಯೋ ಮಾಡಿದ್ದು ನೋಡಿ ಸಕತ್ ಖುಷಿಯಾಯ್ತು ಎಂದಿದ್ದಾರೆ.

ವಿಡಿಯೋ ಬಗ್ಗೆ ಯಾವುದೇ ಬೇಸರವನ್ನು ಅವರು ವ್ಯಕ್ತಪಡಿಸಿಲ್ಲ. ಅಥವಾ ವಿಡಿಯೋ ಮಾಡಿದವರಿಗೆ ಏನೂ ಹೇಳಲಿಲ್ಲ. ಆದರೆ, ಅವರು ಪಟ್ಟಿರುವ ಶ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು ಗಿಲ್ಲಿ ನಟ.

ಅಷ್ಟಕ್ಕೂ ಗಿಲ್ಲಿ ನಟ ಇಷ್ಟು ಬೇಗ ತಾವು ಮದುವೆಯಾಗುವುದಿಲ್ಲ ಎಂದಿದ್ದಾರೆ. ಹುಡುಗಿ ಯಾರು ಏನು ಎತ್ತ ಎನ್ನುವುದು ಆಮೇಲೆ ನಿರ್ಧಾರ ಆಗುತ್ತದೆ. ಸದ್ಯ ಮಾಡಲು ಬೇಕಾದಷ್ಟು ಕೆಲಸ ಇದೆ ಎಂದು ಹೇಳಿದ್ದಾರೆ.

ಆದರೆ, ಅವರ ಅಭಿಮಾನಿಗಳು ಮಾತ್ರ ಕಾವ್ಯಾ ಶೈವ ಮತ್ತು ಗಿಲ್ಲಿ ನಟನ ಮದುವೆ ಮಾಡದೇ ಬಿಡುವಂತೆ ಕಾಣಿಸುತ್ತಿಲ್ಲ ಅವರಿಬ್ಬರ ಜೋಡಿ ಅಷ್ಟು ಇಷ್ಟ ಆಗಿಬಿಟ್ಟಿದೆ ಫ್ಯಾನ್ಸ್ಗೆ.

Source link
ಕಾವ್ಯಾ ಜೊತೆ ತನ್ನದೇ ಮದ್ವೆ, ಮಗು ವಿಡಿಯೋ ನೋಡಿ ಗಿಲ್ಲಿ ನಟ ಫುಲ್ ಶಾಕ್: ಏನ್ ಹೇಳಿದ್ರು ನೋಡಿ!