Karna ಕಾಪಾಡಲು ಹೀರೊಯಿನ್ಸ್​ ಕರೆಸಿದ್ರಿ: ನೀವ್​ ಕೊಟ್ಟ ಟಿಪ್ಸ್​ನಿಂದ ಎಡವಟ್ಟಾದ್ರೆ ಇವ್ರೇ ಬರ್ತಾರಾ? ವೀಕ್ಷಕರು ಗರಂ

Karna ಕಾಪಾಡಲು ಹೀರೊಯಿನ್ಸ್​ ಕರೆಸಿದ್ರಿ: ನೀವ್​ ಕೊಟ್ಟ ಟಿಪ್ಸ್​ನಿಂದ ಎಡವಟ್ಟಾದ್ರೆ ಇವ್ರೇ ಬರ್ತಾರಾ? ವೀಕ್ಷಕರು ಗರಂ

Karna ಕಾಪಾಡಲು ಹೀರೊಯಿನ್ಸ್​ ಕರೆಸಿದ್ರಿ: ನೀವ್​ ಕೊಟ್ಟ ಟಿಪ್ಸ್​ನಿಂದ ಎಡವಟ್ಟಾದ್ರೆ ಇವ್ರೇ ಬರ್ತಾರಾ? ವೀಕ್ಷಕರು ಗರಂ
ಕರ್ಣ ಧಾರಾವಾಹಿಯಲ್ಲಿ ಆಸ್ಪತ್ರೆಯಲ್ಲಿ ರೋಗಿಗಳ ಪ್ರಾಣದ ಜೊತೆ ಚೆಲ್ಲಾಟ ಆಡುವ ದೃಶ್ಯವನ್ನು ತೋರಿಸಿದ್ದಕ್ಕೆ ವೀಕ್ಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿವಾದದ ನಡುವೆಯೇ, ಜೈಲು ಪಾಲಾದ ಕರ್ಣನನ್ನು ರಕ್ಷಿಸಲು ಬೇರೆ ಸೀರಿಯಲ್‌ಗಳ ನಾಯಕಿಯರು ಎಂಟ್ರಿ ಕೊಟ್ಟಿದ್ದು, ಕಥೆ ರೋಚಕ ತಿರುವು ಪಡೆದಿದೆ.
ಕರ್ಣ ಸೀರಿಯಲ್​ (Karna Serial​) ವಿರುದ್ಧ ಇದೀಗ ವೀಕ್ಷಕರ ಆಕ್ರೋಶ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ, ಅಗತ್ಯಕ್ಕಿಂತ ಹೆಚ್ಚಾಗಿ ಒಳ್ಳೆಯವನಾಗಿರುವ ನಾಯಕ ಕರ್ಣ ಜೈಲಿಗೆ ಹೋದ ಅಂತಲ್ಲ, ಬದಲಿಗೆ ರೋಗಿಗಳ ಜೊತೆ ಚೆಲ್ಲಾಟ ಆಡುವಂಥ ದೃಶ್ಯಗಳನ್ನು ಪ್ರಸಾರ ಮಾಡಿರುವುದಕ್ಕಾಗಿ.

ಕರ್ಣನ ಮೇಲೆ ದ್ವೇಷ ಸಾಧಿಸಲು ವಿಲನ್​ಗಳಾದ ರಮೇಶ್​, ನಯನತಾರಾ ಎಲ್ಲರೂ ಸೇರಿ ಡೇಟ್​ ಬಾರ್​ ಆಗಿರುವಂಥ ಮೆಡಿಸಿನ್​ ಇಟ್ಟರು. ಅದಕ್ಕಾಗಿ ಅವರಿಗೆ ಆಸ್ಪತ್ರೆಯಲ್ಲಿಯೇ ಇರುವ ಒಬ್ಬ ಆಸಾಮಿ ಸಹಾಯ ಮಾಡಿದ. ಇದರಿಂದಾಗಿ ಮಹಿಳೆಯರು, ಮಕ್ಕಳು ಜೀವ ಕಳೆದುಕೊಳ್ಳುವ ದೃಶ್ಯವನ್ನು ಸೀರಿಯಲ್​ನಲ್ಲಿ ತೋರಿಸಲಾಯಿತು.

ಇದೇನೋ ಸೀರಿಯಲ್​. ಕಥೆ ಮುಂದೆ ಹೋಗಬೇಕು ಅಷ್ಟೇ. ಆದರೆ ಆಸ್ಪತ್ರೆಗಳ ಮೇಲೆ ಹಲವರು ವಿಶ್ವಾಸ ಇಟ್ಟಿರುತ್ತಾರೆ. ಆದರೆ ಯಾರದ್ದೋ ವೈಯಕ್ತಿಕ ಕಾರಣಗಳಿಂದ ಆಸ್ಪತ್ರೆಗಳಲ್ಲಿಯೂ ಈ ರೀತಿ ಆಗಲು ಸಾಧ್ಯ ಎನ್ನುವುದನ್ನು ನೆನಪಿಸಿಕೊಂಡೇ ಹಲವರು ಕಮೆಂಟ್​ನಲ್ಲಿ ಹಿಗ್ಗಾ ಮುಗ್ಗ ಬೈಯುತ್ತಿದ್ದಾರೆ.

ಈಗ ಸೀರಿಯಲ್​ ಅನ್ನು ರೋಮಾಂಚನಗೊಳಿಸಲು ಕರ್ಣನನ್ನು ಜೈಲಿನಿಂದ ಬಿಡಿಸಲು ವಿವಿಧ ಸೀರಿಯಲ್​ಗಳ ನಾಯಕಿಯರು ಬಂದಿದ್ದಾರೆ. ಬ್ರಹ್ಮಗಂಟು ದೀಪಾ, ಶ್ರಾವಣಿ ಸುಬ್ರಹ್ಮಣ್ಯ ಶ್ರಾವಣಿ, ಅಮೃತಧಾರೆ ಮಲ್ಲಿ, ಅಣ್ಣಯ್ಯ ರಾಣಿ ಎಲ್ಲರೂ ಬಂದಿದ್ದಾರೆ. ಇದು ವೀಕ್ಷಕರನ್ನು ರೋಮಾಂಚನಗೊಳಿಸುತ್ತಿದೆ.

ಆದರೆ, ನಿಜ ಜೀವನದಲ್ಲಿ ಇವರನ್ನೇ ಕರೆಸ್ತೀರಾ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಕುತಂತ್ರಗಳು ಮಾಡುವುದು ಸಿನಿಮಾ, ಸೀರಿಯಲ್​ ಎಲ್ಲವುಗಳ ಒಂದು ಭಾಗ ನಿಜ. ಆದರೆ ಧಾರಾವಾಹಿಗಳನ್ನು ಭಕ್ತಿಯಿಂದ ನೋಡುವ, ಅವುಗಳಲ್ಲಿನ ಪಾತ್ರಗಳನ್ನು ತಮ್ಮ ಮೈಮೇಲೆ ಆಹ್ವಾನಿಸಿಕೊಳ್ಳುವ ದೊಡ್ಡ ವರ್ಗವೇ ಇರುವಾಗ ರೋಗಿಗಳ ಪ್ರಾಣದ ಜೊತೆ ಚೆಲ್ಲಾಟ ಆಡುವಂಥ ದೃಶ್ಯ ಮಾಡಿರುವುದಕ್ಕೆ ಸಿಕ್ಕಾಪಟ್ಟೆ ಜನರು ಬೈಯುತ್ತಿದ್ದಾರೆ.

ನಾಯಕನ ಅತಿಯಾದ ಒಳ್ಳೆಯತನ, ವಿಲನ್​ಗಳ ಅತಿಯಾದ ಕ್ರೂರತನ ಎಲ್ಲವೂ ಅತಿಯಾಗಿ ತೋರಿಸುವುದು ಬಹುತೇಕ ಸೀರಿಯಲ್​ಗಳಲ್ಲಿ ಮಾಮೂಲಾಗಿದ್ದರೂ ಇಂಥ ಸೂಕ್ಷ್ಮ ವಿಷಯ ಬಂದಾಗ ಈ ರೀತಿ ದೃಶ್ಯಗಳನ್ನು ತೋರಿಸಬಾರದು ಎನ್ನುವುದು ಹಲವರ ಕಳಕಳಿ

Source link

Leave a Reply

Your email address will not be published. Required fields are marked *