60 ಸಾವಿರದ ಕ್ಯಾಮರಾ ಆರ್ಡರ್​​ ಮಾಡಿದ್ದ ಉದ್ಯಮಿಗೆ ಶಾಕ್​​: ಬಾಕ್ಸ್​​ನಲ್ಲಿ ಬಂದಿದ್ದು ವಾಷಿಂಗ್​ ಪೌಡರ್​!

60 ಸಾವಿರದ ಕ್ಯಾಮರಾ ಆರ್ಡರ್​​ ಮಾಡಿದ್ದ ಉದ್ಯಮಿಗೆ ಶಾಕ್​​: ಬಾಕ್ಸ್​​ನಲ್ಲಿ ಬಂದಿದ್ದು ವಾಷಿಂಗ್​ ಪೌಡರ್​!


ಕ್ಯಾಮರಾ ಬದಲಿಗೆ ಬಂದ ವಾಷಿಂಗ್ ಪೌಡರ್ ತೋರಿಸುತ್ತಿರುವ ಉದ್ಯಮಿ

ಹುಬ್ಬಳ್ಳಿ, ಫೆಬ್ರವರಿ 22: ಯಾವುದೇ ವಸ್ತುಗಳನ್ನು ಖರೀದಿಸಬೇಕು ಅಂದ್ರೂ ಜನ ಅಂಗಡಿಗಳಿಗೆ ಹೋಗುವ ಬದಲು ಮೊಬೈಲ್ಅಲ್ಲಿಯೇ ವಿವಿಧ ಶಾಪಿಂಗ್ ಆಯಪ್ಗಳ ಮೂಲಕ ಅವರನ್ನು ಆರ್ಡರ್ ಮಾಡೋದು ಇತ್ತೀಚೆಗೆ ಟ್ರೆಂಡ್ ಆಗಿ ಮಾರ್ಪಟ್ಟಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ವಂಚಕರು ವ್ಯವಸ್ಥೆಯ ದುರುಪಯೋಗವನ್ನೂ ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದ್ದಾರೆ. ಆರ್ಡರ್ ಮಾಡಿರೋದು ಒಂದು ವಸ್ತುವಾದರೆ, ಗ್ರಾಹಕರು ಕೈಗೆ ತಲುಪೋದು ಮತ್ತೊಂದು ವಸ್ತು. ಇಂತಹ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಲೇ ಇವೆ. ಇದೇ ರೀತಿ ಆನ್‌ಲೈನ್ ಮೂಲಕ ಕ್ಯಾಮರಾ ಆರ್ಡರ್ ಮಾಡಿದ ಉದ್ಯಮಿಯೋರ್ವರು ತಮಗೆ ಕಂಪನಿ ಡೆಲಿವರಿ ಮಾಡಿರೋದು ವಾಷಿಂಗ್ ಪೌಡರ್ ಎಂಬ ಆರೋಪ ಮಾಡಿದ್ದಾರೆ.

ಹೌದು, ಶಾರ್ಜಾದಲ್ಲಿ ನೆಲೆಸಿರುವ ಹುಬ್ಬಳ್ಳಿ ಮೂಲದ ಉದ್ಯಮಿ ಅಲ್‌ಫ್ರೆಡ್ ಎಂಬವರು ಆತ್ಮೀಯರೊಬ್ಬರಿಗೆ ಉಡುಗೊರೆಯಾಗಿ ಅಮೆಜಾನ್‌ನಲ್ಲಿ ಕ್ಯಾಮರಾ ಬುಕ್ ಮಾಡಿದ್ದಾರೆ. ಅದರಂತೆ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನ ಇತ್ತೀಚಿನ ಕೊರಿಯರ್ ತಲುಪಿದೆ. ಅದನ್ನು ತೆರೆದು ನೋಡಿದಾಗ ಕ್ಯಾಮರಾ ಬದಲಿಗೆ, 2 ಪ್ಯಾಕೆಟ್ ವಾಷಿಂಗ್ ಪೌಡರ್ ಇರೋದು ಕಂಡಿದೆ. ತಾನು ಆರ್ಡರ್ ಮಾಡಿದ್ದು 60,990 ರೂ. ಬೆಲೆಯ ಕ್ಯಾಮರಾ. ಆದರೆ ಅವರು ಕಳುಹಿಸಿರುವ ಈ ವಾಷಿಂಗ್ ಪೌಡರ್ ಪ್ಯಾಕೇಟ್ ನೋಡಿ ತನಗೆ ಶಾಕ್ ಆಗಿದೆ. ಈ ಬಗ್ಗೆ ಅಮೆಜಾನ್‌ಗೆ ದೂರು ನೀಡಿದರೂ ಅವರಿಗೆ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂದು ಅಲ್ಫ್ರೆಡ್ ಅಲವತ್ತುಕೊಂಡಿದ್ದಾರೆ.

ಇದನ್ನೂ ಓದಿ: ಮನಿ ಡಬ್ಲಿಂಗ್ ಹೆಸರಿನಲ್ಲಿ ನೂರಾರು ಕುಟುಂಬಗಳಿಗೆ ವಂಚನೆ; ಕೋಟ್ಯಂತರ ರೂ. ಸಹಿತ ಆರೋಪಿ ಪರಾರಿ

ಎರಡು ದಿನಗಳ ಹಿಂದೆ ತಾನು ಕ್ಯಾಮರಾ ಅರ್ಡರ್ ಮಾಡಿದ್ದೆ. ದುಬೈನಲ್ಲಿಯೂ ತಾನು ಅಮೆಜಾನ್ ಮೂಲಕ ಅನೇಕ ಬಾರಿ ವಸ್ತುಗಳನ್ನು ಆರ್ಡರ್ ಮಾಡಿದ್ದು, ಅಲ್ಲಿ ಒಮ್ಮೆಯೂ ತನಗೆ ಈ ರೀತಿ ಮೋಸ ಆಗಲಿಲ್ಲ. ಆದರೆ ಸ್ನೇಹಿತ ವೈದ್ಯನಿಗಾಗಿ ಪಾಕೆಟ್ ಕ್ಯಾಮರಾ ಆರ್ಡರ್ ಮಾಡಿದ್ದು ತಾನು ಈ ಬಾರಿ ಮೋಸ ಹೋಗಿದ್ದೇನೆ. ಕೊರಿಯರ್ ಬಾಕ್ಸ್ ಓಪನ್ ಮಾಡುವ ದೃಶ್ಯಗಳನ್ನು ತಾನು ಚಿತ್ರೀಕರಿಸಿದ್ದು, ವಂಚನೆಗೆ ಸಾಕ್ಷಿ ಸಮೇತ ಆರೋಪ ಮಾಡಿದ್ದೇನೆ ಎಂದು ಅಲ್ಫ್ರೆಡ್ ಪ್ರಕಟಿಸಿದರು. ಬುಕ್ ರಿಲೀಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರ ಸ್ನೇಹಿತ, ಅತಿಥಿಗಳಿಗೆ ಉಡುಗೊರೆ ನೀಡಲೆಂದು ಆಲ್ಫ್ರೆಡ್ ಕ್ಯಾಮರಾ ಆರ್ಡರ್ ಮಾಡಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 7:41 am, ಭಾನುವಾರ, 22 ಫೆಬ್ರವರಿ 26



Source link

Leave a Reply

Your email address will not be published. Required fields are marked *