‘ಬಿಗ್ ಬಾಸ್ ಕನ್ನಡ ಸೀಸನ್ 12’ (ಬಿಗ್ ಬಾಸ್ ಕನ್ನಡ 12) ಶೋ ಮುಗಿದು ಹಲವು ದಿನಗಳು ಕಳೆದರೂ ಕೂಡ ಸ್ಪರ್ಧಿಗಳ ಹವಾ ಕಡಿಮೆ ಆಗಿಲ್ಲ. ಹಲವು ಕಾರ್ಯಕ್ರಮಗಳಿಗೆ ಅವರು ಅತಿಥಿಗಳಾಗಿ ತೆರಳುತ್ತಿದ್ದಾರೆ. ಮಂಡ್ಯದಲ್ಲಿ ‘ಹಯಗ್ರೀವ’ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮ ನಡೆದಿದೆ. ಆ ವೇದಿಕೆಯಲ್ಲಿ ಅಶ್ವಿನಿ ಗೌಡ (ಅಶ್ವಿನಿ ಗೌಡ) ಮತ್ತು ಗಿಲ್ಲಿ ನಟ ಅವರ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ‘ಈಗ ನಮ್ಮ ಅತ್ತೆ ಮಗಳು ಮಾತಾಡುತ್ತಾರೆ’ ಎಂದು ಗಿಲ್ಲಿ ನಟ ಅವರು ಅಶ್ವಿನಿಯ ಕಾಲೆಳೆದರು. ‘ಬಿಗ್ ಬಾಸ್ ಬಳಿಕ ಮೊದಲ ಬಾರಿ ಮಾವನ ಮಗನ ಜೊತೆ ವೇದಿಕೆ ಹಂಚಿಕೊಂಡು ಇದ್ದೇನೆ. ಖುಷಿ ಆಗುತ್ತಿದೆ. ಹಯಗ್ರೀವ ಸಿನಿಮಾಗೆ ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಇರಲಿ’ ಎಂದು ಅಶ್ವಿನಿ ಗೌಡ ಹೇಳಿದ್ದಾರೆ. ಮಂಡ್ಯ ಜನರ ಪ್ರೀತಿಗೆ ಗಿಲ್ಲಿ ನಟ (ಗಿಲ್ಲಿ ನಟ) ಅವರು ಧನ್ಯವಾದ ನಡೆಸಿದರು. ಟ್ರೇಲರ್ ಬಿಡುಗಡೆ ಕಾರ್ಯಕ್ರಮದ ವೇಳೆ ಮಳೆ ಬಂದಿದ್ದು, ಅದಕ್ಕೆ ಶುಭ ಸೂಚನೆ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.