Shikhar Dhawan News: ಕ್ರಿಕೆಟರ್ ಶಿಖರ್ ಧವನ್ ಅವರು ಎರಡನೇ ಮದುವೆಯಾಗಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೂ ಮುನ್ನ ಶಿಖರ್, ಆಯೇಷಾ ಮುಖರ್ಜಿ ಅವರನ್ನು ಮದುವೆಯಾಗಿದ್ದರು ಮತ್ತು ಅವರಿಗೆ ಜೊರಾವರ್ ಎಂಬ ಮಗನಿದ್ದಾನೆ.

ಎಂಟು ವರ್ಷಗಳ ದಾಂಪತ್ಯದ ನಂತರ, ಅಕ್ಟೋಬರ್ 2023 ರಲ್ಲಿ ಈ ಜೋಡಿ ಬೇರ್ಪಟ್ಟಿತ್ತು. ಈ ವಿಚ್ಛೇದನ ಪ್ರಕರಣದಲ್ಲಿ ದೆಹಲಿಯ ಕೌಟುಂಬಿಕ ನ್ಯಾಯಾಲಯವು ಧವನ್‌ಗೆ ವಿಚ್ಛೇದನವನ್ನು ಮಂಜೂರು ಮಾಡಿತ್ತು.

ಮದುವೆ ಮುರಿದುಬಿದ್ದ ನಂತರ ಕಳೆದ ಎರಡು ವರ್ಷಗಳಿಂದ ಮಗ ಜೊರಾವರ್‌ನನ್ನು ಭೇಟಿಯಾಗಲು ಸಾಧ್ಯವಾಗಿಲ್ಲ ಎಂದು ಧವನ್ ಹೇಳಿದ್ದಾರೆ.

ANI ಜೊತೆಗಿನ ವಿಶೇಷ ಸಂದರ್ಶನವೊಂದರಲ್ಲಿ ತಮ್ಮ ಮಗ ಜೊರಾವರ್ ಜೊತೆಗಿನ ಸಂಬಂಧದ ಬಗ್ಗೆಯೂ ಧವನ್ ಮನಬಿಚ್ಚಿ ಮಾತನಾಡಿದ್ದರು. ತಮ್ಮ ಪುಟ್ಟ ಮಗನೊಂದಿಗೆ ಮಾತನಾಡಿ ಒಂದು ವರ್ಷವಾಗಿದೆ ಎಂದು ಅವರು ಬಹಿರಂಗಪಡಿಸಿದ್ದರು. "ನನ್ನ ಮಗನನ್ನು ನೋಡಿ ಎರಡು ವರ್ಷಗಳಾಗಿವೆ. ನಾವು ಮಾತನಾಡಿ ಒಂದು ವರ್ಷವಾಯ್ತು. ಯಾಕಂದ್ರೆ, ನನ್ನನ್ನು ಎಲ್ಲ ಕಡೆಯಿಂದ ಬ್ಲಾಕ್ ಮಾಡಲಾಗಿದೆ. ಖಂಡಿತ, ಇದು ತುಂಬಾ ಕಷ್ಟ. ಆದರೆ… ಇದರೊಂದಿಗೆ ಬದುಕುವುದನ್ನು ಕಲಿಯಬೇಕು. ನಾನು ಅವನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ," ಎಂದು ಧವನ್ ಹೇಳಿದ್ದರು.

ಮದುವೆಗೂ ಮೊದಲು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಶಿಖರ್ ಧವನ್ ತಮ್ಮ ಗರ್ಲ್‌ಫ್ರೆಂಡ್ ಸೋಫಿ ಶೈನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸೋಮವಾರ, ಈ ಜೋಡಿ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಸುಂದರವಾದ ಫೋಟೋ ಹಂಚಿಕೊಂಡು ಈ ಸುದ್ದಿಯನ್ನು ಖಚಿತಪಡಿಸಿದೆ. "ನಗು ಹಂಚಿಕೊಳ್ಳುವುದರಿಂದ ಹಿಡಿದು ಕನಸುಗಳನ್ನು ಹಂಚಿಕೊಳ್ಳುವವರೆಗೆ… ನಮ್ಮ ಈ ಪಯಣಕ್ಕೆ ನಿಮ್ಮೆಲ್ಲರ ಪ್ರೀತಿ, ಹಾರೈಕೆ ಇರಲಿ. ಇನ್ಮುಂದೆ ನಾವು ಒಂದಾಗಿರುತ್ತೇವೆ" ಎಂದು ಶಿಖರ್ ಮತ್ತು ಸೋಫಿ ಬರೆದುಕೊಂಡಿದ್ದಾರೆ.

ಈ ಪೋಸ್ಟ್ ನೋಡಿದ ನೆಟ್ಟಿಗರು ಕಾಮೆಂಟ್ ಸೆಕ್ಷನ್‌ನಲ್ಲಿ ಹೊಸ ಜೋಡಿಗೆ ಅಭಿನಂದನೆ ಮತ್ತು ಶುಭಾಶಯಗಳ ಮಳೆಗರೆದಿದ್ದಾರೆ. ಒಬ್ಬ ಬಳಕೆದಾರರು "ನಿಮಗೆ ಅಭಿನಂದನೆಗಳು" ಎಂದು ಬರೆದರೆ, ಮತ್ತೊಬ್ಬರು ಹಾರ್ಟ್ ಎಮೋಜಿಗಳನ್ನು ಹಾಕಿ ಖುಷಿ ವ್ಯಕ್ತಪಡಿಸಿದ್ದಾರೆ.

ಶಿಖರ್ ಧವನ್ ಮತ್ತು ಸೋಫಿ ಶೈನ್ ಸ್ವಲ್ಪ ಸಮಯದಿಂದ ಡೇಟಿಂಗ್ ಮಾಡುತ್ತಿದ್ದರು. ಈ ಹಿಂದೆ "ಮೈ ಲವ್" ಎಂದು ಬರೆದು ಕೆಂಪು ಹೃದಯದ ಎಮೋಜಿ ಹಾಕಿ ತಮ್ಮ ಸಂಬಂಧವನ್ನು ಖಚಿತಪಡಿಸಿದ್ದರು. ಅಂದಿನಿಂದ, ಇಬ್ಬರೂ ಆಗಾಗ ತಮ್ಮ ಮುದ್ದಾದ ಫೋಟೋಗಳು ಮತ್ತು ರೀಲ್ಸ್‌ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು.

Source link
ಫಸ್ಟ್ ಮದುವೆಯಲ್ಲಿ ನರಕ; ಪ್ರೀತಿಸಿ ಎರಡನೇ ಮದುವೆಯಾದ Shikhar Dhawan; ಫೋಟೋಗಳಿವು