ಗರ್ಲ್ ಗೈಡ್ಸ್ ಮತ್ತು ಗರ್ಲ್ ಸ್ಕೌಟ್ ವತಿಯಿಂದ ಪ್ರತಿವರ್ಷ ಫೆಬ್ರವರಿ 22 ರಂದು ಆಚರಿಸಲ್ಪಡುವ ವಿಶ್ವ ಚಿಂತನಾ ದಿನವು (ವಿಶ್ವ ಚಿಂತನಾ ದಿನ) ವಿಶ್ವಾದ್ಯಂತ ಹುಡುಗಿಯರ ಜೀವನವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಇದು ಲಿಂಗ ಸಮಾನತೆಯನ್ನು ಉತ್ತೇಜಿಸುವ, ಯುವತಿಯರ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ, ಪ್ರಪಂಚದಾದ್ಯಂತ ಮಹಿಳೆಯರು ಮತ್ತು ಹುಡುಗಿಯರು ಎದುರಿಸುತ್ತಿರುವ ಸವಾಲುಗಳನ್ನು ಚರ್ಚಿಸಲು ಅವಕಾಶವನ್ನು ನೀಡುತ್ತದೆ. ವಿಶ್ವ ಚಿಂತನಾ ದಿನವು ಕೇವಲ ಔಪಚಾರಿಕ ಕಾರ್ಯಕ್ರಮವಲ್ಲ, ಅದು ವಿಶ್ವದ ಸಕಾರಾತ್ಮಕ ಬದಲಾವಣೆಯನ್ನು ತರಲು ಬಯಸುವ ಹುಡುಗಿಯರ ಧ್ವನಿಯಾಗಿದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವೇನು ಎಂಬುದನ್ನು ತಿಳಿಯೋಣ ಬನ್ನಿ.
ವಿಶ್ವ ಚಿಂತನಾ ದಿನದ ಇತಿಹಾಸವೇನು?
ಹುಡುಗಿಯರು ಮತ್ತು ಯುವಕರಲ್ಲಿ ನಾಯಕತ್ವ, ಏಕತೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಉತ್ತೇಜಿಸುವ ಉದ್ದೇಶದಿಂದ ಗರ್ಲ್ ಗೈಡ್ಸ್ ಮತ್ತು ಗರ್ಲ್ ಸ್ಕೌಟ್ಸ್ ಸಂಘ (WAGGGS) 1926 ರಿಂದ ವಿಶ್ವ ಚಿಂತನಾ ದಿನವನ್ನು ಆಚರಿಸುತ್ತಿದೆ. 1926 ರಲ್ಲಿ ನಡೆದ ನಾಲ್ಕನೇ ಗರ್ಲ್ ಸ್ಕೌಟ್ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಈ ವಿಶ್ವ ಚಿಂತನಾ ದಿನದ ಕುರಿತು ಪ್ರಸ್ತಾನೆ ದಿನಾಂಕ. ಫೆಬ್ರವರಿ 22 ರಂದು ಚಿಂತನ ದಿನವನ್ನು ಆಚರಿಸಲು ಒಪ್ಪಿಗೆ ದೊರೆಯಿತು. ಹೀಗಾಗಿ ವರ್ಲ್ಡ್ ಅಸೋಸಿಯೇಷನ್ ಆಫ್ ಗರ್ಲ್ ಗೈಡ್ಸ್ ಮತ್ತು ಗರ್ಲ್ ಸ್ಕೌಟ್ಸ್ (WAGGGS) ಪ್ರತಿ ವರ್ಷ ಫೆಬ್ರವರಿ 22 ರಂದು ವಿಶ್ವ ಚಿಂತನಾ ದಿನವನ್ನು ಆಚರಿಸಲಾಗುತ್ತದೆ. ಬಾಯ್ ಸ್ಕೌಟ್ಸ್ ಆಫ್ ಅಮೇರಿಕಾವನ್ನು ಸ್ಥಾಪಿಸಿದ ರಾಬರ್ಟ್ ಬೇಡನ್-ಪೊವೆಲ್ ಅವರ ಜನ್ಮದಿನ ಕೂಡ ಹೌದು. ಅವರ ಜನ್ಮದಿನವನ್ನು ನೆನಪಿಸುವ ಮೂಲಕ ವಿಶ್ವ ಚಿಂತನಾ ದಿನ ಮತ್ತು ವಿಶ್ವ ಸ್ಕೌಟ್ ದಿನವನ್ನಾಗಿ ಆಚರಿಸಲಾಗುತ್ತಿದೆ.
ಇದನ್ನೂ ಓದಿ: ಮಾತೃಭಾಷಾ ದಿನವನ್ನು ಆಚರಿಸುವುದೇಕೇ ಗೊತ್ತಾ?
ವಿಶ್ವ ಚಿಂತನಾ ದಿನದ ಮಹತ್ವವೇನು?
- ವಿಶ್ವ ಚಿಂತನಾ ದಿನವು ಸಮಾನತೆ, ಸಬಲೀಕರಣ ಮತ್ತು ನಾಯಕತ್ವದ ಬಗ್ಗೆ ಮಹತ್ವದ ಹುಡುಗಿಯರ ಶಿಕ್ಷಣಕ್ಕೆ ಒಂದು ಪ್ರಮುಖ ಅವಕಾಶವಿದೆ.
- ಈ ದಿನವು ಪ್ರಪಂಚದಾದ್ಯಂತದ ಹುಡುಗಿಯರು ಒಂದಾಗಲು ಮತ್ತು ಪರಸ್ಪರ ಬೆಂಬಲಿಸುವ ಅವಕಾಶವನ್ನು ನೀಡುತ್ತದೆ.
- ಈ ದಿನವು ಹುಡುಗಿಯರು ಜಾಗತಿಕ ನಾಗರಿಕರಾಗಲು ಮತ್ತು ಸಕಾರಾತ್ಮಕ ಬದಲಾವಣೆಯನ್ನು ತರಲು ಪ್ರೇರೇಪಿಸುತ್ತದೆ.
- ಪ್ರಪಂಚದಾದ್ಯಂತದ ಗರ್ಲ್ ಗೈಡ್ಗಳು ಮತ್ತು ಸ್ಕೌಟ್ಗಳಲ್ಲಿ ಸ್ನೇಹ ಮತ್ತು ಸಹೋದರತ್ವದ ಮನೋಭಾವವನ್ನು ಬಲಪಡಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ.
- ಸಂಪನ್ಮೂಲಗಳು ಸೀಮಿತವಾಗಿರುವ ದೇಶಗಳಲ್ಲಿ ಹುಡುಗಿಯರಿಗೆ ಸಹಾಯ ಮಾಡಲು ಈ ದಿನದಂದು ವಿಶ್ವಾದ್ಯಂತ ನಿಧಿಸಂಗ್ರಹ ಅಭಿಯಾನಗಳನ್ನು ಸಹ ಆಯೋಜಿಸಲಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 10:16 am, ಭಾನುವಾರ, 22 ಫೆಬ್ರವರಿ 26