ಶೀಘ್ರದಲ್ಲೇ ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್​? ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ

ಶೀಘ್ರದಲ್ಲೇ ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್​? ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ


ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್?ಚಿತ್ರದ ಕ್ರೆಡಿಟ್ ಮೂಲ: ಗೂಗಲ್

ಬೆಂಗಳೂರು, ಫೆಬ್ರವರಿ 22: ಶೀಘ್ರದಲ್ಲೇ ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್ ಆಗುವ ಸಾಧ್ಯತೆಯಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ವಿವಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸುಳಿವು. ಮೊಬೈಲ್ ಬ್ಯಾನ್ ವಿಚಾರವಾಗಿ ಮುಖ್ಯಮಂತ್ರಿಗಳು ಅಭಿಪ್ರಾಯ ಕೇಳಿದ್ದು, ಪ್ರಸ್ತಾಪಕ್ಕೆ ವಿಶ್ವವಿದ್ಯಾಲಯದ ಕುಲಪತಿಗಳಿಂದಲೂ ಒಪ್ಪಿಗೆ ಸಿಕ್ಕಿದೆ. 16 ವರ್ಷದೊಳಗಿನ ಮೊಬೈಲ್ ಬಳಕೆಗೆ ಕಡಿವಾಣ ಹಾಕಬೇಕಾಗಿತ್ತು, ಆಸ್ಟ್ರೇಲಿಯಾ ಸೇರಿದಂತೆ ಅನೇಕ ದೇಶಗಳಲ್ಲಿ ಈ ನಿಯಮವಿದೆ. ಸೋಷಿಯಲ್ ಮೀಡಿಯಾಗಳಿಂದ ವಿದ್ಯಾರ್ಥಿಗಳು ಹಾಳಾಗುತ್ತಿರುವ ಹಿನ್ನೆಲೆ ವಿದ್ಯಾರ್ಥಿಗಳ ಮೊಬೈಲ್ ಬಳಕೆ ನಿಷೇಧಕ್ಕೆ ಚಿಂತನೆ ಇದೆ.

ವಿವಿ ಕ್ಯಾಂಪಸ್‌ಗಳನ್ನು ಡ್ರಗ್ಸ್ ಮುಕ್ತಗೊಳಿಸಲು ಸೂಚನೆ

ಡ್ರಗ್ಸ್ ಒಂದು ಪಿಡುಗು, ವಿಶ್ವ ವಿದ್ಯಾಲಯಗಳ ಕಾಂಪಾಸ್ ಮಾದಕ ವಸ್ತುಗಳಿಂದ ಮುಕ್ತವಾಗಿರಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಈ ವೇಳೆ ವಿಸಿಗಳಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಮಕ್ಕಳ ಪರೀಕ್ಷಾ ಒತ್ತಡ ನಿವಾರಣೆಗೆ ಕಡ್ಡಾಯ ಮಾಡಿದ್ದು ಏನು?

ಕಾಲೇಜುಗಳ ಚುನಾವಣೆಗೆ ವಿರೋಧ

ಸ್ಟೂಡೆಂಟ್ ಎಲೆಕ್ಷನ್ ಬಗ್ಗೆಯೂ ಸಿದ್ದರಾಮಯ್ಯ ಸಿಎಂ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿ ಚುನಾವಣೆ ಮಾಡುವ ಬಗ್ಗೆ ಚಿಂತನೆ ಮಾಡಬಹುದಾಗಿದೆ. ನಮ್ಮ ಕಾಲದಲ್ಲಿ ಚುನಾವಣೆ ಇತ್ತು, ನಾವು ಅಲ್ಲಿಂದಲೇ ಬಂದಿರುವುದು. ಈ ರೀತಿಯ ಷರತ್ತುಗಳನ್ನು ಹಾಕಿ ಚುನಾವಣೆಗೆ ಅವಕಾಶ ಕೊಡಲು ಚಿಂತನೆ ಇದೆ. ಚುನಾವಣೆ ಆಗದಿದ್ರೆ ವಿದ್ಯಾರ್ಥಿಗಳು ನಾಯಕರಾಗಿ ಹೇಗೆ ಬೆಳೆಯೋದು? ಭಾರತದಲ್ಲಿ ವಿದ್ಯಾರ್ಥಿ ನಾಯಕರು ಇಲ್ಲವೇ ಇಲ್ಲ ಸಿಎಂ, ಈ ಬಗ್ಗೆ ಸಲಹೆ ಕೊಡುವಂತೆ ಸೂಚಿಸಿದ್ದಾರೆ.

ಆದರೆ ಕಾಲೇಜುಗಳಲ್ಲಿ ಚುನಾವಣೆ ನಡೆಸಲು ವಿರೋಧ ವ್ಯಕ್ತವಾಗಿದೆ. ಯಾವುದೇ ಕಾರಣಕ್ಕೂ ಕಾಲೇಜುಗಳಲ್ಲಿ ಚುನಾವಣೆ ಬೇಡ ಎಂದ ವಿಸಿಗಳು, JNU ಸೇರಿ ಹಲವೆಡೆ ಗಲಾಟೆ ಆಗ್ತಿದೆ. ಈಗ ಪಕ್ಷಾತೀತವಾಗಿ ಚುನಾವಣೆ ನಡೆಯುವುದು ಕಷ್ಟ. ಚುನಾವಣೆಯಾದ್ರೆ ಕ್ಯಾಂಪೇನ್‌ಗೆ ಬಹಳ ಸಮಯ ಬೇಕಿರುವ ಕಾರಣ ಸ್ಟೂಡೆಂಟ್ ಎಲೆಕ್ಷನ್ ಬೇಡ ಎಂದು ಕುಲಪತಿಗಳು ಸಿಎಂಗೆ ಆಯ್ಕೆಯಾಗಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *