Headlines

ತೆರಿಗೆ ಕಟ್ಟದಿದ್ದರೆ ಬೆಂಗಳೂರಿನಲ್ಲಿರುವ ನಿಮ್ಮ ಆಸ್ತಿಗೆ ಕುತ್ತು, ಟ್ಯಾಕ್ಸ್ ಕಟ್ಟದ ಮನೆಗಳನ್ನು ಹರಾಜಿಗಿಟ್ಟ ಜಿಬಿಎ! | Property Tax Default Greater Bengaluru Authority Auctions Homes Flats And Sites To Recover Dues

ತೆರಿಗೆ ಕಟ್ಟದಿದ್ದರೆ ಬೆಂಗಳೂರಿನಲ್ಲಿರುವ ನಿಮ್ಮ ಆಸ್ತಿಗೆ ಕುತ್ತು, ಟ್ಯಾಕ್ಸ್ ಕಟ್ಟದ ಮನೆಗಳನ್ನು ಹರಾಜಿಗಿಟ್ಟ ಜಿಬಿಎ! | Property Tax Default Greater Bengaluru Authority Auctions Homes Flats And Sites To Recover Dues



ತೆರಿಗೆ ಕಟ್ಟದಿದ್ದರೆ ಬೆಂಗಳೂರಿನಲ್ಲಿರುವ ನಿಮ್ಮ ಆಸ್ತಿಗೆ ಕುತ್ತು, ಟ್ಯಾಕ್ಸ್ ಕಟ್ಟದ ಮನೆಗಳನ್ನು ಹರಾಜಿಗಿಟ್ಟ ಜಿಬಿಎ! | Property Tax Default Greater Bengaluru Authority Auctions Homes Flats And Sites To Recover Dues

ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾಲೀಕರ ವಿರುದ್ಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಉತ್ತರ ಮತ್ತು ಪೂರ್ವ ವಲಯಗಳಲ್ಲಿ ಈಗಾಗಲೇ ಹಲವು ಮನೆ ಮತ್ತು ಫ್ಲ್ಯಾಟ್‌ಗಳನ್ನು ಹರಾಜು ಹಾಕಿ ಕೋಟ್ಯಂತರ ರೂಪಾಯಿ ತೆರಿಗೆ ವಸೂಲಿ ಮಾಡಲಾಗಿದೆ.  

ಬೆಂಗಳೂರು: ಆಸ್ತಿ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಮಾಲೀಕರ ವಿರುದ್ಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಇಳಿದಿದ್ದು, ಮನೆ, ಫ್ಲ್ಯಾಟ್ ಮತ್ತು ಸೈಟ್‌ಗಳನ್ನು ನೇರವಾಗಿ ಹರಾಜು ಹಾಕುವ ಮೂಲಕ ತೆರಿಗೆ ವಸೂಲಿಗೆ ಮುಂದಾಗಿದೆ. ನಗರದ ವಿವಿಧ ವಲಯಗಳಲ್ಲಿನ ಪಂಚ ಪಾಲಿಕೆಗಳು ಆಸ್ತಿ ತೆರಿಗೆ ವಸೂಲಿಯಲ್ಲಿ ತೀವ್ರತೆ ತೋರಿಸುತ್ತಿದ್ದು, ಈಗಾಗಲೇ ಹಲವು ಮೌಲ್ಯಯುತ ಆಸ್ತಿಗಳು ಹರಾಜಾಗಿವೆ.

ಉತ್ತರ ವಲಯದಲ್ಲಿ ಎರಡು ಆಸ್ತಿಗಳ ಹರಾಜು

ಬೆಂಗಳೂರು ಉತ್ತರ ವಲಯ ಪಾಲಿಕೆಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಎರಡು ಬೆಲೆಬಾಳುವ ಆಸ್ತಿಗಳನ್ನು ಹರಾಜು ಹಾಕಲಾಗಿದೆ. ನಾಲ್ಕು ವರ್ಷಗಳಿಂದ ಒಟ್ಟು ₹1,17,209 ಆಸ್ತಿ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದ ಫ್ಲ್ಯಾಟ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈ ಫ್ಲ್ಯಾಟ್ ಯಲಹಂಕ ವ್ಯಾಪ್ತಿಯ ಆಳ್ಳಾಸಂದ್ರ ಪ್ರದೇಶದಲ್ಲಿರುವ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿ ಇದೆ. ಕೇವಲ ಒಂದು ಲಕ್ಷ ರೂಪಾಯಿ ಆಸ್ತಿ ತೆರಿಗೆ ಬಾಕಿ ಇದ್ದರೂ, ಫ್ಲ್ಯಾಟ್ ಅನ್ನು ₹84 ಲಕ್ಷಕ್ಕೆ ಹರಾಜು ಮಾಡಲಾಗಿದೆ. ಹರಾಜಿನಿಂದ ಬಂದ ಮೊತ್ತದಿಂದ ಬಾಕಿ ಆಸ್ತಿ ತೆರಿಗೆಯನ್ನು ಪಾಲಿಕೆ ಅಧಿಕಾರಿಗಳು ವಸೂಲಿ ಮಾಡಿಕೊಂಡಿದ್ದಾರೆ.

107 ಆಸ್ತಿಗಳ ಪೈಕಿ ಎರಡು ಹರಾಜು

ಬೆಂಗಳೂರು ಉತ್ತರ ವಲಯ ಪಾಲಿಕೆಯಲ್ಲಿ ಒಟ್ಟು 107 ಆಸ್ತಿಗಳು ಹರಾಜು ಪಟ್ಟಿಯಲ್ಲಿ ಇದ್ದವು. ಈ ಪೈಕಿ ಮೊದಲ ಹಂತದಲ್ಲಿ ಎರಡು ಆಸ್ತಿಗಳನ್ನು ಮಾತ್ರ ಹರಾಜು ಮಾಡಿ, ಸುಮಾರು ₹2.5 ಲಕ್ಷಕ್ಕೂ ಹೆಚ್ಚು ಆಸ್ತಿ ತೆರಿಗೆ ವಸೂಲಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಆಸ್ತಿಗಳ ಮೇಲೂ ಇದೇ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

60 ಲಕ್ಷಕ್ಕೆ ಆಸ್ತಿ ಹರಾಜು

ಇದೇ ವಲಯದಲ್ಲಿ ಲಿಂಗಪ್ಪ ಎಂಬುವವರು ಹಲವು ವರ್ಷಗಳಿಂದ ₹1,55,377 ಆಸ್ತಿ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದರು. ಇದರಿಂದಾಗಿ ಅವರ ಆಸ್ತಿಯನ್ನು ಪಾಲಿಕೆ ಅಧಿಕಾರಿಗಳು ₹60 ಲಕ್ಷಕ್ಕೆ ಹರಾಜು ಹಾಕಿದ್ದು, ಹರಾಜು ಮೊತ್ತದಿಂದ ತೆರಿಗೆ ವಸೂಲಿ ಮಾಡಲಾಗಿದೆ.

ಪೂರ್ವ ವಲಯದಲ್ಲೂ ಹರಾಜಿನ ಕಠಿಣ ಕ್ರಮ

ಇನ್ನು ಬೆಂಗಳೂರು ಪೂರ್ವ ವಲಯ ಪಾಲಿಕೆಯಲ್ಲಿಯೂ ಆಸ್ತಿ ತೆರಿಗೆ ಬಾಕಿದಾರರ ವಿರುದ್ಧ ಕಠಿಣ ಕ್ರಮ ಜಾರಿಯಲ್ಲಿದೆ. ತೆರಿಗೆ ಪಾವತಿಸದೆ ನಿರ್ಲಕ್ಷ್ಯ ವಹಿಸಿದ್ದ ಐದು ಆಸ್ತಿಗಳನ್ನು ಪಾಲಿಕೆ ಹರಾಜು ಹಾಕಿದ್ದು, ಈ ಐದು ಆಸ್ತಿಗಳನ್ನೂ ಸೇರಿಸಿ ಒಟ್ಟು ₹5.5 ಕೋಟಿಗೂ ಹೆಚ್ಚು ಮೊತ್ತಕ್ಕೆ ಹರಾಜು ಮಾಡಲಾಗಿದೆ.

ತೆರಿಗೆ ಪಾವತಿಗೆ ಎಚ್ಚರಿಕೆ

ಆಸ್ತಿ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡರೆ ಯಾವುದೇ ರಿಯಾಯಿತಿ ಇಲ್ಲದೆ ನೇರವಾಗಿ ಹರಾಜು ಕ್ರಮ ಜರುಗಿಸಲಾಗುವುದು ಎಂದು ಜಿಬಿಎ ಸ್ಪಷ್ಟ ಎಚ್ಚರಿಕೆ ನೀಡಿದೆ. ಹೀಗಾಗಿ ಮನೆ, ಫ್ಲ್ಯಾಟ್ ಹಾಗೂ ಸೈಟ್ ಮಾಲೀಕರು ಸಮಯಕ್ಕೆ ಸರಿಯಾಗಿ ಆಸ್ತಿ ತೆರಿಗೆ ಪಾವತಿಸುವಂತೆ ಪಾಲಿಕೆ ಮನವಿ ಮಾಡಿದೆ.



Source link

Leave a Reply

Your email address will not be published. Required fields are marked *