Headlines

ಹುಡುಗಿಗೆ ಹುಡುಗ ಸ್ನಾನ ಮಾಡ್ಸೋದು, ಬಾಯಿಂದ ಮಸಾಜ್‌ ಮಾಡೋದು: ಅಸಹ್ಯ ರಿಯಾಲಿಟಿ ಶೋನಾ? ವೀಕ್ಷಕರ ಆಕ್ರೋಶ

ಹುಡುಗಿಗೆ ಹುಡುಗ ಸ್ನಾನ ಮಾಡ್ಸೋದು, ಬಾಯಿಂದ ಮಸಾಜ್‌ ಮಾಡೋದು: ಅಸಹ್ಯ ರಿಯಾಲಿಟಿ ಶೋನಾ? ವೀಕ್ಷಕರ ಆಕ್ರೋಶ

ಹುಡುಗಿಗೆ ಹುಡುಗ ಸ್ನಾನ ಮಾಡ್ಸೋದು, ಬಾಯಿಂದ ಮಸಾಜ್‌ ಮಾಡೋದು: ಅಸಹ್ಯ ರಿಯಾಲಿಟಿ ಶೋನಾ? ವೀಕ್ಷಕರ ಆಕ್ರೋಶ

ಇತ್ತೀಚೆಗೆ ರಿಯಾಲಿಟಿ ಶೋಗಳಲ್ಲಿ ಯಾವ ವಿಷಯದಲ್ಲಿ ರಿಯಾಲಿಟಿ ಇರಬೇಕೋ ಅದರಲ್ಲಿ ರಿಯಾಲಿಟಿ ಅಂತೂ ಇಲ್ಲ. ಆದರೆ ಅನುಚಿತ, ಅಸಹ್ಯ ವಿಚಾರದಲ್ಲಿ ರಿಯಾಲಿಟಿಯನ್ನು ಎತ್ತಿ ತೋರಿಸುತ್ತಿವೆ. ಹೌದು, 50 ಎನ್ನುವ ಶೋನಲ್ಲಿ ಅಸಹ್ಯ ಎನ್ನೋದು ಮಿತಿ ಮೀರಿದೆ.

ಬಾಲಿವುಡ್‌ನ ಸ್ಟಾರ್‌ ಕಲಾವಿದರು ಈ ಶೋನ ಭಾಗವಾಗಿದ್ದಾರೆ. ಬಿಗ್‌ ಬಾಸ್‌ ಸೇರಿದಂತೆ ಕೆಲ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದವರು, ಸೀರಿಯಲ್‌ನಲ್ಲಿ ಲೀಡ್‌ ಪಾತ್ರದಲ್ಲಿ ಮೆರೆದವರು ಕೂಡ ಈ ಶೋನ ಭಾಗವಾಗಿದ್ದಾರೆ.

ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದ ‘ದಿ 50’ ರಿಯಾಲಿಟಿ ಶೋ ಶುರುವಾಗಿದೆ. ಶೋಗೆ ಸುಮಾರು 50 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಇವರಲ್ಲಿ ಕೆಲವರು ಮೊದಲೇ ಪರಿಚಿತರಾಗಿದ್ದರೆ, ಇನ್ನು ಕೆಲವರು ಅಪರಿಚಿತರು. ‘ದಿ 50’ ಶೋನ ಸ್ಪರ್ಧಿಗಳು ವಾಸಿಸಲು 10,000 ಚದರ ಅಡಿ ವಿಸ್ತೀರ್ಣದ ಒಂದು ಐಷಾರಾಮಿ ಅರಮನೆಯನ್ನು ನಿರ್ಮಿಸಲಾಗಿದೆ. ಇದರಲ್ಲಿ ಸ್ಪರ್ಧಿಗಳು 50 ದಿನಗಳ ಕಾಲ ಇದ್ದು, ಆಟವಾಡುತ್ತಾರೆ. ಈ ಶೋನಲ್ಲಿ ಪ್ರತಿದಿನ ಟಾಸ್ಕ್‌ಗಳು ನಡೆಯುತ್ತವೆ ಮತ್ತು ಪ್ರತಿ ಟಾಸ್ಕ್‌ನಲ್ಲಿ ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗುತ್ತಾರೆ.

ಹುಡುಗ ತನ್ನ ಬಾಯಿಯಲ್ಲಿ ಐಸ್‌ಕ್ಯೂಬ್‌ ಇಟ್ಟು, ಅದನ್ನು ಹುಡುಗಿಯ ದೇಹದ ತುಂಬೆಲ್ಲ ಮಸಾಜ್‌ ಮಾಡಿಸೋದಂತೆ, ಇನ್ನು ಮೈತುಂಬ ಕೆಸರು ಮೆತ್ತಿದ್ದ ಹುಡುಗಿಗೆ, ಹುಡುಗ ಸ್ನಾನ ಮಾಡಿಸುವುದು, ಹುಡುಗನ ಹಾರ್ಟ್‌ ಬೀಟ್‌ ಹೆಚ್ಚಾಗುವ ಹಾಗೆ ಮಾಡಲು, ಹುಡುಗಿ ಅವನನ್ನು ಉತ್ತೇಜಿಸುವುದು.. ಇದನ್ನು ಹೇಳಲು ಕೂಡ ಕಷ್ಟ ಆಗುವುದು. ಆದರೆ ಇಂಥಹ ಟಾಸ್ಕ್‌ಗಳನ್ನು ಮಾಡಬೇಕಿದೆ.

ಹುಡುಗಿ ಬಾಯಲ್ಲಿರುವ ಸ್ಟ್ರಾಬೆರಿಯನ್ನು ಇನ್ನೊಂದು ಹುಡುಗ ಬಾಯಿ ಮೂಲಕ ಕಿತ್ಕೊಂಡು ತಿನ್ನುವುದು. ಇದೆಲ್ಲ ಟಾಸ್ಕ್‌ಗಳು. ಸಹಸ್ಪರ್ಧಿಗಳು ಈ ರೀತಿ ಟಾಸ್ಕ್‌ಗಳಲ್ಲಿ ಭಾಗಿ ಆದಾಗ, ಉಳಿದವರು ಮುಜುಗರ ಪಟ್ಕೊಂಡು ನೋಡುತ್ತಿದ್ದಾರೆ ಎಂದರೆ ಎಂಥಹ ಟಾಸ್ಕ್‌ ಕೊಟ್ಟಿರಬೇಕು, ಯೋಚನೆ ಮಾಡಿ.

ಈ ಶೋವನ್ನು ನೋಡಿ, ವೀಕ್ಷಕರಿಗೂ ಕೂಡ ಇದು ಭಾರತದ ಶೋನಾ? ಅಥವಾ ವಿದೇಶದ್ದಾ ಎಂಬ ಸಂಶಯ ಮೂಡುತ್ತಿವೆ, ಫ್ಯಾಮಿಲಿ ಸಮೇತ ಮಾತ್ರ ಈ ಶೋವನ್ನು ನೋಡೋಕೆ ಆಗದು ಎಂದು ಕಾಮೆಂಟ್‌ ಮಾಡಲಾಗುತ್ತಿದೆ.

Source link

Leave a Reply

Your email address will not be published. Required fields are marked *