
ಪಾಕಿಸ್ತಾನ ಅಂದ್ರೆ ಜಗತ್ತಿನ ಬೇರೆ ದೇಶಗಳು ಮೂಗು ಮುರಿಯೋದೇ ಜಾಸ್ತಿ. ರಾಜಕೀಯ ಅಸ್ಥಿರತೆ, ತೀವ್ರ ಹಣದುಬ್ಬರದ ಕಾರಣದಿಂದಾಗಿ ಅಲ್ಲಿನ ನಿವಾಸಿಗಳೇ ದೇಶ ಬಿಟ್ಟು ದೂರ ಹೋಗಿ ನೆಲೆಸಲು ಬಯಸುತ್ತಾರೆ. ಹೀಗಿರುವಾಗ ಅಲ್ಲಿಗೆ ಮದುವೆಯಾಗಿ ಬಂದ ಅಮೆರಿಕನ್ ಯುವತಿ ತಮ್ಮ ಬದುಕಿನ ಕತೆ ಹೇಳಿಕೊಂಡಿದ್ದು ವೈರಲ್ ಆಗಿದೆ.
ಪಾಕಿಸ್ತಾನಿ ಯುವಕನ ಪ್ರೇಮ ಜಾಲಕ್ಕೆ ಸಿಲುಕಿದ ಅಮೆರಿಕನ್ ಯುವತಿ
ಪಾಕಿಸ್ತಾನ ಅಂದ್ರೆ ಭಾರತ ಬಿಡಿ ಜಗತ್ತಿನ ಬೇರೆ ದೇಶಗಳು ಮೂಗು ಮುರಿಯೋದೇ ಜಾಸ್ತಿ. ರಾಜಕೀಯ ಅಸ್ಥಿರತೆ, ಆರ್ಥಿಕ ದುಸ್ಥಿತಿ, ತೀವ್ರ ಹಣದುಬ್ಬರದ ಕಾರಣದಿಂದಾಗಿ ಅಲ್ಲಿನ ನಿವಾಸಿಗಳೇ ದೇಶ ಬಿಟ್ಟು ದೂರ ಹೋಗಿ ನೆಲೆಸಬೇಕು ಎಂದು ಕನಸು ಕಾಣುತ್ತಿರುತ್ತಾರೆ. ಹೀಗಿರುವಾಗ ಹೊರಗಿನ ದೇಶದವರು ಅಲ್ಲಿ ಬಂದು ನೆಲೆಸುವುದಕ್ಕೆ ಬಯಸುವುದು ಕನಸಿನ ಮಾತು. ಆದರೆ ಪ್ರೀತಿ ಪ್ರೇಮ ಎಂಬ ಮಾಯಾಜಾಲದ ಬಲೆಗೆ ಸಿಕ್ಕರೇ ಏನು ಬೇಕಾದರೂ ಆಗಿ ಬಿಡಬಹುದು. ಹಾಗೆಯೇ ಇಲ್ಲೊಬ್ಬಳು ವಿದೇಶಿ ಮಹಿಳೆ ಪಾಕಿಸ್ತಾನಿ ಯುವಕನ ಪ್ರೇಮ ಜಾಲಕ್ಕೆ ಸಿಲುಕಿ ಮದುವೆಯೂ ಆಗಿದ್ದು, ಮದುವೆಯ ನಂತರದ ತನ್ನ ಕತೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದು, ವೈರಲ್ ಆಗಿದೆ.
ಭಾರತೀಯ ಅನೇಕ ಯುವತಿಯರು ಮದುವೆಯ ನಂತರ ಲಂಡನ್, ದುಬೈ ಅಮೆರಿಕಾ, ಕೆನಡಾ, ಯುಕೆ ಅಂತ ವಿದೇಶಗಳಲ್ಲಿ ನೆಲೆಸುತ್ತಾರೆ. ಪಾಕಿಸ್ತಾನಿಯರು ತಮ್ಮದೇ ದೇಶ ತೊರೆದು ವಿದೇಶದಲ್ಲಿ ನೆಲೆಸುವುದಕ್ಕೆ ಹಾತೊರೆಯುತ್ತಾರೆ. ಆದರೆ ಈ ಅಮೆರಿಕನ್ ಬೆಡಗಿಗೆ ಅದೇನು ಬಂದಿತ್ತೋ ಏನೋ ಪಾಕಿಸ್ತಾನಿ ಯುವಕನ ಪ್ರೀತಿಸಿ ಮದುವೆಯಾಗಿದ್ದು, ಪಾಕಿಸ್ತಾನದಲ್ಲಿ ನೆಲೆಸಿದ್ದಾಳೆ. taylorinpakistan ಎಂಬ ಇನ್ಸ್ಟಾ ಖಾತೆಯನ್ನು ಹೊಂದಿರುವ ಯುವತಿ ಈಗ ಪಾಕಿಸ್ತಾನದಲ್ಲಿ ತನ್ನ ಮದುವೆ ನಂತರದ ಜೀವನ ಹೇಗಿದೆ ಎಂಬುದನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾಳೆ. ಆಕೆಯ ವೀಡಿಯೋಗೆ ಭಾರಿ ಸ್ಪಂದನೆ ವ್ಯಕ್ತವಾಗ್ತಿದೆ.
ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಟೇಲರ್ ಆ ವಿಡಿಯೋದಲ್ಲಿ ತನ್ನ ಗಂಡನ ಮನೆ, ತೋಟಗಳು ಮತ್ತು ಗ್ರಾಮೀಣ ಜೀವನವನ್ನು ಜಗತ್ತಿಗೆ ತೋರಿಸಿದ್ದರೆ. ಜೊತೆಗೆ ಪಾಕಿಸ್ತಾನ ನನ್ನ ನೆಚ್ಚಿನ ಸ್ಥಳ ಎಂದು ಅವರು ವೀಡಿಯೋದಲ್ಲಿ ಹೇಳಿದ್ದಾರೆ. ನಾನು ಪಾಕಿಸ್ತಾನಕ್ಕೆ ಹೋಗುತ್ತೇನೆ ಎಂದು ಎಂದಿಗೂ ಭಾವಿಸಿರಲಿಲ್ಲ, ಆದರೆ ನಾನು ಅದನ್ನು ಹೆಚ್ಚು ಪ್ರೀತಿಸುತ್ತೇನೆ! ನೀವು ನೋಡಲು ಅಥವಾ ಇನ್ನಷ್ಟು ತಿಳಿದುಕೊಳ್ಳಲು ಬಯಸುವ ಏನಾದರೂ ಇದ್ದರೆ, ಕಾಮೆಂಟ್ ಮಾಡಿ ಎಂದು ಅವರು ವೀಡಿಯೊದಲ್ಲಿ ಬರೆದಿದ್ದಾರೆ. ಜೊತೆಗೆ ವಿಡಿಯೋದ ಮೇಲೆ ನಾನು ಸ್ವಲ್ಪ ಜಾಸ್ತಿ ಫ್ಲರ್ಟ್ ಮಾಡಿದೆ ಈಗ ಇದು ನನ್ನ ಜೀವನ, ಪಾಕಿಸ್ತಾನದ ಪುಟ್ಟ ಹಳ್ಳಿಯೊಂದರಲ್ಲಿ ಎಂದು ಬರೆದಿದ್ದಾರೆ.
ಇದನ್ನೂ ಓದಿ: ಕುಟುಂಬದವರೊಂದಿಗೆ ಕುಳಿತು ಊಟ ಮಾಡುತ್ತಿದ್ದಾಗಲೇ ಬಂತು ಕಾಲನ ಕರೆ: 21ರ ತರುಣ ಸಾವು
ವೀಡಿಯೊದಲ್ಲಿ ಕಾಣಿಸುವುದು ಪಾಕಿಸ್ತಾನದ ಒಂದು ಹಳ್ಳಿ. ವಿಶಾಲವಾದ ಕೃಷಿಭೂಮಿ ಮತ್ತು ಹೊಲವನ್ನು ಹೊಂದಿರುವ ಅತ್ಯಂತ ವಿಶಿಷ್ಟವಾದ ಪಾಕಿಸ್ತಾನಿ ಹಳ್ಳಿ. ಅಲ್ಲಿ ಭಾರತೀಯ ಶೈಲಿಯ ಸಾಂಪ್ರದಾಯಿಕ ಶೌಚಾಲಯ. ಹಸುಗಳು ಮತ್ತು ಕೋಳಿಗಳಂತಹ ಗ್ರಾಮೀಣ ಜೀವನಕ್ಕೆ ಸಂಬಂಧಿಸಿದ ಪ್ರಾಣಿಗಳನ್ನು ವೀಡಿಯೋದಲ್ಲಿ ಕಾಣಬಹುದು. ಆದರೆ ಅಲ್ಲಿ ಒಂದೇ ವ್ಯತ್ಯಾಸವೆಂದರೆ ಮನೆಯ ಮೇಲೆ ಶಿಲುಬೆ ಇದೆ. ವೀಡಿಯೊವನ್ನು ಈಗಾಗಲೇ ಸುಮಾರು 8.8 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಜೊತೆಗೆ ಟೇಲರ್‌ನ ರೂಪಾಂತರದಿಂದ ಅನೇಕರು ಆಶ್ಚರ್ಯಪಟ್ಟಿದ್ದಾರೆ.
ಅವರ ಜೀವನದ ಈ ಆಯ್ಕೆಯ ಬಗ್ಗೆ ಅನೇಕರು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ. ಪಾಕಿಸ್ತಾನದವರು ಕೂಡ ಪಾಕಿಸ್ತಾನದಲ್ಲಿ ಈ ಜೀವನ ಇಷ್ಟಪಡುವುದಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈಕೆ ಸ್ವರ್ಗದಿಂದ ನರಕಕ್ಕೆ ಹೋದಳು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಆಕೆ ಆಕೆಯನ್ನೇ ಬಂಧಿಸಿಕೊಂಡಳು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು ನೀವು ಖುಷಿಯಾಗಿ ಎಷ್ಟು ಕಾಲ ಇರುವಿರೋ ಅಷ್ಟು ಕಾಲ ಇದಾವುದು ಮ್ಯಾಟರ್ ಆಗಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಆತಂಕಕಾರಿ ಕ್ಷಣದಲ್ಲಿ ಸಮಯಪ್ರಜ್ಞೆ ಮೆರೆದು ಲಿಫ್ಟ್‌ನಲ್ಲಿ ಸಿಲುಕಿದ ಇಬ್ಬರು ಪುಟ್ಟ ಮಕ್ಕಳ ರಕ್ಷಿಸಿದ ಬಾಲಕಿ