70th Filmfare Award: ಕನ್ನಡ ಕಿರುತೆರೆಯಲ್ಲಿ ನಟಿಸಿ, ಇದೀಗ ಬೆಳ್ಳಿ ತೆರೆಯಲ್ಲಿ ಸ್ಟಾರ್ ಆಗಿ ಮಿಂಚುತ್ತಿರುವ ನಟಿ ಅಂಕಿತಾ ಅಮರ್ 70ನೇ ಫಿಲಂ ಫೇರ್ ಅವಾರ್ಡ್ ಸಮಾರಂಭದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದು, ಆ ಸಂಭ್ರಮವನ್ನು ಹಂಚಿಕೊಂಡು ಕನ್ನಡಿಗರಿಗೆ ಧನ್ಯವಾದ ತಿಳಿಸಿದ್ದಾರೆ.

ಕನ್ನಡ ಕಿರುತೆರೆಯಲ್ಲಿ ‘ನಮ್ಮನೆ ಯುವರಾಣಿ’ ಧಾರಾವಾಹಿಯಲ್ಲಿ ಮೀರಾ ಪಾತ್ರದ ಮೂಲಕ ಕನ್ನಡಿಗರ ಕಣ್ಮಣಿಯಾಗಿದ್ದ ನಟಿ ಅಂಕಿತಾ ಅಮರ್ ಈ ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಮಿಂಚುತ್ತಿದ್ದಾರೆ. ತಮ್ಮ ಮೊದಲ ಚಿತ್ರಕ್ಕೆ ಸಾಲು ಸಾಲು ಪ್ರಶಸ್ತಿ ಪಡೆದಿದ್ದಾರೆ.

ಕೇರಳದಲ್ಲಿ ನಡೆದ 70ನೇ ಫಿಲಂ ಫೇರ್ ಪ್ರಶಸ್ತಿ ಸೌತ್ ಸಮಾರಂಭದಲ್ಲಿ ಅಂಕಿತಾ ಅಮರ್ ಅವರಿಗೆ ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾದಲ್ಲಿನ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. ಈ ಸಂಭ್ರಮವನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಸಂಭ್ರಮಿಸಿದ್ದಾರೆ.

ಕೃಷ್ಣ ಸುಂದರಿ ನನ್ನ ಕೈಯಲ್ಲಿ. ನನ್ನ ಮೊದಲ ಚಿತ್ರಕ್ಕೆ ಅತ್ಯುತ್ತಮ ನಟಿ ವಿಮರ್ಶಕರು ಪ್ರಶಸ್ತಿ ಪಡೆದಿರುವುದು ಅದ್ಭುತವೆನಿಸುತ್ತದೆ.! ಧನ್ಯವಾದಗಳು ಫಿಲ್ಮ್‌ಫೇರ್. ಇದು ಕೃತಜ್ಞತೆ, ನಮ್ರತೆ ಮತ್ತು ಸಂತೋಷದ ಕ್ಷಣ! ನಮ್ಮ ಕನ್ನಡದ ಕಣ್ಮಣಿಗಳಿಗೆ ತುಂಬಾನೆ ಥ್ಯಾಂಕ್ಯೂ ಎಂದಿದ್ದಾರೆ ನಟಿ ಅಂಕಿತಾ.

ತಮ್ಮ ಕರಕುಶಲತೆಯನ್ನು ಸಮಗ್ರತೆಯಿಂದ ಪೂರೈಸಿದ ಪ್ರತಿಯೊಬ್ಬ ಕಲಾವಿದ, ಪ್ರತಿಯೊಬ್ಬ ತಂತ್ರಜ್ಞ, ಪ್ರತಿಯೊಬ್ಬ ವ್ಯಕ್ತಿಯ ಪರವಾಗಿ ನಾನು ಈ ಪ್ರಶಸ್ತಿಯನ್ನು ಸ್ವೀಕರಿಸುತ್ತೇನೆ. ಚಂದ್ರಜಿತ್ ಸರ್, ರಕ್ಷಿತ್ ಶೆಟ್ಟಿ ಸರ್ ಮತ್ತು ಪರಂಹ ಸ್ಟುಡಿಯೋಸ್ ಗೆ ಧನ್ಯವಾದಗಳು. ಶಾರದಾಂಬೆಯ ಕೃಪೆಯಿಂದ ಗಾಜಿನ ಬಳೆಯಷ್ಟೇ ಅಲ್ಲ, ಉಡೋದಕ್ಕೆ ಅಂಬೆ ಸೀರೆ! ಎಂದು ಬರೆದಿದ್ದಾರೆ ಅಂಕಿತಾ ಅಮರ್.

ಅಂಕಿತಾ ಅಮರ್ ನೀಲಿ ಬಣ್ಣದ ರೇಷ್ಮೆ ಸೀರೆ ಧರಿಸಿ, ಮುಡಿಯಲ್ಲಿ ಮಲ್ಲಿಗೆ ಹೂವು ಮುಡಿದು, ಕೈತುಂಬಾ ಗಾಜಿನ ಬಳೆ ಹಾಕಿ, ಮುದ್ದಾಗಿ ಮಿಂಚಿದ್ದಾರೆ. ಪ್ರಶಸ್ತಿ ಸಮಾರಂಭದಲ್ಲಿ ಹಾಡು ಹೇಳುವ ಮೂಲಕ ಕನ್ನಡಿಗರಿಗೆ ಧನ್ಯವಾದಗಳನ್ನು ಸಹ ತಿಳಿಸಿದ್ದಾರೆ.

ಕಿರುತೆರೆಯಿಂದ ನಟನೆ ಆರಂಭಿಸಿದ ಅಂಕಿತಾ ಅಮರ್, ಭರತನಾಟ್ಯ ಕಲಾವಿದೆ ಕೂಡ ಹೌದು. ಮೈ ಹೀರೋ, ಇಬ್ಬನಿ ತಬ್ಬಿದ ಇಳೆಯಲಿ ಹಾಗೂ ಜಸ್ಟ್ ಮ್ಯಾರೀಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಇವರ ಕೈಯಲ್ಲಿ ಹಲವಾರು ಸಿನಿಮಾಗಳು ಸಹ ಇವೆ.

Source link
70th Filmfare Award: ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಅಂಕಿತಾ ಅಮರ್, ಕೃಷ್ಣ ಸುಂದರಿ ಜೊತೆ ನಟಿ