Headlines

ಇರಾನ್ ತೊರೆಯುವಂತೆ ತಮ್ಮ ನಾಗರಿಕರಿಗೆ ಸೂಚಿಸಿದ ಸ್ವೀಡನ್, ಸೆರ್ಬಿಯಾ

ಇರಾನ್ ತೊರೆಯುವಂತೆ ತಮ್ಮ ನಾಗರಿಕರಿಗೆ ಸೂಚಿಸಿದ ಸ್ವೀಡನ್, ಸೆರ್ಬಿಯಾ

ಇರಾನ್ ತೊರೆಯುವಂತೆ ತಮ್ಮ ನಾಗರಿಕರಿಗೆ ಸೂಚಿಸಿದ ಸ್ವೀಡನ್, ಸೆರ್ಬಿಯಾ

Countries advised to leave Iran: ಇರಾನ್‌ನಲ್ಲಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು ಅಮೆರಿಕದ ಸಂಭವನೀಯ ಮಿಲಿಟರಿ ಕಾರ್ಯಾಚರಣೆಯ ಬೆದರಿಕೆಯ ಹಿನ್ನೆಲೆಯಲ್ಲಿ, ಸೆರ್ಬಿಯಾ ಹಾಗೂ ಸ್ವೀಡನ್ ದೇಶಗಳು ತಮ್ಮ ಪ್ರಜೆಗಳಿಗೆ ತಕ್ಷಣವೇ ಇರಾನ್ ತೊರೆಯುವಂತೆ ಸೂಚಿಸಿವೆ.

ಇರಾನ್‌ನಲ್ಲಿರುವ ತಮ್ಮ ದೇಶದ ಪ್ರಜೆಗಳಿಗೆ ಇರಾನ್ ಬಿಟ್ಟು ಹೊರಡುವಂತೆ ಸೆರ್ಬಿಯಾ ಹಾಗೂ ಸ್ವೀಡನ್ ದೇಶಗಳು ಸೂಚಿಸಿವೆ. ಇಸ್ಲಾಮಿಕ್ ರಿಪಬ್ಲಿಕ್ ಇರಾನ್‌ನ ಪರಮಾಣು ಕಾರ್ಯಕ್ರಮದ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ನಂತರ ಈ ಸೂಚನೆ ಬಂದಿದೆ.

ಇದನ್ನೂ ಓದಿ: ಪ್ರೀತಿಯ ಮಾಯಾಜಾಲಕ್ಕೆ ಬಿದ್ದು ಸ್ವರ್ಗದಿಂದ ನರಕಕ್ಕೆ ಜಾರಿದ ಅಮೆರಿಕನ್ ಬಾಲೆ: ಪಾಕಿಸ್ತಾನಿ ಯುವಕನ ಮದ್ವೆಯಾದ ಯುವತಿ ಹೇಳಿದ್ದೇನು?

ಯುರೋಪ್‌ನ ಬಾಲ್ಕನ್ ರಾಜ್ಯವು ಜನವರಿ ಮಧ್ಯ ಭಾಗದಲ್ಲೇ ಸೆರ್ಬಿಯಾದ ನಾಗರಿಕರು ಇರಾನ್ ತೊರೆಯುವಂತೆ ಮತ್ತು ಅಲ್ಲಿಗೆ ಪ್ರಯಾಣಿಸುವುದನ್ನು ತಪ್ಪಿಸುವಂತೆ ಕರೆ ನೀಡಿತ್ತು, ಏಕೆಂದರೆ ಇರಾನ್‌ನಲ್ಲಿ ಮೂಲಭೂತವಾದಿಗಳ ನಾಯಕತ್ವವು ಸಾಮೂಹಿಕ ಪ್ರತಿಭಟನಾ ಚಳವಳಿಯನ್ನು ಹಿಮ್ಮೆಟ್ಟಿಸಲು ಹಿಂಸಾತ್ಮಾಕ ದಾರಿ ಹಿಡಿದ ನಂತರ ಬಾಲ್ಕನ್ ರಾಜ್ಯವು ಈ ಸೂಚನೆ ನೀಡಿತ್ತು.

ಇದನ್ನೂ ಓದಿ: ಕುಟುಂಬದವರೊಂದಿಗೆ ಕುಳಿತು ಉಪಾಹಾರ ಸೇವಿಸ್ತಿದ್ದಾಗಲೇ ಹಾರಿಹೋಯ್ತು ಪ್ರಾಣಪಕ್ಷಿ: 21ರ ತರುಣ ಸಾವು

ಇರಾನ್‌ನಲ್ಲಿ ಭದ್ರತಾ ಪರಿಸ್ಥಿತಿ ಹದಗೆಡುತ್ತಿರುವುದರಿಂದ, ಸೆರ್ಬಿಯಾ ಗಣರಾಜ್ಯದ ನಾಗರಿಕರು ಮುಂಬರುವ ಅವಧಿಯಲ್ಲಿ ಇರಾನ್‌ಗೆ ಪ್ರಯಾಣಿಸಲು ಶಿಫಾರಸು ಮಾಡುವುದಿಲ್ಲ ಎಂದು ವಿದೇಶಾಂಗ ಸಚಿವಾಲಯವು ಶುಕ್ರವಾರದಿಂದ ಶನಿವಾರದವರೆಗೆ ತನ್ನ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಆತಂಕಕಾರಿ ಕ್ಷಣದಲ್ಲಿ ಸಮಯಪ್ರಜ್ಞೆ ಮೆರೆದು ಲಿಫ್ಟ್‌ನಲ್ಲಿ ಸಿಲುಕಿದ ಇಬ್ಬರು ಪುಟ್ಟ ಮಕ್ಕಳ ರಕ್ಷಿಸಿದ ಬಾಲಕಿ

ಇರಾನ್‌ನಲ್ಲಿರುವ ಎಲ್ಲರೂ ಸಾಧ್ಯವಾದಷ್ಟು ಬೇಗ ಆ ದೇಶವನ್ನು ತೊರೆಯಲು ಶಿಫಾರಸು ಮಾಡಲಾಗಿದೆ. ಮತ್ತೊಂದೆಡೆ ಸ್ವೀಡನ್‌ನ ವಿದೇಶಾಂಗ ಸಚಿವೆ ಮಾರಿಯಾ ಮಾಲ್ಮರ್ ಸ್ಟೆನರ್‌ಗಾರ್ಡ್ ಅವರು ಕೂಡ ಇರಾನ್‌ನಲ್ಲಿರುವ ಸ್ವೀಡಿಷ್ ನಾಗರಿಕರು ಕೂಡಲೇ ದೇಶ ತೊರೆಯುವಂತೆ ಮನವಿ ಮಾಡಿದರು.

ಇದನ್ನೂ ಓದಿ: ಮದುವೆಗೆ ದಿನ ಮೊದಲು ಸಾವಿಗೆ ಶರಣಾದ ಶಿಕ್ಷಕ ಸೋದರಿಯರು: ಮದುವೆ ಸಂಭ್ರಮವಿರಬೇಕಾದ ಮನೆಯಲ್ಲಿ ಸೂತಕ

ಟೆಹ್ರಾನ್‌ನ ಪರಮಾಣು ಕಾರ್ಯಕ್ರಮದ ಕುರಿತು ಅಮೆರಿಕದೊಂದಿಗೆ ತ್ವರಿತ ಒಪ್ಪಂದ ಮಾಡಿಕೊಳ್ಳುವ ಆಶಯವನ್ನು ಇರಾನ್ ಹೊಂದಿದೆ. ಪರಮಾಣು ವಿಚಾರವೇ ಎರಡು ವೈರಿಗಳ ನಡುವೆ ದೀರ್ಘಕಾಲದ ಭಿನ್ನಾಭಿಪ್ರಾಯದ ಮೂಲವಾಗಿದೆ. ಆದರೆ ಟೆಹ್ರಾನ್ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಟ್ರಂಪ್ ಮಧ್ಯಪ್ರಾಚ್ಯದಲ್ಲಿ ಪ್ರಮುಖ ನೌಕಾಪಡೆ ನಿರ್ಮಾಣಕ್ಕೆ ಆದೇಶಿಸಿದ್ದು, ಮಾತುಕತೆಗಳು ಫಲಪ್ರದವಾಗದಿದ್ದರೆ ಸೀಮಿತ ಮಿಲಿಟರಿ ದಾಳಿಯನ್ನು ನಡೆಸುತ್ತೇವೆ ಎಂದು ಶುಕ್ರವಾರ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಹಲವು ದೇಶಗಳು ಇರಾನ್ ಬಿಡುವಂತೆ ತಮ್ಮ ನಾಗರಿಕರಿಗೆ ಸೂಚಿಸಿದೆ.

ಇದನ್ನೂ ಓದಿ: ಖ್ಯಾತ ಹೃದಯ ತಜ್ಞನಿಗಾಗಿ ಎರಡು ಹೃದಯಗಳ ಗಲಾಟೆ: ಪರಸ್ಪರ ಜುಟ್ಟು ಹಿಡಿದು ಕಿತ್ತಾಡಿದ ಪ್ರೇಯಸಿ, ಹೆಂಡ್ತಿ

Source link

Leave a Reply

Your email address will not be published. Required fields are marked *