ಓರಗಿತ್ತಿಯಿಂದ ಹಲ್ಲೆ: ವಿಡಿಯೋ ಬಿಡುಗಡೆ ಮಾಡಿದ ನಟಿ ಕಾವ್ಯಾ

ಓರಗಿತ್ತಿಯಿಂದ ಹಲ್ಲೆ: ವಿಡಿಯೋ ಬಿಡುಗಡೆ ಮಾಡಿದ ನಟಿ ಕಾವ್ಯಾ


‘ರಾಧಾ ರಮಣ’ ಸೇರಿದಂತೆ ಇನ್ನೂ ಕೆಲ ಧಾರಾವಾಹಿಗಳಲ್ಲಿ ನಟಿಸಿರುವ ಕಾವ್ಯಾ ಗೌಡ (ಕಾವ್ಯಾ ಗೌಡ) ಅವರ ಕುಟುಂಬದ ಜಗಳ ಬೀದಿ ರಂಪವಾಗಿ ಬದಲಾಗಿದೆ. ಕಾವ್ಯಾ ಮತ್ತು ಅವರ ಓರಗಿತ್ತಿ ಪ್ರೇಮ ಹಾಗೂ ಕಾವ್ಯಾರ ಪತಿ ಹಾಗೂ ಪ್ರೇಮಾರ ಪತಿಯ ನಡುವೆ ಜಗಳ, ಕಾದಾಟಗಳು ನಡೆದವು. ಕೆಲವು ದಿನಗಳ ಹಿಂದೆ ಕಾವ್ಯಾ ಹಾಗೂ ಅವರ ಪತಿ ಈ ಬಗ್ಗೆ ದೂರು ದಾಖಲಿಸಿದ್ದರು. ಪ್ರೇಮಾ ಸಹ ಆ ಬಳಿಕ ಕಾವ್ಯಾ ವಿರುದ್ಧ ದೂರು ದಾಖಲಿಸಿದ್ದರು. ಆದರೆ ಇದೀಗ ಕಾವ್ಯಾ ಅವರ ವಿಡಿಯೋ ಸಾಕ್ಷಿ ಬಿಡುಗಡೆ ಮಾಡಿದ್ದು, ಪ್ರೇಮಾನೇ ಹಲ್ಲೆ ಮಾಡಿದ್ದಾರೆ ಎಂಬುದಕ್ಕೆ ಸಾಕ್ಷ್ಯ ಒದಗಿಸಿದ್ದಾರೆ.

ಪ್ರೇಮಾ ತಮ್ಮ ಮೇಲೆ ಚಪ್ಪಲಿ ಎಸೆದು, ಹಲ್ಲೆ ಮಾಡಿದ್ದಾರೆ ಎಂದು ಇದೀಗ ಕಾವ್ಯಾ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಆ ಬಗ್ಗೆ ಮಾತನಾಡಿರುವ ಕಾವ್ಯ, ‘ನಾನು ಜನವರಿ 26ರಂದು ವಿಡಿಯೋ ಬಿಡುಗಡೆ ಮಾಡಬಹುದಿತ್ತು, ಆದರೆ ನಮ್ಮ ವಕೀಲರು ನೀಡಿದ ಸಲಹೆಯಿಂದಾಗಿ ಸುಮ್ಮನಾದೆ. ಸಾಕಷ್ಟು ವಿಡಿಯೋ ಸಾಕ್ಷಿ ನನ್ನ ಬಳಿ ಇತ್ತು, ಅದರಲ್ಲಿ ಕೆಲವಷ್ಟನ್ನೇ ಬಿಡುಗಡೆ ಮಾಡಿದ್ದೀನಿ. ಇನ್ನುಳಿದ ವಿಡಿಯೋಗಳನ್ನು ನ್ಯಾಯಾಲಯಕ್ಕೆ ನೀಡಿದ್ದೇನೆ’ ಕಾವ್ಯಾ.

ವಿಡಿಯೋದಲ್ಲಿ ರೆಕಾರ್ಡ್ ಆಗಿರುವ ಘಟನೆಯ ಹಿನ್ನೆಲೆ ನೀಡಿರುವ ಕಾವ್ಯ, ‘ಮಾತಿಗೆ ಮಾತು ಬೆಳೆಯುತ್ತಾ ಹೋದಾಗ ಅವರು ನನ್ನ ಮಗಳನ್ನು ‘ಕಳ್ಳಿ’ ಎಂದು ಕರೆದರು. ಒಬ್ಬ ತಾಯಿಯಾಗಿ ಅದನ್ನು ಸಹಿಸಲು ಸಾಧ್ಯವಾಗಲಿಲ್ಲ. ನನ್ನ ನಂಬಿಕೆ ಮತ್ತು ನನ್ನ ಮಗಳಿಗಾಗಿ ನಾನು ಧ್ವನಿ ಎತ್ತಿದ್ದೆ. ವಿಡಿಯೋದಲ್ಲಿ ನೀವು ನೋಡುತ್ತಿರುವುದಕ್ಕೆ ಹೆಚ್ಚಿನ ನೋವನ್ನು ನಾನು ಅನುಭವಿಸಿದ್ದೇನೆ. ಅದನ್ನೆಲ್ಲಾ ನೋಡಿದರೆ ನಿಮಗೂ ಬೇಜಾರಾಗುತ್ತದೆ’

ಇದನ್ನೂ ಓದಿ:ಹಲ್ಲೆ, ಅತ್ಯಾಚಾರ ಬೆದರಿಕೆ, ಕಳ್ಳತನ ಆರೋಪ: ನಟಿ ಕಾವ್ಯಾ ಗೌಡ ಹೇಳಿದ್ದೇನು?

ನಾನು ಎಲ್ಲೂ ಕೆಟ್ಟ ಪದಗಳನ್ನು ಬಳಸಿ ಮಾತನಾಡಿಲ್ಲ. ಕಾನೂನಿನ ಮೇಲೆ ನನಗೆ ನಂಬಿಕೆಯಿದೆ. ಸತ್ಯವಂತೂ ಹೊರಬಂದೇ ಬರುತ್ತದೆ. ನನ್ನ ಪರಿಸ್ಥಿತಿ ತುಂಬಾ ಕೆಟ್ಟದಾಗಿತ್ತು, ಅದಕ್ಕಾಗಿಯೇ ನಾನು ಈ ನಿರ್ಧಾರ ತೆಗೆದುಕೊಳ್ಳಬೇಕಾಗಿತ್ತು. ನಾನು ಕಳೆದ 14 ವರ್ಷಗಳಿಂದ ಚಿತ್ರರಂಗದಲ್ಲಿ ಕಷ್ಟಪಟ್ಟು ಈ ಸ್ಥಾನಕ್ಕೆ ಬಂದಿದ್ದೇನೆ. ನಾನು ಯಾವತ್ತೂ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿದವಳಲ್ಲ. ಆದರೆ ಇಂತಹ ಪರಿಸ್ಥಿತಿ ಬಂದಾಗ ನನ್ನ ಹೆಸರು ಹಾಳಾಗುತ್ತದೆ ಎಂಬ ಆತಂಕವಿತ್ತು. ಜೊತೆಗೆ, ತಮ್ಮ ಬೆಡ್ ರೂಂನಲ್ಲಿ ಸಿಸಿಟಿವಿ ಕ್ಯಾಮೆರಾ ಹಾಕಿರುವ ಬಗ್ಗೆ ಸ್ಪಷ್ಟನೆ ನೀಡಿರುವ ನಟಿ, ನನ್ನ ಮಗಳ ಭದ್ರತೆಗಾಗಿ ನಾವು ಕ್ಯಾಮೆರಾ ಹಾಕಿದ್ದೇವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 7:34 pm, ಭಾನುವಾರ, 22 ಫೆಬ್ರವರಿ 26



Source link

Leave a Reply

Your email address will not be published. Required fields are marked *