ಪ್ರಸ್ತುತ TI20 ನಲ್ಲಿ ನಿರತರಾಗಿರುವ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ವಿಚ್ಛೇದಿತ ಮಡದಿ ನತಾಶಾ ಸ್ಟಾಂಕೋವಿಕ್ ಹಾಗೂ ಮಗ ಅಗಸ್ತ್ಯಗೆ ದುಬಾರಿ ಬೆಲೆಯ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದರು. ವಾಸ್ತವವಾಗಿ ಹಾರ್ದಿಕ್ ಹಾಗೂ ನತಾಶಾ 2024 ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ ವಿಚ್ಛೇದನವನ್ನು ಪ್ರಕಟಿಸಿದರು. ವಿಚ್ಛೇದನದ ನಂತರ ಪಾಂಡ್ಯ, ಮಹಿಕಾ ಶರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.
ಏತನ್ಮಧ್ಯೆ ಹಾರ್ದಿಕ್ 3 ರಿಂದ 4 ಕೋಟಿ ರೂ. ಮೌಲ್ಯದ ಐಷಾರಾಮಿ SUV ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಉಡುಗೊರೆಯಾಗಿ ನೀಡಿದೆ. ನತಾಶಾ ಮತ್ತು ಅಗಸ್ತ್ಯ ಕಾರಿನೊಂದಿಗೆ ಪೋಸ್ ನೀಡಿರುವ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹಾರ್ದಿಕ್ ಪಾಂಡ್ಯ ಈ ಉಡುಗೊರೆಯನ್ನು ತಮ್ಮ ಮಗ ಅಗಸ್ತ್ಯನಿಗೆ ನೀಡಿದಾದರೂ ಅಗಸ್ತ್ಯನನ್ನು ನೋಡಿಕೊಳ್ಳುವ ಅವರ ಮಾಜಿ ಪತ್ನಿ ನತಾಶಾ ಕೂಡ ಕಾರನ್ನು ಸ್ವೀಕರಿಸಲು ಅವರಿಗೆ ಬಂದಿದ್ದರು.