ಪ್ರತಿಭಟನೆ ವೇಳೆ ಲಾಠಿಜಾರ್ಜ್ಚಿತ್ರ ಕ್ರೆಡಿಟ್ ಮೂಲ: tv9 ಕನ್ನಡ
ಚಿಕ್ಕಮಗಳೂರು, ಫೆಬ್ರವರಿ 22: ಕಾಫಿನಾಡಿನಲ್ಲಿ ಕಾಡಾನೆ (ಆನೆ) ದಾಳಿಗೆ ಮತ್ತೊಂದು ಬಲಿಯಾಗಿದೆ. ಕೇವಲ 7 ದಿನಗಳ ಅಂತರದಲ್ಲಿ ಒಂದೇ ಸ್ಥಳದಲ್ಲಿ ಇಬ್ಬರನ್ನ ಕಾಡಾನೆ ಬಲಿ (ಸಾವು) ಪಡೆದಿದ್ದು ಆಕ್ರೋಶಕ್ಕೆ. ಆನೆ ಹಾವಳಿಗೆ ಶಾಶ್ವತ ಪರಿಹಾರ ಬೇಕು ಎಂದು ಸಾವಿರಾರು ಜನರು ರಾಜ್ಯ ಹೆದ್ದಾರಿ ಬಂದ್ ಮಾಡಿ ರಸ್ತೆಯಲ್ಲಿ ಮೃತ ದೇಹವಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಜನರು ಮತ್ತು ಪೊಲೀಸರ ಮಧ್ಯೆ ತಳ್ಳಾಟ ನೂಕಾಟ ಉಂಟಾಗಿದೆ. ಹೀಗಾಗಿ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಲಾಠಿಚಾರ್ಜ್ ಕೂಡ ನಡೆದಿದೆ. ಇನ್ನು ಮಾಜಿ ಶಾಸಕ ಜೀವರಾಜ್, ಜೆಡಿಎಸ್ ವಕ್ತಾರ ಸುಧಾಕರ್ ಶೆಟ್ಟಿ ಸೇರಿದಂತೆ 25ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.
ಚಿಕ್ಕಮಗಳೂರು ಭಾಗದ ಜನರಿಗೆ ಕಾಡಾನೆ ಕಾಟದಿಂದ ತಪ್ಪಿಸಿಕೊಳ್ಳಲು ಆಗ್ತಿಲ್ಲ. ಎಷ್ಟೇ ಹೋರಾಟ ನಡೆಸಿದರೂ ಮಾನವ, ಕಾಡುಪ್ರಾಣಿ ಸಂಘರ್ಷ ನಿಲ್ಲುತ್ತಿಲ್ಲ. ವಾರದ ಹಿಂದಷ್ಟೇ ಕಾಡಾನೆ ದಾಳಿಗೆ ಹಾವೇರಿ ಮೂಲದ ಕಾರ್ಮಿಕ ಯಲ್ಲಪ್ಪ ಬಲಿ ಆಗಿದ್ದಾನೆ. ಎಂದು ಆಕ್ರೋಶ ಹೊರಹಾಕಿದ್ದಂತೆ ದಾಳಿ ಮಾಡ್ತಿರೋ ಆನೆಯನ್ನ ಹಿಡಿಯೋದಾಗಿ ಅರಣ್ಯ ಇಲಾಖೆ ಭರವಸೆ ನೀಡಿತ್ತು. ಹೀಗಿರುವಾಗಲೇ ಇಂದು ಮತ್ತೊಬ್ಬ ಕಾರ್ಮಿಕ ಮಹಿಳೆ ಕಾಡಾನೆ ದಾಳಿಗೆ ಬಲಿಯಾಗಿದ್ದಾಳೆ.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ! ಕೊನೆಗೂ ಸೆರೆ ಸಿಕ್ತು ಕಿಲ್ಲರ್ ಒಂಟಿ ಸಲಗ
ವಿಜಯನಗರ ಜಿಲ್ಲೆಯ ಹೊಸಪೇಟೆಯ ಬೋರಮ್ಮ ಅನ್ನೋ ಮಹಿಳೆ ತುತ್ತಿನ ಚೀಲ ತುಂಬಿಸಿಕೊಳ್ಳೋಕೆ ಚಿಕ್ಕಮಗಳೂರಿಗೆ ಬಂದಿದ್ದರು. ತಾಲೂಕಿನ ಪುರ ಗ್ರಾಮದ ಕಾಫಿತೋಟದಲ್ಲಿ ಕೆಲಸ ಮಾಡ್ತಿದ್ರು. ಈ ವೇಳೆ ಏಕಾಏಕಿ ಕಾಡಾನೆ ದಾಳಿ ಮಾಡಿದ್ದು, ಅಲ್ಲೇ ಉಸಿರು ನಿಲ್ಲಿಸಿದ್ದಾರೆ.
ರಸ್ತೆಯಲ್ಲೇ ಶವವಿಟ್ಟು ಆಕ್ರೋಶ: 2 ಕಿ.ಮೀ ಟ್ರಾಫಿಕ್‌ಜಾಮ್!
ಮಹಿಳೆ ಸಾವಿನ ವಿಷಯ ಗೊತ್ತಾಗ್ತಿದ್ದಂತೆ ಕೇರಳದ ಜನರು ಕಡಬಗೆರೆಯಲ್ಲಿ ಅಂಗಡಿ ಮುಂಗಟ್ಟು ಬಂದ್ ಮಾಡಿ ರಸ್ತೆಗೆ ಇಳಿದಿದ್ದಾರೆ. ರಸ್ತೆಯಲ್ಲೇ ಶವವಿಟ್ಟು ಆಕ್ರೋಶ ಹೊರಹಾಕಿದರು. ಮೃತರ ಕುಟುಂಬಕ್ಕೆ 50 ಲಕ್ಷ ರೂ ಪರಿಹಾರ ಕೊಡ್ಬೇಕು ಅಂತಾ ರಸ್ತೆಯಲ್ಲೇ ಶಾಮಿಯಾನ ಹಾಕಿಕೊಂಡು ಹೋರಾಟ ನಡೆಸಿದ್ದಾರೆ. ಇದ್ರಿಂದ ಎರಡು ಕಿಲೋ ಮೀಟರ್‌ವರೆಗೂ ಟ್ರಾಫಿಕ್ ಜಾಮ್ ಆಗಿದೆ. ಚಿಕ್ಕಮಗಳೂರು-ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಸಾಗ್ತಿದ್ದ ಸವಾರರು ಪರದಾಟವಾಗಿದ್ದರು.
ಖಾಕಿ ಲಾಠಿ ಲಘು ಪ್ರಹಾರ! 25ಕ್ಕೂ ಹೆಚ್ಚು ಜನರ ಬಂಧನ
ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಹೋರಾಟ ಮಾಡಿದರೂ ಯಾರಿಗೆ ಬಂದಿರಲಿಲ್ಲ. ಮಧ್ಯಾಹ್ನ ಸ್ಥಳಕ್ಕೆ ಬಂದ ಶಾಸಕ ಟಿಡಿ ರಾಜೇಗೌಡ ಹಾಗೂ ಕೊಪ್ಪ ಡಿಎಫ್ ಒಗೂ ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು. ಬಳಿಕ ಎಸ್‌ಪಿ, ಜಿಲ್ಲಾಧಿಕಾರಿಗಳು ಸ್ಪಾಟ್‌ಗೆ ಬಂದು ಮನವೊಲಿಸೋ ಪ್ರಯತ್ನ ಮಾಡಿದರು. ಅಷ್ಟೇ ಅಲ್ಲ ರಸ್ತೆ ಮಧ್ಯದಲ್ಲಿದ್ದ ಮಹಿಳೆ ಮೃತದೇಹವನ್ನ ಆಯಂಬುಲೆನ್ಸ್‌ನಲ್ಲಿಟ್ಟು ಆಸ್ಪತ್ರೆ ರವಾನಿಸಲು ಮುಂದಾದರು. ಈ ವೇಳೆ ಪ್ರತಿಭಟನಾಕಾರರು ಶವ ತೆಗೆಯದಂತೆ ಆಯಂಬುಲೆನ್ಸ್‌ಗೆ ಅಡ್ಡ ಕುಳಿತರು. ಪೊಲೀಸರು ಹಾಗೂ ಹೋರಾಟಗಾರರ ನಡುವೆ ನೂಕಾಟ-ತಳ್ಳಾಟ ಆಗ್ತಿದ್ದಂತೆ ಲಘು ಲಾಠಿಪ್ರಹಾರವೇ ನಡೆದಿದೆ. ಇನ್ನು ಈ ವೇಳೆ ಮಾಜಿ ಶಾಸಕ ಜೀವರಾಜ್, ಜೆಡಿಎಸ್ ವಕ್ತಾರ ಸುಧಾಕರ್ ಶೆಟ್ಟಿ ಸೇರಿದಂತೆ 25ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಕಾಫಿ ತೋಟದ ಕಾರ್ಮಿಕ ಸಾವು!
ಲಾಠಿಚಾರ್ಜ್ ವೇಳೆ ಕೊಪ್ಪ ಠಾಣೆಯ ಲೇಡಿ ಕಾನ್ ಟೇಬಲ್ ರೇಖಾಗೆ ಕಿವಿಗೆ ಗಾಯವಾಗಿದ್ದು, ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಲೇಡಿ ಕಾನ್ ಟೇಬಲ್ ರೇಖಾ ಕಿವಿಗೆ ಕಲ್ಲು ಬಿದ್ದಿರುವ ಶಂಕೆ ವ್ಯಕ್ತವಾಗಿದೆ.
ಪ್ರತಿಭಟನಾಕಾರರ ಮನವೊಲಿಸುವಲ್ಲಿ ವಿಫಲವಾದ ಸಮಸ್ಯೆ
ಇನ್ನು ಡಿಸಿ ನಾಗರಾಜ್ ಬರುವಂತೆ ಪಟ್ಟು ಹಿಡಿದು ಕುಳಿತಿದ್ದ ನೂರಾರು ಹೋರಾಟಗಾರರು ಅವರು ಬರುತ್ತಿದ್ದಂತೆ ಆಕ್ರೋಶ ಹೆಚ್ಚಾಯಿತು. ಮನವೊಲಿಸುವ ಪ್ರಯತ್ನ ಮಾಡಿದರು ಹೋರಾಟಗಾರರ ಬಗ್ಗದೆ ನಡೆ ವಿರುದ್ಧ ಭಾರೀ ಆಕ್ರೋಶ. ಬೆಳಗ್ಗೆ ಇಂದು ಹೋರಾಟ ಮಾಡಿದರೂ ನಿಮಗೆ ಮಾಹಿತಿ ಸಿಕ್ಕಿಲ್ಲವಾ ಎಂದು ಪ್ರಶ್ನಿಸಿದ್ದು, ಪ್ರತಿಭಟನಾಕಾರರ ಮನವೊಲಿಸಲು ಸಂಪೂರ್ಣ ವಿಫಲವಾಗಿದೆ.
ಜಿಲ್ಲಾಧಿಕಾರಿ ನಾಗರಾಜ್ ಹೇಳಿದ್ದಾರೆ
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿ ನಾಗರಾಜ್, ದೊಡ್ಡ ಮಟ್ಟದಲ್ಲಿ ಲಾಠಿಚಾರ್ಜ್ ಮಾಡಿಲ್ಲ. ಪೊಲೀಸ್ ಸಿಬ್ಬಂದಿ ಗುಂಪು ಚದುರಿಸುವ ಕೆಲಸ ಮಾಡಿದ್ದಾರೆ. ಪ್ರಚೋದನೆ ಮಾಡುವವರನ್ನು ಕರೆದುಕೊಂಡು ಹೋಗಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ಮಾಡಲು ಅವಕಾಶ ನೀಡಿದ್ದೆವು. ಸರ್ಕಾರ ಕಾಡಾನೆ ದಾಳಿಯ ಸಂಕಷ್ಟ ಕ್ರಮಕೈಗೊಂಡಿತು. ಪ್ರಮುಖ ರಸ್ತೆ ಬಂದ್ ಆಗಿದೆ. ಹೀಗಾಗಿ ಜನರಿಗೆ ತೊಂದರೆಯಾಗಿದೆ. ರಸ್ತೆ ಕ್ಲಿಯರ್ ಮಾಡುವ ನಾವು ಕ್ರಮಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.
ನಾಳೆ ಬಂದ್ ಗೆ ಕರೆ
ಇನ್ನು ರಕ್ಷಣಾ, ಪೊಲೀಸ್ ಇಲಾಖೆ ವಿರುದ್ಧ ಬಿಜೆಪಿ ಸೇರಿದಂತೆ ಮಲೆನಾಡು ನಾಗರಿಕ ವೇದಿಕೆ ರೈತ ಸಂಘಟನೆಗಳ ಒಕ್ಕೂಟದಿಂದ ನಾಳೆ ಶೃಂಗೇರಿ ವಿಧಾನಸಭಾ ಕ್ಷೇತ್ರ ಬಂದ್‌ಗೆ ಕರೆ ನೀಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.