
ಇಸ್ರೇಲ್ ಜತೆ ಸೇರಿಕೊಂಡು ಅಮೆರಿಕ ಇರಾನ್ ಮೇಲೆ ದಾಳಿ ಮಾಡಬಹುದು ಇಲ್ಲವೇ ಅಲ್ಲಿನ ಸರ್ವೋಚ್ಚ ಧಾರ್ಮಿಕ ನಾಯಕ ಅಯಾತೊಲ್ಲಾ ಅಲಿ ಖಮೇನಿಯನ್ನು ಹತ್ಯೆ ಮಾಡಬಹುದು ಎಂಬ ವರದಿಗಳ ನಡುವೆಯೇ, ಒಂದೊಮ್ಮೆ ತಾವು ಇಲ್ಲವಾದರೆ ಏನು ಮಾಡಬೇಕು ಎಂದು ಖಮೇನಿ ತಮ್ಮ ಆಪ್ತರಿಗೆ ವಿವರಿಸಿದ್ದಾರೆ ಎನ್ನಲಾಗಿದೆ.
ಟೆಹ್ರಾನ್: ಇಸ್ರೇಲ್ ಜತೆ ಸೇರಿಕೊಂಡು ಅಮೆರಿಕ ಇರಾನ್ ಮೇಲೆ ದಾಳಿ ಮಾಡಬಹುದು ಇಲ್ಲವೇ ಅಲ್ಲಿನ ಸರ್ವೋಚ್ಚ ಧಾರ್ಮಿಕ ನಾಯಕ ಅಯಾತೊಲ್ಲಾ ಅಲಿ ಖಮೇನಿಯನ್ನು ಹತ್ಯೆ ಮಾಡಬಹುದು ಎಂಬ ವರದಿಗಳ ನಡುವೆಯೇ, ಒಂದೊಮ್ಮೆ ತಾವು ಇಲ್ಲವಾದರೆ ಏನು ಮಾಡಬೇಕು ಎಂದು ಖಮೇನಿ ತಮ್ಮ ಆಪ್ತರಿಗೆ ವಿವರಿಸಿದ್ದಾರೆ ಎನ್ನಲಾಗಿದೆ.
ಜೀವಕ್ಕೆ ಕುತ್ತು ಇರುವುದನ್ನು ಕಂಡುಕೊಂಡಿರುವ ಖಮೇನಿ,
ಜೀವಕ್ಕೆ ಕುತ್ತು ಇರುವುದನ್ನು ಕಂಡುಕೊಂಡಿರುವ ಖಮೇನಿ, ತಮಗೆ ಆಪ್ತನೂ ಆಗಿರುವ ರೆವಲ್ಯೂಷ್ನರಿ ಗಾರ್ಡ್ಸ್‌ನ ಮಾಜಿ ಕಮಾಂಡರ್ ಮತ್ತು ರಾಜಕಾರಣಿ ಅಲಿ ಲಾರಿಜಾನಿಯನ್ನು ಆಡಳಿತ ನೋಡಿಕೊಳ್ಳಲು ನೇಮಿಸಲು ಸೂಚಿಸಿದ್ದಾರೆ. ಇದಕ್ಕೆ ಪುಷ್ಟಿ ಕೊಡುವಂತೆ, ಖಮೇನಿ ವಿರುದ್ಧ ಇರಾನ್‌ನಲ್ಲಿ ನಡೆದ ಪ್ರತಿಭಟನೆಯನ್ನು ಹತ್ತಿಕ್ಕುವುದು, ಅಮೆರಿಕ ಜತೆ ಅಣ್ವಸ್ತ್ರ ಸಂಬಂಧಿ ಮಾತುಕತೆ ನಡೆಸುವುದು, ರಷ್ಯಾ, ಕತಾರ್ ಮತ್ತು ಒಮಾನ್ ಸೇರಿದಂತೆ ಪ್ರಾದೇಶಿಕ ಮಿತ್ರರಾಷ್ಟ್ರಗಳೊಂದಿಗೆ ನಿಕಟವಾಗಿ ಸಮನ್ವಯ ಸಾಧಿಸುವಲ್ಲಿ ಲಾರಿಜಾನಿ ಮಹತ್ವದ ಪಾತ್ರ ವಹಿಸಿದ್ದ.
ಸರ್ವೋಚ್ಚ ನಾಯಕನಾಗಿ ನೇಮಿಸಲಾಗುವುದಿಲ್ಲ
ಆದರೆ ಶಿಯಾ ಪಂಗಡಕ್ಕೆ ಸೇರಿದವರಲ್ಲದ ಕಾರಣ ಲಾರಿಜಾನಿಯನ್ನು ಸರ್ವೋಚ್ಚ ನಾಯಕನಾಗಿ ನೇಮಿಸಲಾಗುವುದಿಲ್ಲ.