ಮಾರ್ಚ್ 19ರಂದು ‘ಟಾಕ್ಸಿಕ್’ ಹಾಗೂ ‘ಧುರಂದರ್ 2’ ಸಿನಿಮಾಗಳು ಒಟ್ಟಿಗೆ ತೆರೆಗೆ ಬರುತ್ತಿವೆ. ಈ ಚಿತ್ರಗಳ ಬಗ್ಗೆ ನಿರೀಕ್ಷೆ ಇದೆ. ಸಿನಿಮಾ ಒಟ್ಟಿಗೆ ತೆರೆಗೆ ಬರುವುದರಿಂದ ಖಂಡಿತ ಒಂದು ಸಿನಿಮಾಗೆ ನಷ್ಟವಾಗುತ್ತದೆ ಎಂಬ ನಂಬಿಕೆ ಅನೇಕರದ್ದು. ಆರ್ ಜೀವಿ ಕೂಡ ಇದೇ ರೀತಿಯ ಅಭಿಪ್ರಾಯ. ಆದರೆ, ಮುಖ್ಯವಾಗಿ ಅವರಿಗೆ ‘ಟಾಕ್ಸಿಕ್’ ಬಗ್ಗೆ ದ್ವೇಷ ಇದ್ದಂತೆ. ಅವರು ಮೊದಲಿನಿಂದಲೂ ಸಿನಿಮಾ ಬಗ್ಗೆ ನೆಗೆಟಿವ್ ವಿಷಯ ಸ್ಪ್ರೆಡ್ ಮಾಡುವ ಕೆಲಸ ಮಾಡುತ್ತಿದ್ದಾರೆ.
‘ಟಾಕ್ಸಿಕ್’ ಹಾಗೂ ‘ಧುರಂಧರ್ 2’ ರಿಲೀಸ್ ಆಗುತ್ತಿದೆ. ‘ಧುರಂದರ್’ ಕಲೆಕ್ಷನ್ ಎದುರು ‘ಕೆಜಿಎಫ್ 2’ ಕಲೆಕ್ಷನ್ ತುಂಬಾನೇ ಸಣ್ಣದಾಗಿ ಕಾಣಿಸುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ‘ಧುರಂಧರ 2’ ಎದುರು ‘ಟಾಕ್ಸಿಕ್’ ಬಂದರೆ ಯಾವ ರೀತಿಯಲ್ಲಿ ಇರಬಹುದು ಎಂದು ತಿಳಿಯಿತು ಅವರ ಮಾತಿನ ಅರ್ಥ.
ದಿ #ಧುರಾಕ್ಸಿಕ್ ಪಾರ್ಕ್ ಸಂಖ್ಯೆ, ನಾನು ಎರಡು ದೊಡ್ಡ ಚಲನಚಿತ್ರಗಳ ಬಗ್ಗೆ ಮಾತನಾಡುತ್ತಿಲ್ಲ #ಧುರಂಧರ2 ಮತ್ತು #ವಿಷಕಾರಿ ಮಾರ್ಚ್ 19 ರಂದು ಬಿಡುಗಡೆಯಾಗುತ್ತಿದೆ. ನಾನು ನಿಜವಾಗಿ ಹೇಳುತ್ತಿರುವುದು ಭಾರತೀಯ ಸಿನಿಮಾಗಳ ಗ್ರ್ಯಾಂಡ್ ಅರೇನಾದಲ್ಲಿ ಹಿಂದೆಂದೂ ನೋಡಿರದ ಅಥವಾ ಅನುಭವಿಸದ ಪೌರಾಣಿಕ ಮೂಲಮಾದರಿಯ ಸ್ಫೋಟದ ಬಗ್ಗೆ. ಇದು ಡೇವಿಡ್ ಮತ್ತು ಗೋಲಿಯಾತ್ ನಡುವಿನ ಯುದ್ಧ…
– ರಾಮ್ ಗೋಪಾಲ್ ವರ್ಮಾ (@RGVzoomin) ಫೆಬ್ರವರಿ 22, 2026
‘ಈಗ ರಿಲೀಸ್ ಆಗುತ್ತಿರುವ ಸಿನಿಮಾಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಧುರಂಧ್ರ ಪ್ರದರ್ಶನದ ಬುದ್ಧಿಮತ್ತೆಯನ್ನು ಗೌರವಿಸುತ್ತದೆ ಮತ್ತು ಟಾಕ್ಸಿಕ್ ಜನರ ಮೂರ್ಖತನವನ್ನು ವೀಕ್ಷಿಸುತ್ತದೆ. ಕೆಜಿಎಫ್ 2 ಒಂದು ಸ್ಥಳೀಯ ಚಿತ್ರವಾಗಿದ್ದು, ಅದು ಜನಸಾಮಾನ್ಯರಲ್ಲಿನ ಮೂರ್ಖತನವನ್ನು ಟಾರ್ಗೆಟ್ ಮಾಡಿತ್ತು. ಧುರಂಧರ ಜನಸಾಮಾನ್ಯರಲ್ಲಿ ಬುದ್ಧಿವಂತಿಕೆಯನ್ನು ಟಾರ್ಗೆಟ್ ಮಾಡಿತ್ತು. ಈ ಮೊದಲು ಆರ್ಜಿವಿ ‘ಕೆಜಿಎಫ್ 2’ ಚಿತ್ರವನ್ನು ಹೊಗಳಿ ಮಾಡಿದ ಟ್ವೀಟ್ನ ತೋರಿಸಿ ಅವರಿಗೆ ಪಾಠ ಹೇಳಿಕೊಡಲಾಗಿದೆ.
ಈಗ ಈ ವಿಷಯದಲ್ಲಿ ಆರ್ ಜೀವಿಯನ್ನು ಟ್ರೋಲ್ ಮಾಡಲಾಗಿದೆ. ಆ ಬಳಿಕ ಅವರು ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ. ಅರ್ಥವಾಗದ ಎಲ್ಲಾ ಡಂಬೋಗಳಿಗೆ, ನಾನು ಸ್ಪಷ್ಟಪಡಿಸಲು ಬಯಸುವುದು ಏನೆಂದರೆ, ‘2 ಬಿಡುಗಡೆಗಳ ಸಂದರ್ಭದಲ್ಲಿ, ನಾನು ಸಿನಿಮಾದ ಶೈಲಿಗಳ ಬಗ್ಗೆ ಮಾತನಾಡುತ್ತಿದ್ದೇನೆ ನಿರ್ದಿಷ್ಟವಾಗಿ ಒಂದು ಚಿತ್ರದ ಅಲ್ಲ ಬಗ್ಗೆ’.
ರಂದು ಪ್ರಕಟಿಸಲಾಗಿದೆ – 7:02 am, ಸೋಮ, 23 ಫೆಬ್ರವರಿ 26