ಕೊರೊನಾ ಸಾಂಕ್ರಾಮಿಕಕ್ಕೂ ಮುನ್ನ, ಭಾರತೀಯ ರೈಲ್ವೆಯು ಹಿರಿಯ ನಾಗರಿಕರಿಗೆ ಟಿಕೆಟ್ ದರದಲ್ಲಿ ರಿಯಾಯಿತಿ ನೀಡುತ್ತಿತ್ತು. ಆದರೆ, ಕೊರೊನಾ ಬಂದಾಗ ದೇಶದಲ್ಲಿದ್ದ ಆರ್ಥಿಕ ಸಂಕಷ್ಟದಿಂದಾಗಿ ಈ ಸೌಲಭ್ಯವನ್ನು ನಿಲ್ಲಿಸಲಾಗಿತ್ತು.ಭಾರತೀಯ ರೈಲ್ವೆ ವಿಶ್ವದ ಅತಿದೊಡ್ಡ ರೈಲು ಜಾಲಗಳಲ್ಲಿ ಒಂದಾಗಿದೆ. ಪ್ರತಿದಿನ ಲಕ್ಷಾಂತರ ಜನರು ಇದರಲ್ಲಿ ಪ್ರಯಾಣಿಸುತ್ತಾರೆ. ರೈಲುಗಳಲ್ಲಿ ಮತ್ತು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತೆ. ಅದರಲ್ಲೂ ಹಿರಿಯ ನಾಗರಿಕರಿಗೆ ಕೆಳಗಿನ ಬರ್ತ್, ವೀಲ್‌ಚೇರ್, ಟಿಕೆಟ್ ಕೌಂಟರ್‌ಗಳಲ್ಲಿ ಪ್ರತ್ಯೇಕ ಸಾಲಿನಂತಹ ಸೌಲಭ್ಯಗಳಿವೆ.ಕೊರೊನಾ ಸಾಂಕ್ರಾಮಿಕಕ್ಕೂ ಮುನ್ನ, ರೈಲಿನಲ್ಲಿ ಹಿರಿಯ ನಾಗರಿಕರಿಗೆ ಟಿಕೆಟ್ ದರದಲ್ಲಿ ರಿಯಾಯಿತಿ ಸಿಗುತ್ತಿತ್ತು. 60 ವರ್ಷ ಮೇಲ್ಪಟ್ಟ ಪುರುಷರಿಗೆ ಶೇ. 40 ಮತ್ತು 58 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಶೇ. 50 ರಷ್ಟು ರಿಯಾಯಿತಿ ಇತ್ತು. ಆದರೆ, ಕೊರೊನಾ ಬಂದಾಗ ದೇಶದಲ್ಲಿದ್ದ ಆರ್ಥಿಕ ಸಂಕಷ್ಟದಿಂದಾಗಿ ಈ ಸೌಲಭ್ಯವನ್ನು ನಿಲ್ಲಿಸಲಾಯಿತು.ಕೊರೊನಾ ಮುಗಿದು ಹಲವು ವರ್ಷಗಳೇ ಕಳೆದರೂ ಹಿರಿಯ ನಾಗರಿಕರಿಗೆ ದರ ರಿಯಾಯಿತಿ ಮತ್ತೆ ಸಿಕ್ಕಿಲ್ಲ. ಕೇಂದ್ರ ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು, ಆದರೆ ಜನರಿಗೆ ನಿರಾಸೆಯಾಗಿದೆ. ಸಂಸತ್ತಿನ ಅಧಿವೇಶನದಲ್ಲಿ ಹಲವು ಸದಸ್ಯರು ಹಿರಿಯ ನಾಗರಿಕರ ರಿಯಾಯಿತಿ ಬಗ್ಗೆ ಬೇಡಿಕೆ ಇಟ್ಟಿದ್ದರು.
ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಕೇಂದ್ರ ಸರ್ಕಾರ, ‘ರೈಲುಗಳಲ್ಲಿ ಈಗಾಗಲೇ ಪ್ರಯಾಣಿಕರಿಗೆ ರಿಯಾಯಿತಿ ದರದಲ್ಲೇ ಟಿಕೆಟ್ ನೀಡಲಾಗುತ್ತಿದೆ. ದರಗಳು ಈಗಾಗಲೇ ಕಡಿಮೆ ಇವೆ. ಹಿರಿಯ ನಾಗರಿಕರಿಗೆ ಮತ್ತೆ ರಿಯಾಯಿತಿ ನೀಡಿದರೆ ಹೆಚ್ಚುವರಿ ಆರ್ಥಿಕ ಹೊರೆಯಾಗುತ್ತದೆ’ ಎಂದು ಹೇಳಿತ್ತು.

ಇದನ್ನೂ ಓದಿ: ಗುಜರಾತಿನ ವಿಶಿಷ್ಟ ಗ್ರಾಮ… ಇಲ್ಲಿ ಯಾವ ಮನೆಯಲ್ಲೂ ಒಲೆ ಉರಿಯಲ್ಲ, ಅಡುಗೆ ಮಾಡಲ್ಲ…

ಕೇಂದ್ರ ಸರ್ಕಾರ ಮತ್ತು ರೈಲ್ವೆ ಮಂಡಳಿ ಈ ಬಗ್ಗೆ ಚರ್ಚಿಸುತ್ತಿವೆ ಎಂಬ ವರದಿಗಳಿವೆ. ಮಾರ್ಚ್‌ನಲ್ಲಿ ನಡೆಯಲಿರುವ ರೈಲ್ವೆ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ. ಆ ನಂತರವೇ ಹಿರಿಯ ನಾಗರಿಕರಿಗೆ ದರ ರಿಯಾಯಿತಿ ಸಿಗುವುದೋ ಇಲ್ಲವೋ ಎಂಬುದು ತಿಳಿಯಲಿದೆ.

ಇದನ್ನೂ ಓದಿ: ಬೀಚ್ ನೋಡಲೆಂದು ಹೋದವರು ಅಕಸ್ಮಾತ್ ಈ 5 ವಸ್ತುಗಳನ್ನ ಮನೆಗೆ ತಂದ್ರೆ ಜೈಲೂಟ ಗ್ಯಾರಂಟಿ

Source link
ರೈಲಿನಲ್ಲಿ ಹಿರಿಯ ನಾಗರಿಕರಿಗೆ ಮತ್ತೆ ಸಿಗುತ್ತಾ ಟಿಕೆಟ್ ರಿಯಾಯಿತಿ? ಇಲ್ಲಿದೆ ಲೇಟೆಸ್ಟ್ ಅಪ್‌ಡೇಟ್!