T20 ವಿಶ್ವಕಪ್ 2026: ಟಿ20 ರಿಂದ 2026ರ ದ್ವಿತೀಯ ಸುತ್ತಿನ ಮೊದಲ ಪಂದ್ಯದಲ್ಲೇ ಭಾರತ ತಂಡ ಸೋಲನುಭವಿಸಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಬ್ಯಾಟ್ ಟಾಸ್ ಗೆದ್ದ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ 187 ರನ್ ಗಳಿಸಿತು, ಈ ಗುರಿಯನ್ನು ಭಾರತ ತಂಡವು ಕೇವಲ 111 ರನ್ ಗಳಿಸಿ ಆಲೌಟ್ ಆಯಿತು. ಈ ಮೂಲಕ ಸೌತ್ ಆಫ್ರಿಕಾ ತಂಡವು 76 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಸೌತ್ ಆಫ್ರಿಕಾ ತಂಡ ಈ ಭರ್ಜರಿ ಗೆಲುವಿನಿಂದಾಗಿ ಟೀಮ್ ಇಂಡಿಯಾದ ನೆಟ್ ರನ್ ರೇಟ್ -3.800 ಕ್ಕೆ ಕುಸಿದಿದೆ. ಭಾರತ ತಂಡದ ನೆಟ್ ರನ್ ರೇಟ್ ನೆಗೆಟಿವ್ ಇರುವ ಕಾರಣ ಮುಂಬರುವ ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಬೇಕು. ಈ ಭರ್ಜರಿ ಜಯದೊಂದಿಗೆ ಮಾತ್ರ ಟೀಮ್ ಇಂಡಿಯಾ ನೇರವಾಗಿ ಸೆಮಿಫೈನಲ್ ಗೇರಬಹುದು.
ಅಂದರೆ ಭಾರತ ತಂಡವು ತನ್ನ ಮುಂದಿನ ಪಂದ್ಯಗಳಲ್ಲಿ ಝಿಂಬಾಬ್ವೆ ಹಾಗೂ ವೆಸ್ಟ್ ಇಂಡೀಸ್ ತಂಡಗಳನ್ನು ಸೋಲಿಸಿದರೆ ಮಾತ್ರ ಸಾಕಾಗುವುದಿಲ್ಲ. ಏಕೆಂದರೆ ಈ ಎರಡು ತಂಡಗಳಿಗೆ ಇನ್ನೂ ತಲಾ ಮೂರು ಪಂದ್ಯಗಳಿವೆ. ಅದರಲ್ಲೂ ವೆಸ್ಟ್ ಇಂಡೀಸ್ ಹಾಗೂ ಝಿಂಬಾಬ್ವೆ ಮುಖಾಮುಖಿಯಲ್ಲಿ ಒಂದು ತಂಡ ಗೆಲ್ಲುವುದು ಖಚಿತ.
ಇಲ್ಲಿ ಝಿಂಬಾಬ್ವೆ ಅಥವಾ ವೆಸ್ಟ್ ಇಂಡೀಸ್ ಒಂದು ಪಂದ್ಯ ಗೆದ್ದರೆ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಲಿದೆ. ಜೊತೆಗೆ ಮ್ಯಾಚ್ ಗೆದ್ದರೆ ಒಟ್ಟು 4 ಅಂಕಗಳನ್ನು ಪಡೆಯಬಹುದು.
ಇತ್ತ ಟೀಮ್ ಇಂಡಿಯಾ ಮುಂದಿನ ಎರಡು ಮ್ಯಾಚ್ಗಳಲ್ಲಿ ಗೆದ್ದರೆ ಒಟ್ಟು 4 ಅಂಕಗಳನ್ನು ಮಾತ್ರ ಪಡೆಯಲಿದೆ. ಈ ಸಂದರ್ಭದಲ್ಲಿ ನೆಟ್ ರನ್ ರೇಟ್ ಪರಿಗಣನೆಗೆ ಬರಲಿದೆ.
ಆದರೆ ನೆಟ್ ರನ್ ರೇಟ್ ಲೆಕ್ಕಾಚಾರವಿಲ್ಲದೆ ಟೀಮ್ ಇಂಡಿಯಾ ಸೆಮಿಫೈನಲ್ ಗೇರಬೇಕಿದ್ದರೆ ಸೌತ್ ಆಫ್ರಿಕಾ ತಂಡ ಗೆದ್ದರೆ ಸಾಕು. ಅಂದರೆ ಆಫ್ರಿಕಾ ಪಡೆ ಮುಂದಿನ ಎರಡು ಮ್ಯಾಚ್ಗಳಲ್ಲಿ ಗೆದ್ದರೆ ಟೀಮ್ ಇಂಡಿಯಾ ನೇರವಾಗಿ ಸೆಮಿಫೈನಲ್ ಗೇರಬಹುದು. ಇದರ ಲೆಕ್ಕಾಚಾರ ಈ ಕೆಳಗಿನಂತಿದೆ..
- 2 ಗೆಲುವು: ಸೌತ್ ಆಫ್ರಿಕಾ ತಂಡವು ಝಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಗೆದ್ದರೆ ಒಟ್ಟು 6 ಅಂಕಗಳೊಂದಿಗೆ ಸೆಮಿಫೈನಲ್ ಗೇರಬಹುದು.
- 2 ಜಯ: ಭಾರತ ತಂಡವು ಝಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ತಂಡಗಳನ್ನು ಸೋಲಿಸಿದರೆ ಒಟ್ಟು 4 ಅಂಕಗಳನ್ನು ಪಡೆಯಲಿದೆ.
- 2 ತಂಡಗಳು: ಸೌತ್ ಆಫ್ರಿಕಾ ಮತ್ತು ಭಾರತದ ವಿರುದ್ಧ ಝಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ಸೋತರೆ, ಈ ಎರಡು ತಂಡಗಳಿಗೆ ಮತ್ತೆ 4 ಅಂಕಗಳನ್ನು ಪಡೆಯಲು ವಿಫಲವಾಗಿದೆ.
- 2 ತಂಡಗಳ ಪ್ರವೇಶ: ವೆಸ್ಟ್ ಇಂಡೀಸ್, ಝಿಂಬಾಬ್ವೆಗೆ 4 ಅಂಕಗಳನ್ನು ಪಡೆಯಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾದರೆ, ಅಗ್ರಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಮತ್ತು ದ್ವಿತೀಯ ಸ್ಥಾನದಲ್ಲಿರುವ ಭಾರತ ತಂಡಗಳು ಸೆಮಿಫೈನಲ್ ಗೇರಲಿದೆ.
ಅಂದರೆ ಸೌತ್ ಆಫ್ರಿಕಾ ತಂಡವು ಝಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ತಂಡಗಳನ್ನು ಸೋಲಿಸಿದರೆ, ಭಾರತ ತಂಡವು ತನ್ನ ಮುಂದಿನ ಪಂದ್ಯಗಳಲ್ಲಿ ನೆಟ್ ರನ್ ರೇಟ್ ಲೆಕ್ಕಾಚಾರದಲ್ಲಿ ಗೆಲ್ಲಬೇಕಾದ ಅವಶ್ಯಕತೆ ಇರುವುದಿಲ್ಲ. ಜೊತೆಗೆ 2 ಮ್ಯಾಚ್ನಲ್ಲಿ ಗೆದ್ದ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಬಹುದು.
ಇದನ್ನೂ ಓದಿ: ಪವರ್ಪ್ಲೇನಲ್ಲಿ ಪಂದ್ಯ ಗೆಲ್ಲಲು ಸಾಧ್ಯವಿಲ್ಲ, ಆದರೆ ಸೋಲಬಹುದು!
ಈ ಮೂಲಕ ನೆಟ್ ರನ್ ರೇಟ್ ಲೆಕ್ಕಾಚಾರವಿಲ್ಲದೆ ಟೀಮ್ ಇಂಡಿಯಾ ನೇರವಾಗಿ ಸೆಮಿಫೈನಲ್ಗೆ ಪ್ರವೇಶಿಸಬಹುದು. ಇಂತಹದೊಂದು ಸನ್ನಿವೇಶ ನಿರ್ಮಾಣವಾಗಬೇಕಿದ್ದರೆ ಸೌತ್ ಆಫ್ರಿಕಾ ತಂಡವು ಝಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಗೆಲ್ಲಲೇಬೇಕು.
ರಂದು ಪ್ರಕಟಿಸಲಾಗಿದೆ – 9:30 am, ಸೋಮ, 23 ಫೆಬ್ರವರಿ 26