ಸತತ ಮೂರು ಬಾರಿ ಡಕೌಟ್ ಆಗಿ ಫಾರ್ಮ್ ಕಳೆದುಕೊಂಡಿರುವ ಅಭಿಷೇಕ್ ಶರ್ಮಾ ಬದಲು ಸಂಜು ಸ್ಯಾಮ್ಸನ್‌ರನ್ನು ಆಡಿಸಬಹುದೇ ಎಂದು ಕೇಳಿದಾಗ, ಸೂರ್ಯಕುಮಾರ್ ಯಾದವ್ ನೀಡಿದ ಉತ್ತರ ಗಮನ ಸೆಳೆದಿತ್ತು. ತಂಡದಲ್ಲಿ ಯಾವುದೇ ಬದಲಾವಣೆ ಮಾಡುವ ಅಗತ್ಯವಿಲ್ಲ, ಟೀಮ್ ಬ್ಯಾಲೆನ್ಸ್ ಆಗಿದೆ ಎಂದು ಸೂರ್ಯ ಸ್ಪಷ್ಟಪಡಿಸಿದ್ದರು.
ಅಭಿಷೇಕ್ ಶರ್ಮಾ ಮತ್ತು ತಿಲಕ್ ವರ್ಮಾ ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸೂಪರ್ 8 ಹಂತದಲ್ಲಿ ಪಂದ್ಯದಲ್ಲೂ ಇಬ್ಬರೂ ಮಿಂಚಲು ವಿಫಲರಾದರು. ಈ ಮೂಲಕ ಸೂರ್ಯಕುಮಾರ್ ಯಾದವ್ ವಾದದಲ್ಲಿ ಹುರುಳಿಲ್ಲ ಎನ್ನುವುದು ಮತ್ತೆ ಸಾಬೀತಾಗಿದೆ.
ಕಳೆದ ಮೂರ್ನಾಲ್ಕು ಪಂದ್ಯಗಳಿಂದ ತಿಲಕ್ ಗಳಿಸಿದ್ದು 106 ರನ್ ಮಾತ್ರ. ಮೊದಲ ಮೂರು ಪಂದ್ಯಗಳಲ್ಲಿ ತಲಾ 25 ರನ್ ಗಳಿಸಿದ್ದರು. ಗ್ರೂಪ್ ಹಂತದಲ್ಲಿ ನೆದರ್ಲೆಂಡ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ 31 ರನ್ ಗಳಿಸಿದ್ದರು. 106 ರನ್ ಗಳಿಸಿದರೂ, ಅವರ ನಿಧಾನಗತಿಯ ಬ್ಯಾಟಿಂಗ್‌ಗೆ ಟೀಕೆ ವ್ಯಕ್ತವಾಗಿತ್ತು. ಸೂಪರ್ 8ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವೂ ತಿಲಕ್ ಫಾರ್ಮ್‌ಗೆ ಮರಳಲು ವಿಫಲರಾದರು. ಕೇವಲ ಒಂದು ರನ್ ಗಳಿಸಿ ಔಟಾದರು.ಇಂದಿನ ಪಂದ್ಯದಲ್ಲಿ ಅಭಿಷೇಕ್ ಗಳಿಸಿದ್ದು ಕೇವಲ 15 ರನ್. ಇದಕ್ಕೂ ಹಿಂದಿನ ಮೂರು ಪಂದ್ಯಗಳಲ್ಲಿ ಅವರು ಸೊನ್ನೆಗೆ ಔಟಾಗಿದ್ದರು. ಈ ಮೂಲಕ ನಾಲ್ಕು ಪಂದ್ಯಗಳಿಂದ ಅಭಿಷೇಕ್ ಗಳಿಕೆ ಕೇವಲ 15 ರನ್ ಆಗಿದೆ. ಆದರೆ, ಈ ವಿಶ್ವಕಪ್‌ನಲ್ಲಿ ಒಂದು ಪಂದ್ಯ ಆಡಿರುವ ಸಂಜು 22 ರನ್ ಗಳಿಸಿದ್ದಾರೆ.
ಅಭಿಷೇಕ್ ಬದಲು ಸಂಜುರನ್ನು ಆಡಿಸಬಹುದಲ್ಲವೇ ಎಂದು ಪತ್ರಕರ್ತರು ಕೇಳಿದಾಗ, ಸೂರ್ಯಕುಮಾರ್ ನಗುತ್ತಲೇ ಉತ್ತರಿಸಿದರು. ‘ಅಭಿಷೇಕ್ ಬದಲು ಸಂಜು ಆಡಬೇಕಾ ನಿಮ್ಮ ಅಭಿಪ್ರಾಯ? ಅಥವಾ ಮೂರನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಬದಲು ಸಂಜು ಬರಬೇಕೆ?’ ಎಂದು ಸೂರ್ಯ ಮರುಪ್ರಶ್ನೆ ಹಾಕಿದರು.

ಪವರ್‌ಪ್ಲೇನಲ್ಲಿ ತಂಡ 40-50 ರನ್ ಗಳಿಸಿ ಉತ್ತಮವಾಗಿಯೇ ಆಡುತ್ತಿದೆ. ಆದರೆ, ಎದುರಾಳಿಗಳು ಆಫ್ ಸ್ಪಿನ್ನರ್‌ಗಳನ್ನು ಬಳಸಿ ನಮ್ಮ ಟಾಪ್ 4 ಬ್ಯಾಟರ್‌ಗಳನ್ನು ಕಟ್ಟಿಹಾಕಲು ಯೋಚಿಸುತ್ತಿದ್ದಾರೆ. ವಿಶ್ವಕಪ್‌ಗೂ ಮುನ್ನ ಇಂತಹ ಸವಾಲನ್ನು ನಾವು ನಿರೀಕ್ಷಿಸಿರಲಿಲ್ಲ ಎಂದು ಸೂರ್ಯ ಹೇಳಿದರು.

ಕಳೆದ ಕೆಲವು ಪಂದ್ಯಗಳಲ್ಲಿ ವಿಫಲರಾಗಿದ್ದರೂ, ಯುವ ಆಟಗಾರ ಅಭಿಷೇಕ್ ಶರ್ಮಾರನ್ನು ಕೈಬಿಡಲು ಟೀಮ್ ಮ್ಯಾನೇಜ್‌ಮೆಂಟ್ ಸಿದ್ಧವಿಲ್ಲ ಎಂಬ ಸ್ಪಷ್ಟ ಸೂಚನೆಯನ್ನು ನಾಯಕ ನೀಡಿದರು. ‘ನಾವು ಫಾರ್ಮ್ ಇಲ್ಲದಿದ್ದಾಗ ಕಳೆದ ಒಂದು ವರ್ಷ ನಮ್ಮನ್ನು ಕಾಪಾಡಿದ್ದು ಅಭಿಷೇಕ್. ಈಗ ಅವನು ಫಾರ್ಮ್ ಕಳೆದುಕೊಂಡಾಗ ಅವನನ್ನು ಬೆಂಬಲಿಸುವುದು ನಮ್ಮ ಕರ್ತವ್ಯ’ ಎಂದು ಸೂರ್ಯಕುಮಾರ್ ಉತ್ತರಿಸಿದರು.

’ನಮಗೆ ಯಾವುದೇ ಆತಂಕಗಳಿಲ್ಲ. ಅಭಿಷೇಕ್ ಫಾರ್ಮ್ ಬಗ್ಗೆ ಚಿಂತೆ ಮಾಡುವವರನ್ನು ನೆನೆದು ನನಗೆ ಬೇಸರವಾಗುತ್ತಿದೆ. ಅಭಿಷೇಕ್ ರನ್ ಗಳಿಸಿಲ್ಲ ಎಂಬುದು ನಿಜ. ಆದರೆ, ಅವನು ರನ್ ಗಳಿಸಲು ಶುರು ಮಾಡಿದರೆ ಏನಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

ಕಳೆದ ಏಳು ಇನ್ನಿಂಗ್ಸ್‌ಗಳಲ್ಲಿ ಅಭಿಷೇಕ್ ಶರ್ಮಾ ಐದು ಬಾರಿ ಸೊನ್ನೆಗೆ ಔಟಾಗಿದ್ದಾರೆ. ಒಂದೇ ಕ್ಯಾಲೆಂಡರ್ ವರ್ಷದಲ್ಲಿ (ಅದೂ ಫೆಬ್ರವರಿ ತಿಂಗಳೊಳಗೆ) ಅತಿ ಹೆಚ್ಚು ಡಕೌಟ್ ಆದ ಭಾರತೀಯ ಆಟಗಾರ ಎಂಬ ಕೆಟ್ಟ ದಾಖಲೆ ಬರೆದಿದ್ದಾರೆ.

Source link
ಸಂಜುನೇ ಬೆಸ್ಟ್; ಸೂರ್ಯಕುಮಾರ್ ಯಾದವ್ ವಾದದಲ್ಲಿ ಹುರುಳಿಲ್ಲ ಎಂದು ಮತ್ತೆ ಸಾಬೀತಾಯ್ತು!