Bengaluru: ನಶೆ, ಮಾದಕ ಮಾತ್ರೆ ನೀಡಿ 19 ವರ್ಷದ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇ*ಪ್

Bengaluru: ನಶೆ, ಮಾದಕ ಮಾತ್ರೆ ನೀಡಿ 19 ವರ್ಷದ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇ*ಪ್

Bengaluru: ನಶೆ, ಮಾದಕ ಮಾತ್ರೆ ನೀಡಿ 19 ವರ್ಷದ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇ*ಪ್

ಬೆಂಗಳೂರಿನಲ್ಲಿ 19 ವರ್ಷದ ಖಾಸಗಿ ಕಾಲೇಜು ವಿದ್ಯಾರ್ಥಿನಿ ಮೇಲೆ ಆಕೆಯ ಸ್ನೇಹಿತರೇ ಸಾಮೂಹಿಕ ಅತ್ಯಾ*ಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಂತ್ರಸ್ತೆಗೆ ನಶೆ ಹಾಗೂ ಮಾದಕ ಮಾತ್ರೆ ನೀಡಿ ಈ ಕೃತ್ಯ ಎಸಗಲಾಗಿದ್ದು, ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ 19 ವರ್ಷದ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾ*ಚಾರ ನಡೆರದಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ನೇಹಿತರಿಂದಲೇ ಯುವತಿ ಮೇಲೆ ದೌರ್ಜನ್ಯ ನಡೆದಿದೆ.

ಬನ್ನೇರುಘಟ್ಟ ಖಾಸಗಿ ಕಾಲೇಜು ವಿದ್ಯಾರ್ಥಿನಿಯಾಗಿರುವ ಸಂತ್ರಸ್ತೆ, ಪಶ್ಚಿಮ ಬಂಗಾಳ ಮೂಲದ ಡಿಕ್ಸಿನ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇತ್ತೀಚೆಗೆ ಡಿಕ್ಸಿನ್ ಮತ್ತು ಮತ್ತೋರ್ವ ಗೆಳೆಯ ನಿಖಿಲ್ ಎಂಬಾತನೊಂದಿಗೆ ಸಂತ್ರಸ್ತೆ ವಿಲ್ಲಾಗೆ ತೆರಳಿದ್ದಳು.

ಈ ವೇಳೆ ಯುವತಿಗೆ ನಶೆ ಮತ್ತು ಮಾದಕ ಮಾತ್ರೆಗಳನ್ನು ನೀಡಿ ಡಿಕ್ಸಿನ್ ಮತ್ತು ನಿಖಿಲ್ ಅತ್ಯಾ*ಚಾರಗೈದು ಹಲ್ಲೆ ನಡೆಸಿದ್ದಾರೆ. ಪ್ರೀತಿಯ ಹೆಸರಲ್ಲಿ ಇಬ್ಬರಿಂದ ಅತ್ಯಾ*ಚಾರ ನಡೆದಿದಿ ಎಂಬ ಗಂಭೀರ ಆರೋಪವನ್ನು ಯುವತಿ ಮಾಡಿದ್ದಾಳೆ.

ಇದನ್ನೂ ಓದಿ: ಹಾಸನ ಅಪಘಾತ: ಬುಲೆಟ್ ಬೈಕ್‌ನಿಂದ ಬಿದ್ದು 23 ವರ್ಷದ ಯುವತಿ ಸಾವು, ಗೆಳತಿ ಸ್ವಾತಿ ಗಂಭೀರ

ಸಂತ್ರಸ್ತೆ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿ ನಿಖಿಲ್ ಹಾಸನ ಜಿಲ್ಲೆಯ ಸಕಲೇಶಪುರ ಮೂಲದವನು ಎಂದು ತಿಳಿದು ಬಂದಿದೆ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಇದನ್ನೂ ಓದಿ: ಸುಚಿ ಆಂಟಿಯ ಕಮಲಾಕರ ಭಟ್‌ನ ಮತ್ತೊಂದು ಕರಾಳ ಮುಖ ಬಯಲು; ಜ್ಯೋತಿಷಿಯ ಹೊಲಸು ಕೆಲಸ ರಿವೀಲ್?

Source link

Leave a Reply

Your email address will not be published. Required fields are marked *