ಬೆಂಗಳೂರು, ಫೆ. 23: ಸಿಲಿಕಾನ್ ಸಿಟಿಯ ಹವಾಮಾನ (ಬೆಂಗಳೂರು ಮೂಲಸೌಕರ್ಯ) ದಿನದಿಂದ ದಿನಕ್ಕೆ ಬದಲಾವಣೆ ಆಗುತ್ತಿದೆ. ಅದರಲ್ಲೂ ಗಾಳಿಯಲ್ಲಿ ಪ್ರತಿದಿನ ಬದಲಾವಣೆಗಳು ಇರುತ್ತವೆ. ಒಂದು ವೇಳೆ ಕೆಲವು ಬದಲಾವಣೆಗಳನ್ನು ತಂದರೆ ಖಂಡಿತ ಬೆಂಗಳೂರಿನ ಹವಾಮಾನ ಉತ್ತಮ ಎಂದು ಹೇಳಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದೀಗ ಬೆಂಗಳೂರಿನ ಹವಾಮಾನದ ಬಗ್ಗೆ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. “ನೀವೇನ ವಿದೇಶಗಳಲ್ಲಿ ವಾಸವಿದ್ದರೆ, ಬೆಂಗಳೂರಿನ ಹವಾಮಾನ ಎಷ್ಟು ಶ್ರೇಷ್ಠ ಎಂಬುದು ನಿಮಗೆ ತಿಳಿದಿದೆ. ಇದು ನಿಜವಾಗಿಯೂ ವಿಶ್ವದರ್ಜೆಯ ಹವಾಮಾನ” ಎಂದು ಬೆಂಗಳೂರಿನ ನಿವಾಸಿ ಅಮರನಾಥ್ ಶಿವಶಂಕರ್ ಅವರು ಎಕ್ಸ್ (X) ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಕೂಡ ಕಮೆಂಟ್ ಮಾಡಿದ್ದಾರೆ.
ಅಮರನಾಥ್ ಅವರು ತಮ್ಮ ವಿದೇಶಿ ಜೀವನದ ಅನುಭವವನ್ನು ಬೆಂಗಳೂರಿನ ಜೀವನಕ್ಕೆ ಹೋಲಿಸುತ್ತಾ, “ನಾವು ಮಾಲಿನ್ಯವನ್ನು ನಿಯಂತ್ರಿಸಿ, ರಸ್ತೆಗಳನ್ನು ಸರಿಪಡಿಸಿ, ಸಾರ್ವಜನಿಕ ಸಾರಿಗೆಯನ್ನು ಹೆಚ್ಚಿಸಿ ಮತ್ತು ಮಳೆನೀರು ಕಾಲುವೆಗಳನ್ನು ಸರಿಪಡಿಸಿದರೆ, ಬೆಂಗಳೂರು ವಿಶ್ವದ ಅತ್ಯುತ್ತಮ ನಗರಗಳಲ್ಲಿ ಒಂದಾಗಲಿದೆ.
ಇದನ್ನೂ ಓದಿ: ಚಾಮುಂಡಿ ಬೆಟ್ಟದ ಮೂಲ ದೇವರು ಯಾರು? ಮಹಾಬಲೇಶ್ವರ ದೇವಾಲಯದ ನಿಗೂಢ ಸತ್ಯ ಇಲ್ಲಿದೆ ನೋಡಿ
ವೈರಲ್ ಪೋಸ್ಟ್:
ನೀವು ಪಾಶ್ಚಿಮಾತ್ಯ ಜಗತ್ತಿನಲ್ಲಿ ವಾಸಿಸುತ್ತಿದ್ದರೆ, ಬೆಂಗಳೂರಿನ ಹವಾಮಾನ ಎಷ್ಟು ಅದ್ಭುತವಾಗಿದೆ ಎಂದು ನಿಮಗೆ ಅರ್ಥವಾಗುತ್ತದೆ. ಇದು ಸಂಪೂರ್ಣವಾಗಿ ವಿಶ್ವ ದರ್ಜೆಯದು. ನಾವು ಮಾಲಿನ್ಯವನ್ನು ನಿಗ್ರಹಿಸಲು, ನಮ್ಮ ರಸ್ತೆಗಳನ್ನು ಸರಿಪಡಿಸಲು, ಸಾರ್ವಜನಿಕ ಸಾರಿಗೆಯನ್ನು ಹೆಚ್ಚಿಸಲು ಮತ್ತು ನಮ್ಮ ಮಳೆ ನೀರಿನ ಚರಂಡಿಗಳನ್ನು ಸರಿಪಡಿಸಲು ಸಾಧ್ಯವಾದರೆ, ನಾವು ವಿಶ್ವದ ಶ್ರೇಷ್ಠ ನಗರಗಳಲ್ಲಿ ಒಂದಾಗುತ್ತೇವೆ.
— ಅಮರನಾಥ್ ಶಿವಶಂಕರ್ (@Amara_Bengaluru) ಫೆಬ್ರವರಿ 21, 2026
ಈ ಪೋಸ್ಟ್ ಸುಮಾರು 29,000 ಕ್ಕೂ ಹೆಚ್ಚು ವೀಕ್ಷಣೆ ಇದೆ. ಈ ಪೋಸ್ಟ್‌ಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ. ನಾನು ಬೆಂಗಳೂರಿನಲ್ಲಿ 5 ವರ್ಷ ಜೀವನ ಮಾಡಿದ್ದೇನೆ. ಇದೀಗ ಮತ್ತೆ ಬರಬೇಕು ಎಂದು ಅನ್ನಿಸುತ್ತಿದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಹವಾಮಾನ ಸರಿ ಇದೆ, ಆದರೆ ಫುಟ್‌ಪಾತ್‌ಗಳ ಕಥೆಯೇನು? ಪಾದಚಾರಿ ಮಾರ್ಗಗಳನ್ನು ಮೊದಲು ಸರಿಪಡಿಸಬೇಕು ಎಂದು ಒಬ್ಬರು ಮೂಲಸೌಕರ್ಯದ ಬಗ್ಗೆ ಮಾತನಾಡಿದ್ದಾರೆ. ಮರಗಳನ್ನು ಕಡಿದು ಜಂಗಲ್ ಮಾಡುತ್ತಿದ್ದರೆ, ಹವಾಮಾನ ಶೀಘ್ರವೇ ಹದಗೆಡಲಿದೆ. ಕಡಿದ ಮರಗಳಿಗೆ ಬದಲಾಗಿ ಹೊಸ ಗಿಡಗಳನ್ನು ನೆಡಲೇಬೇಕು ಎಂದು ಮತ್ತೊಬ್ಬರು ಹೇಳಿದ್ದಾರೆ. ಬೆಂಗಳೂರಿನ ಹಳೆಯ ಕಾಲದ ಆಕರ್ಷಣೆಯನ್ನು ಮರಳಿ ತರುವುದು ಬಹಳ ಕಷ್ಟ. ಅಭಿವೃದ್ಧಿಯ ಹೆಸರಿನಲ್ಲಿ ನಗರವನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಮತ್ತೊಬ್ಬರು ಹೇಳಿದ್ದಾರೆ.
ಬೆಂಗಳೂರಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ