ಕಾರವಾರದ ಕಠಿಣಕೋಣ ಗ್ರಾಮದಲ್ಲಿ ಒಂದೇ ಕಡೆ 6 ಹೆಬ್ಬಾವು ಪತ್ತೆ! ಬೆಚ್ಚಿಬಿದ್ದ ಗ್ರಾಮಸ್ಥರು

ಕಾರವಾರದ ಕಠಿಣಕೋಣ ಗ್ರಾಮದಲ್ಲಿ ಒಂದೇ ಕಡೆ 6 ಹೆಬ್ಬಾವು ಪತ್ತೆ! ಬೆಚ್ಚಿಬಿದ್ದ ಗ್ರಾಮಸ್ಥರು


ಕಾರವಾರ, ಫೆಬ್ರವರಿ 23: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಠಿಣಕೋಣ ಗ್ರಾಮದಲ್ಲಿ ಒಂದೇ ಕಡೆ ಆರು ಬೃಹತ್ ಗಾತ್ರದ ಹೆಬ್ಬಾವುಗಳು ಇದ್ದಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ವಿಜಯ ತಳೇಕರ ಎಂಬುವವರ ಮನೆಯ ವೈದ್ಯರ ದಾಸ್ತಾನು ಮಾಡಿಟ್ಟಿದ್ದ ವಸ್ತುಗಳ ನಡುವೆ ಅವಿತುಕೊಂಡ ಸ್ಥಿತಿಯಲ್ಲಿ ಹೆಬ್ಬಾವುಗಳು ಇದ್ದವು. ಬೆಳಿಗ್ಗೆ ಮನೆಯಲ್ಲಿ ಸಂಚರಿಸುವಾಗ ಚಲನವಲನ ಗಮನಿಸಿದ ಮನೆಯವರು ಪರಿಶೀಲನೆ ವೇಳೆ, ಒಂದೇ ಸ್ಥಳದಲ್ಲಿ ಹಲವು ಹೆಬ್ಬಾವುಗಳು ಇರುವುದನ್ನು ಕಂಡು ಬೆಚ್ಚಿಬಿದ್ದರು. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಗಸ್ತು ವನಪಾಲಕ ಗೋಪಾಲ ನಾಯ್ಕ ಅವರನ್ನು ಭೇಟಿ ಮಾಡಿ ಸುರಕ್ಷಿತವಾಗಿ ಹೆಬ್ಬಾವುಗಳನ್ನು ಹಿಡಿದಿದ್ದಾರೆ. ಮಿಲನಕ್ರಿಯೆಯ ಅವಧಿಯಾದ್ದರಿಂದ ಹೆಬ್ಬಾವುಗಳು ಒಟ್ಟಾಗಿ ಸೇರಿರುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *