Headlines

ಜೈಲಲ್ಲಿ ಬಿಕ್ಲು ಶಿವ ಕೊಲೆ ಪ್ರಕರಣದ ಆರೋಪಿಯ ರೌಡಿಸಂ: ಸಹ ಕೈದಿಗಳ ಮೇಲೆ ಹಲ್ಲೆ

ಜೈಲಲ್ಲಿ ಬಿಕ್ಲು ಶಿವ ಕೊಲೆ ಪ್ರಕರಣದ ಆರೋಪಿಯ ರೌಡಿಸಂ: ಸಹ ಕೈದಿಗಳ ಮೇಲೆ ಹಲ್ಲೆ


ಬೆಂಗಳೂರು, ಫೆಬ್ರವರಿ 23: ಬಿಕ್ಲು ಶಿವ ಕೊಲೆ ಪ್ರಕರಣದ ಆರೋಪಿ ಪ್ರದೀಪ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ತನ್ನ ಕೈದಿಗಳ ಮೇಲೆ ಹಲ್ಲೆ ನಡೆಸಿದ್ದಾನೆ. ಕೊಲೆ ಆರೋಪದಡಿ ಬಂಧಿತನಾಗಿ ಜೈಲೂಟ ಸವಿಯುತ್ತಿದ್ದರೂ ಈತ ಮತ್ತೆ ತನ್ನ ರೌಡಿಸಂ ಪ್ರದರ್ಶಿಸಿದ್ದಾನೆ. ಫೆಬ್ರವರಿ 18ರಂದು ಸುರೇಶ್ ಆದಿ ಹಾಗೂ ಮಧುಕಿರಣ್ ಎಂಬುವವರ ಮೇಲೆ ಪ್ರದೀಪ್ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಹಳೇ ದ್ವೇಷದಿಂದ ಈ ಘಟನೆ ನಡೆದಿದೆ ಎಂದು ಸುರೇಶ್ ತಿಳಿದುಬಂದಿದ್ದು, ಆದಿತ್ ಮಧುಕಿರಣ್ ಅವರ ಮೂಗು ಮತ್ತು ಕಪಾಳಕ್ಕೆ ಪ್ರದೀಪ್ ಹೊಡೆದಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನ ಸಿಬ್ಬಂದಿ ನ್ಯಾನ್-ಕಾಗ್ನಿಜೆಬಲ್ ರಿಪೋರ್ಟ್ (ಎನ್‌ಸಿಆರ್) ಅನ್ನು ದಾಖಲಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *