Headlines

Video: ತನಗೆ ಕಾಟ ಕೊಟ್ಟವರಿಗೆ ಪಂಚ್ ಕೊಡ್ತಾ ಈ ಕೋತಿ ಮರಿ ‘ಪಂಚ್’?

Video: ತನಗೆ ಕಾಟ ಕೊಟ್ಟವರಿಗೆ ಪಂಚ್ ಕೊಡ್ತಾ ಈ ಕೋತಿ ಮರಿ ‘ಪಂಚ್’?


ಟೋಕಿಯೋ, ಫೆಬ್ರವರಿ 23: ಈ ಕೋತಿ ಮರಿ ಹುಟ್ಟಿನಿಂದಲೇ ಒಬ್ಬಂಟಿ, ತೂಕ ಕಡಿಮೆ ಇದ್ದಾಗ ತಾಯಿಗೂ ಸಾಕಲು ತಿಳಿಯದೆ ಹೋಗಿತ್ತು. ಜಪಾನ್ ನ ಮೃಗಾಲಯದಲ್ಲಿ ಅದನ್ನು ಬಿಡಲಾಯಿತು. ಆದರೆ ಅದಕ್ಕೆ ಸ್ನೇಹಿತರು ಯಾರೂ ಇರಲಿಲ್ಲ, ಕೋತೊಯನ್ನೇ ಹೋಲುವ ಗೊಂಬೆಯನ್ನೇ ಅದು ತನ್ನ ಕುಟುಂಬವನ್ನಾಗಿ ಮಾಡಿಕೊಂಡಿತ್ತು. ಉಳಿದ ಕೋತಿಗಳೆಲ್ಲಾ ಅದರ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ. ಅದಕ್ಕೆ ಕೆಲವು ಕೋಟಿಗಳು ಫ್ರೆಂಡ್ ಶಿಪ್ ಮಾಡಿವೆ ಎನ್ನುವ ಮಾಹಿತಿಯೂ ಇದೆ. @ Pediavenir ಎಂಬ ಎಕ್ಸ್ ಅಕೌಂಟ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಆದರೆ ಈಗ ಹೇಳಲು ಹೊರಟಿರುವ ವಿಚಾರ ಅದಲ್ಲ, ಆ ಮರಿಗೆ ಮೊದಲು ತೊಂದರೆ ಕೊಟ್ಟಿದ್ದ ಕೋತಿ ಮೇಲೆ ಸೇಡು ತೀರಿಸಿಕೊಳ್ಳುವ ವಿಡಿಯೋ ಒಂದು ವೈರಲ್ ಆಗಿದೆ. ಆ ವಿಡಿಯೋದಲ್ಲಿ ಈ ಮರಿ ದೊಡ್ಡ ಕೋಟಿಗೆ ಪಂಚ್ ಕೊಡುತ್ತಿರುವುದು, ಹಾರಿ ಒಡೆಯುತ್ತಿರುವುದನ್ನು ಕಾಣಬಹುದು. ಆದರೆ ಇದು ಸತ್ಯ ಅಲ್ಲ ಇದು ಎಐ ರಚಿತ ವಿಡಿಯೋ ಆಗಿದ್ದು, ಮರಿ ಹೀಗೆ ಸೇಡು ತೀರಿಸಿಕೊಂಡರೆ ಹೇಗಿರುತ್ತೆ ಎಂಬುದಕ್ಕೆ ಈ ವಿಡಿಯೋ ಕ್ರಿಯೇಟ್ ಮಾಡಲಾಗಿದೆ. ಪಂಚ್ ಜುಲೈ 26, 2025 ರಂದು ಜನಿಸಿದ್ದು, ಕೇವಲ 500 ಗ್ರಾಂ ತೂಕವಿತ್ತು. ಮೈನಿಚಿ ಶಿಂಬುನ್ ವರದಿ ಮಾಡಿದಂತೆ, ಪಂಚ್ನ ತಾಯಿ ಮೊದಲ ಬಾರಿಗೆ ಗರ್ಭ ಧರಿಸಿತ್ತು, ಜನನದ ನಂತರ ಅವನನ್ನು ನೋಡಿಕೊಳ್ಳಲಿಲ್ಲ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *