ಟೀಮ್ ಇಂಡಿಯಾ ಮುಂದಿನ ಪಂದ್ಯವನ್ನು ಎಷ್ಟು ರನ್​ಗಳ ಅಂತರದಿಂದ ಗೆಲ್ಲಬೇಕು?

ಟೀಮ್ ಇಂಡಿಯಾ ಮುಂದಿನ ಪಂದ್ಯವನ್ನು ಎಷ್ಟು ರನ್​ಗಳ ಅಂತರದಿಂದ ಗೆಲ್ಲಬೇಕು?


ಸೌತ್ ಆಫ್ರಿಕಾ ವಿರುದ್ಧದ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾದ ಸೆಮಿಫೈನಲ್ ಲೆಕ್ಕಾಚಾರಗಳು ಶುರುವಾಗಿದೆ. ಇದಕ್ಕೆ ಮುಖ್ಯ ಕಾರಣ ಭಾರತ ತಂಡವು ಹೀನವಾಗಿ ಸೋತಿರುವುದು. ಅಂದರೆ ಸೌತ್ ಆಫ್ರಿಕಾ ವಿರುದ್ಧದ 76 ರನ್‌ಗಳ ಅಂತರದಿಂದ ಸೋತಿರುವ ಕಾರಣ ಟೀಮ್ ಇಂಡಿಯಾದ ನೆಟ್ ರನ್ ರೇಟ್ -3.800 ಕ್ಕೆ ಕುಸಿದಿದೆ. ಈ ನೆಗೆಟಿವ್ ನೆಟ್ ರನ್ ರೇಟ್ ಅನ್ನು ಪ್ಯಾಸಿಟಿಮ್ ಮಾಡಬೇಕಿದ್ದರೆ ಭಾರತ ತಂಡವು ಮುಂದಿನ ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಬೇಕು.

ಅದರಂತೆ ಭಾರತ ತಂಡವು ತನ್ನ ಮುಂದಿನ ಕೊಡುಗೆ ಝಿಂಬಾಬ್ವೆ ವಿರುದ್ಧ ಎಷ್ಟು ರನ್ಗಳ ಅಂತರದಿಂದ ಗೆಲ್ಲಬೇಕು ಎಂದು ನೋಡುವುದಾದರೆ…

  • ಮೊದಲು ಬ್ಯಾಟಿಂಗ್ ಲೆಕ್ಕಾಚಾರ: ಭಾರತ ತಂಡವು 200ಕ್ಕೂ ಹೆಚ್ಚು ರನ್ ಗಳಿಸಬೇಕು ಮತ್ತು ಎದುರಾಳಿ ತಂಡವನ್ನು ಕನಿಷ್ಠ 70 ರಿಂದ 80 ರನ್‌ಗಳ ಅಂತರದಿಂದ ಸೋಲಿಸಬೇಕು.
  • ಮೊದಲು ಬೌಲಿಂಗ್ ಲೆಕ್ಕಾಚಾರ: ಎದುರಾಳಿ ತಂಡವನ್ನು 130 ರಿಂದ 140 ರನ್‌ಗಳ ಒಳಗೆ ಆಲೌಟ್ ಮಾಡಬೇಕು.
  • ಚೇಸಿಂಗ್ ಲೆಕ್ಕಾಚಾರ: ಎದುರಾಳಿ ತಂಡವನ್ನು 140 ರನ್‌ಗೆ ಆಲೌಟ್ ಮಾಡಿದರೆ ಟೀಮ್ ಇಂಡಿಯಾ ಈ ಗುರಿಯನ್ನು 9 ರಿಂದ 10 ಪಂದ್ಯಗಳಲ್ಲಿ ಚೇಸ್ ಮಾಡಬೇಕು.

ಈ ಮೂರು ಲೆಕ್ಕಾಚಾರಗಳೊಂದಿಗೆ ಭಾರತ ತಂಡವು ಝಿಂಬಾಬ್ವೆ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆಯಿದೆ. ಜೊತೆಗೆ ಈ ಮ್ಯಾಚ್‌ನಲ್ಲಿ ಭರ್ಜರಿ ಜಯ ಸಾಧಿಸಿದರೆ ಟೀಮ್ ಇಂಡಿಯಾದ ನೆಟ್ ರನ್ ರೇಟ್ + ಆಗಲಿದೆ.

ಇನ್ನು ವೆಸ್ಟ್ ಇಂಡೀಸ್ ವಿರುದ್ಧ ಕೂಡ ಭರ್ಜರಿ ಜಯ ಸಾಧಿಸುವ ಮೂಲಕ ಭಾರತ ತಂಡವು ತನ್ನ ನೆಟ್ ರನ್ ರೇಟ್ ಅನ್ನು ಹೆಚ್ಚಿಸಿಕೊಳ್ಳಬಹುದು. ಈ ಮೂಲಕ 4 ಅಂಕಗಳೊಂದಿಗೆ ನೆಟ್ ರನ್ ಇತರ ತಂಡಗಳನ್ನು ಹಿಂದಿಕ್ಕಿ ಸೆಮಿಫೈನಲ್ ಗೇರಬಹುದು.

ನೆಟ್ ರನ್ ರೇಟ್ ಲೆಕ್ಕಾಚಾರವಿಲ್ಲದೇ ಸೆಮಿಫೈನಲ್ ಗೇರಬಹುದೇ?

ನೆಟ್ ರನ್ ರೇಟ್ ಲೆಕ್ಕಾಚಾರವಿಲ್ಲದೇ ಭಾರತ ತಂಡ ಸೆಮಿಫೈನಲ್‌ಗೆ ಪ್ರವೇಶಿಸಬಹುದು. ಆದರೆ ಇಲ್ಲಿ ಸೌತ್ ಆಫ್ರಿಕಾ ತಂಡವು ತನ್ನ ಮುಂದಿನ ಎರಡು ಮ್ಯಾಚ್‌ಗಳಲ್ಲಿ ಝಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಗೆಲ್ಲಬೇಕು.

ಹೀಗಾದಲ್ಲಿ ವೆಸ್ಟ್ ಇಂಡೀಸ್ ಹಾಗೂ ಜಿಂಬಾಬ್ವೆ ತಂಡಕ್ಕೆ ಸೋಲುಣಿಸಿ ಟೀಮ್ ಇಂಡಿಯಾ ನೇರವಾಗಿ ಸೆಮಿಫೈನಲ್‌ಗೆ ಪ್ರವೇಶಿಸಬಹುದು.

ಇದನ್ನೂ ಓದಿ: ಇಬ್ಬರಲ್ಲಿ ಒಬ್ಬರು… ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆ

ಮುಂದಿನ ಪಂದ್ಯಗಳು: ಭಾರತದ

  • ಫೆಬ್ರವರಿ 26, 2026: ಭಾರತ vs ಝಿಂಬಾಬ್ವೆ (ಚೆನ್ನೈ)
  • ಮಾರ್ಚ್ 01, 2026: ವೆಸ್ಟ್ ಇಂಡೀಸ್ vs ಭಾರತ (ಕೋಲ್ಕತ್ತಾ)



Source link

Leave a Reply

Your email address will not be published. Required fields are marked *