ಬೆಂಗಳೂರು, ಫೆ.23: ಸಿಲಿಕಾನ್ ಸಿಟಿಯ ಭಾರತದ ತಂತ್ರಜ್ಞಾನದ ತವರು ಎಂದರೆ ತಪ್ಪಾಗದು, ಇಲ್ಲಿ ಜೀವನ ನಡೆಸುವುದು ತುಂಬಾ ಸುಲಭ ಎಂದುಕೊಂಡವರಿಗೆ ಖರ್ಚಿನ ಲೆಕ್ಕಚಾರದ (ಬೆಂಗಳೂರು ಜೀವನ ವೆಚ್ಚ) ಪಟ್ಟಿಯನ್ನು ವ್ಯಕ್ತಿಯೊಬ್ಬರು ಪ್ರಕಟಿಸಿದ್ದಾರೆ. ಬೆಂಗಳೂರಿನಲ್ಲಿ ಜೀವನ ನಿರ್ವಹಣೆ ಎಷ್ಟು ದುಬಾರಿ? ಎಂಬುದಕ್ಕೆ ಅಭಿಷೇಕ್ ಸಿಂಗ್ ಎಂಬುವವರು ಎಕ್ಸ್ (X) ನಲ್ಲಿ ತಮ್ಮ ತಿಂಗಳ ಬಜೆಟ್ ಬಗ್ಗೆ ಹಂಚಿಕೊಂಡಿದ್ದಾರೆ. ಈಗ ಈ ಪೋಸ್ಟ್ ಭಾರೀ ವೈರಲ್ ಆಗಿದೆ. ತಾವೊಬ್ಬರೇ ಜೀವನ ನಡೆಸಲು ತಿಂಗಳಿಗೆ 70,000 ರೂ. ಖರ್ಚು ಮಾಡುವುದನ್ನು ಅವರು ಹೇಳಿದ್ದಾರೆ.
ಸುಮಾರು 74,000ಕ್ಕೂ ಹೆಚ್ಚು ವೀಕ್ಷಣೆಯನ್ನು ಹೊಂದಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕೂಡ ಕಮೆಂಟ್ ಮಾಡಿದ್ದಾರೆ. ಅಭಿಷೇಕ್ ಸಿಂಗ್ ಅವರು ಬೆಂಗಳೂರಿನಲ್ಲಿ ನನ್ನ ಮಾಸಿಕ ಜೀವನ ವೆಚ್ಚದ ಬಗ್ಗೆ ಹಂಚಿಕೊಂಡಿದ್ದಾರೆ. ಅದು ಯಾವುದಾದರೂ ಇಲ್ಲಿ ವಿವರಿಸಲಾಗಿದೆ ನೋಡಿ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
ಬೆಂಗಳೂರಿನಲ್ಲಿ ನನ್ನ ಮಾಸಿಕ ಜೀವನ ವೆಚ್ಚ 🇮🇳
🏠 ₹25,000 ಬಾಡಿಗೆ + ನಿರ್ವಹಣೆ 🥗 ₹12,000 ಆಹಾರ, ಸಾಕಷ್ಟು ಮಾಂಸ, ಮೀನು, ಮೊಟ್ಟೆಗಳು 🍽️ ₹5,500 ರೆಸ್ಟೋರೆಂಟ್ಗಳು, ಕಾಫಿ 📦 ₹4,000 ವಿವಿಧ ವೆಚ್ಚಗಳು (ಆನ್ಲೈನ್ ಆರ್ಡರ್ಗಳು, ಇತ್ಯಾದಿ) ✈️ ₹12,500 ರಜೆ ದಿನಾಂಕ b000 ₹3,000 ಹೂಡಿಕೆ 💪 ₹1,500 ಜಿಮ್ +… https://t.co/7EFdNfLINL
— ಅಭಿಷೇಕ್ ಸಿಂಗ್ (@0xlelouch_) ಫೆಬ್ರವರಿ 22, 2026
ಬಾಡಿಗೆ + ನಿರ್ವಹಣೆ: 25,000 ರೂ.
ಆಹಾರ, ಮಾಂಸ, ಮೀನು, ಮೊಟ್ಟೆಗಳು: 12,000 ರೂ.
ರೆಸ್ಟೋರೆಂಟ್ಗಳು, ಕಾಫಿ: 5,500
ವಿವಿಧ (ಆನ್ಲೈನ್ ಆರ್ಡರ್ಗಳು, ಇತ್ಯಾದಿ): 4,000 ರೂ.
ರಜೆ ಮೋಜು: 12,500 ರೂ.
ಬಂಬಲ್ ದಿನಾಂಕಗಳು: 4,000 ರೂ.
ಶೇರ್ ಹೂಡಿಕೆ : 3,000 ರೂ.
ಜಿಮ್ + ಕ್ರೀಡೆ: 1,500 ರೂ.
ಇಂಟರ್ನೆಟ್ + ಫೋನ್ : 1,000 ರೂ.
ಒಟಿಟಿ, ಮೂವಿ ಚಂದದಾರಿಕೆ: 1,500 ರೂ.
ಒಟ್ಟು ತಿಂಗಳ ಖರ್ಚು: 70,000 ರೂ.
ಇದನ್ನೂ ಓದಿ: “ಬೆಂಗಳೂರನ್ನು ಮತ್ತೆ ಶ್ರೇಷ್ಠ ನಗರವನ್ನಾಗಿಸೋಣ”: ಈ ಬದಲಾವಣೆಯಾದರೆ ಸಿಲಿಕಾನ್ ಸಿಟಿ ವಿಶ್ವ ದರ್ಜೆಯ ನಗರವಾಗುವುದು ಖಂಡಿತ
ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವ್ಯಂಗ್ಯವಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಕೇವಲ 3,000 ರೂ. ಹೂಡಿಕೆ ಮಾಡುತ್ತಿದ್ದೀರಾ? ಇಷ್ಟು ದೊಡ್ಡದ ‘ಪೀಳಿಗೆಯ ಸಂಪತ್ತಿನಿಂದ’ ಇಡೀ ಮಾರುಕಟ್ಟೆಯನ್ನೇ ಖರೀದಿಸುವ ಯೋಜನೆ ಇದೆಯೇ?” ಎಂದು ಇಬ್ಬರು ತಮಾಷೆ ಮಾಡಿದ್ದಾರೆ. ನಾನು ಬೆಂಗಳೂರಿನಲ್ಲಿ ಕೇವಲ 25,000 ರೂ. ನಲ್ಲಿ ‘ಡ್ರೀಮ್ ಲೈಫ್’ ನಡೆಸುತ್ತಿದ್ದೇನೆ. ಕಂಪನಿಯ ಜಿಮ್ ಮತ್ತು ಫುಡ್ ಕೋರ್ಟ್ ಬಳಸಿದರೆ ಖರ್ಚು ಕಡಿಮೆ ಮಾಡಬಹುದು ಎಂದು ಮತ್ತೊಬ್ಬರು ಹೇಳಿದ್ದಾರೆ. ಇಷ್ಟೆಲ್ಲಾ ಖರ್ಚು ಮಾಡುತ್ತಿದ್ದೀರಿ, ನಿಮ್ಮ ಸಂಬಳ ಎಷ್ಟು?” ಎಂದು ಕೇಳಿದ್ದಕ್ಕೆ, “ಆರಾಮದಾಯಕ ಜೀವನ ನಡೆಸುವಷ್ಟು ಸಂಪಾದಿಸುತ್ತೇನೆ,” ಎಂದು ಅಭಿಷೇಕ್ ಉತ್ತರಿಸಿದ್ದಾರೆ.
ಬೆಂಗಳೂರಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ