ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇಚಿತ್ರದ ಕ್ರೆಡಿಟ್ ಮೂಲ: ಗೂಗಲ್
ಬೆಂಗಳೂರು, ಫೆಬ್ರವರಿ 23: ಶೀಘ್ರದಲ್ಲಿಯೇ ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇ ನಿರೀಕ್ಷೆಯಲ್ಲಿದ್ದ ಪ್ರಯಾಣಿಕರಿಗೆ, ನಿರಾಸೆ ಮೂಡಿಸುವ ಸುದ್ದಿಯೊಂದು ಹೊರಬಂದಿದೆ. ಈ ರಸ್ತೆಯಲ್ಲಿ ಸಂಚರಿಸಲು ಪ್ರಯಾಣಿಕರು 2027ರವರೆಗೂ ಕಾಯಬೇಕಾಗಬಹುದು ಎನ್ನಬಹುದು, ಕೆಲವು ಕಾಮಗಾರಿಗಳ ವೇಗಕ್ಕೆ ಬ್ರೇಕ್ ಹಾಕಲಾಗಿದೆ. ಈ ಕಾರಿಡಾರ್ ಮೂರು ರಾಜ್ಯಗಳನ್ನು ಸಂಪರ್ಕಿಸುವುದರಿಂದ ಗಡಿ ದಾಟಿ ಸಮನ್ವಯ ಸಾಧಿಸುವುದು ಅಧಿಕಾರಿಗಳಿಗೆ ಸವಲಾಗುತ್ತಿದೆ. ವರದಿಗಳ ಪ್ರಕಾರ, 263 ಕಿಲೋ ಮೀಟರ್ ಉದ್ದದ ಈ ಕಾರಿಡಾರ್ ಯೋಜನೆಯಲ್ಲಿ ತಮಿಳುನಾಡು ಭಾಗದಲ್ಲೇ ಪ್ರಮುಖ ಆವಶ್ಯಕತೆಗಳು ಕಂಡುಬಂದಿವೆ.
ಸದ್ಯದ ಸ್ಥಿತಿಗತಿ ಏನು?
- ಕರ್ನಾಟಕ ಭಾಗದಲ್ಲಿ ಶೇ.100ರಷ್ಟು ಕೆಜಿ ನಿರ್ಮಾಣವಾಗಿದ್ದು, ಹೊಸಕೋಟೆಯಿಂದ ಎಫ್‌ವರೆಗೆ 72 ಕಿ.ಮೀ. ಸುಮಾರು ಒಂದು ವರ್ಷದಿಂದ ಸಂಚಾರಕ್ಕೆ ಮುಕ್ತವಾಗಿದೆ.
- ಆಂಧ್ರ ಪ್ರದೇಶ ಶೇ.92ರಷ್ಟು ಅಂದರೆ 85 ಕಿ.ಮೀ. ಉದ್ದದ ರಸ್ತೆಯ ನಿರ್ಮಾಣ ಕಾಮಗಾರಿ ಕಂಪ್ಲೀಟ್ ಆಗಿದೆ.
- ಆದರೆ ತಮಿಳುನಾಡು ಭಾಗದಲ್ಲಿಯೇ ಹೆಚ್ಚಿನ ಪ್ರಮಾಣದ ಕಾಮಗಾರಿ ಬಾಕಿ ಉಳಿದಿದೆ. ಶೇ.80ರಷ್ಟು ಮಾತ್ರ ಕೆಲಸ ಆಗಿದ್ದು, 106 ಕಿ.ಮೀ. ಉದ್ದದ ಈ ಭಾಗದಲ್ಲಿ ಇನ್ನೂ ಶೇ.20ರಷ್ಟು ಕಾಮಗಾರಿ ಆಗಬೇಕಿದೆ.
ಓದಿ: ಮತ್ತಷ್ಟು ವಿಳಂಬವಾಗಿದೆ ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್ ಕಾಮಗಾರಿ
ವಿಳಂಬಕ್ಕೆ ಕಾರಣವೇನು?
ಮೊದಲ ಯೋಜನೆಯ ಪ್ರಕಾರ 2024ರೊಳಗೆ ರಸ್ತೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಅರಣ್ಯ ಅನುಮತಿಗಳನ್ನು ಪಡೆಯುವಲ್ಲಿ ವಿಳಂಬ, ಭೂಸ್ವಾಧೀನ ಸಮಸ್ಯೆಗಳು ಮತ್ತು ಹಣಕಾಸು ಸಂಕಷ್ಟ ಯೋಜನೆಗೆ ಹಿನ್ನೆಡೆ ಉಂಟು ಮಾಡಿವೆ. ತಮಿಳುನಾಡಿನ ಅರಕ್ಕೋಣಂ–ಕಾಂಚೀಪುರಂ ಭಾಗದ ಕಾಮಗಾರಿ ಕೈಗೊಂಡ ಗುತ್ತಿಗೆದಾರರಿಗೆ ನಿಧಿ ಕೊರತೆ, 2025ರ ಮೇ ತಿಂಗಳಿನಲ್ಲಿ ಕಾಮಗಾರಿ ಸಂಪೂರ್ಣ ನಿಂತಿದೆ.
ಇದು ಗ್ರೀನ್‌ಫೀಲ್ಡ್ (ಹೊಸ ಮಾರ್ಗ) ಯೋಜನೆಯಾಗದಿದ್ದರೆ, ಸಂಪೂರ್ಣ ಎಕ್ಸ್‌ಪ್ರೆಸ್ ನಂತರವೇ ಸಂಚಾರಕ್ಕೆ ಮುಕ್ತವಾಗಲು ಸಾಧ್ಯ. ಮಧ್ಯದಲ್ಲಿ 25 ಕಿ.ಮೀ. ಕಾಮಗಾರಿ ಬಾಕಿ ಇರುವ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಬರಲ್ಲ. ಹೀಗಾಗಿ ಕುಂಟುತ್ತಾ ಸಾಗುತ್ತಿರುವ ಹಿನ್ನೆಲೆ, ಕ್ರಮಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮುಂದಾಗಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.