Rashmi Prabhakar: ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟಿ ರಶ್ಮಿ ಪ್ರಭಾಕರ್ ತಮ್ಮ ಮುದ್ದಿನ ಮಗನಿಗೆ ನಾಮಕರಣ ಶಾಸ್ತ್ರವನ್ನು ಅದ್ಧೂರಿಯಾಗಿ ಮಾಡಿದ್ದು, ನಾಮಕರಣದ ಫೋಟೊಗಳನ್ನು ಮತ್ತು ಮಗನ ಹೆಸರನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕನ್ನಡ ಕಿರುತೆರೆ ನಟಿ, ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಚ್ಚಿಯಾಗಿ ಜನಪ್ರಿಯತೆ ಪಡೆದ ರಶ್ಮಿ ಪ್ರಭಾಕರ್ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಗಂಡು ಮಗುವಿಗೆ ತಾಯಿಯಾಗಿದ್ದರು. ಮಗು ಜನಿಸಿ ಮೂರು ತಿಂಗಳ ಬಳಿಕ ಇದೀಗ ನಾಮಕರಣ ಶಾಸ್ತ್ರ ಮಾಡಿದ್ದಾರೆ.

ರಶ್ಮಿ ಪ್ರಭಾಕರ್ ಕಿರುತೆರೆಯ ಜನಪ್ರಿಯ ನಟಿ. ಇವರು ಕನ್ನಡ ಅಲ್ಲದೇ ತೆಲುಗು ಮತ್ತು ತಮಿಳು ಧಾರಾವಾಹಿಗಳಲ್ಲೂ ಹಾಗೂ ಹಲವು ರಿಯಾಲಿಟಿ ಶೋಗಳಲ್ಲೂ ಭಾಗಿಯಾಗಿ ವಿನ್ನರ್ ಕೂಡ ಆಗಿದ್ದರು. ಇದೀಗ ತಾಯ್ತನದ ಸಂಭ್ರಮವನ್ನು ನಟಿ ಎಂಜಾಯ್ ಮಾಡುತ್ತಿದ್ದಾರೆ.

ಇತ್ತೀಚೆಗೆ ರಶ್ಮಿ ಪ್ರಭಾಕರ್ ಪುತ್ರ ನಾಮಕರಣ ಶಾಸ್ತ್ರ ಅದ್ಧೂರಿಯಾಗಿ ನಡೆದಿತ್ತು. ಕಾರ್ಯಕ್ರಮಕ್ಕೆ ಕನ್ನಡ ಕಿರುತೆರೆಯ ನಟ-ನಟಿಯರು ಆಗಮಿಸಿ ಶುಭ ಕೋರಿದ್ದರು. ಇದೀಗ ನಟಿ, ನಾಮಕರಣ ಸಂಭ್ರಮದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಏಪ್ರಿಲ್ 25, 2022 ರಂದು ರಶ್ಮಿ ಪ್ರಭಾಕರ್ ಅವರು ನಿಖಿಲ್ ಭಾರ್ಗವ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾಗಿ ಮೂರು ವರ್ಷಗಳ ಬಳಿಕ ಮೊದಲ ಮಗುವನ್ನ ದಂಪತಿ ಕಳೆದ ವರ್ಷ ಬರಮಾಡಿಕೊಂಡಿದ್ದರು. ಇದೀಗ ಅದ್ಧೂರಿಯಾಗಿ ನಾಮಕರಣ ಶಾಸ್ತ್ರ ನಡೆದಿದೆ.

ಕೆಲವು ದಿನಗಳ ಹಿಂದೆ ರಶ್ಮಿ ಪ್ರಭಾಕರ್ ತಮ್ಮ ಮಗುವಿಗೆ ನಾಮಕರಣ ಮಾಡುವುದಾಗಿಯೂ, ಹೆಸರನ್ನು ಸೂಚಿಸಿ ಎಂದು ಅಭಿಮಾನಿಗಳಿಗೆ ತಿಳಿಸಿದ್ದರು. ನಂತರ ಫೆಬ್ರವರಿ 12ರಂದು ಮಗುವಿಗೆ ನಾಮಕರಣ ಮಾಡಿ ‘ಅಗಸ್ತ್ಯ ವೇದಾಂತ್’ ಎಂದು ಹೆಸರನ್ನಿಟ್ಟಿದ್ದಾರೆ.

ಇನ್ನು ನಾಮಕರಣ ಸಮಾರಂಭಕ್ಕೆ ಮೋಕ್ಷಿತಾ ಪೈ , ನಟಿ-ನಿರೂಪಕಿ ಅನುಪಮಾ ಗೌಡ , ನೇಹಾ ಗೌಡ, ಸುಪ್ರಿತಾ ಸತ್ಯನಾರಾಯಣ, ಕಾವ್ಯ ಶೈವ , ಇಶಿತಾ ವರ್ಷ ಸೇರಿದಂತೆ ಕಿರುತೆರೆಯ ಹಲವು ತಾರೆಯರು ಭಾಗಿಯಾಗಿ ಕಾರ್ಯಕ್ರಮಕ್ಕೆ ಮೆರುಗು ತಂದರು.

ರಶ್ಮಿ ಪ್ರಭಾಕರ್ ಗರ್ಭಿಣಿಯಾದ ಬಳಿಕ ನಟನೆಯಿಂದ ದೂರ ಉಳಿದಿದ್ದು, ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಬೆಡಗಿ ಮಗುವಿನ ಜೊತೆಗಿನ ಫೋಟೊಸ್ ವಿಡೀಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

Source link
'ಅಗಸ್ತ್ಯ ವೇದಾಂತ್'… ಮಗನಿಗೆ ಮುದ್ದಾದ ಹೆಸರನ್ನಿಟ್ಟ ನಟಿ Rashmi Prabhakar… ನಾಮಕರಣ Photos