ಅಡ್ಡಪಲ್ಲಕ್ಕಿ ಉತ್ಸವ ವೇಳೆ ಗುಂಡು ಹಾರಿಸಿದ ಬಸನಗೌಡ ಪಾಟೀಲ್ ಅರೆಸ್ಟ್: ಶೋ ಕೊಡಲು ಹೋಗಿ ಲಾಕ್

ಅಡ್ಡಪಲ್ಲಕ್ಕಿ ಉತ್ಸವ ವೇಳೆ ಗುಂಡು ಹಾರಿಸಿದ ಬಸನಗೌಡ ಪಾಟೀಲ್ ಅರೆಸ್ಟ್: ಶೋ ಕೊಡಲು ಹೋಗಿ ಲಾಕ್


ಕೊಪ್ಪಳ, (ಫೆಬ್ರವರಿ 23): ಜಿಲ್ಲೆ ಯಲಬುರ್ಗಾದಲ್ಲಿ (ಯಲಬುರ್ಗಾ) ನಡೆದ ಅಡ್ಡಪಲ್ಲಕ್ಕಿ ಮೆರವಣಿಗೆ ವೇಳೆ, ಬಸನಗೌಡ ಪಾಟೀಲ್ ಗಾಳಿಯಲ್ಲಿ ಗುಂಡು (ಗಾಳಿ ಬೆಂಕಿ) ಹಾರಿಸಿ ಸಂಭ್ರಮಿಸಿದ್ದರು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ (ಸಾಮಾಜಿಕ ಮಾಧ್ಯಮ) ಈ ಸಂಬಂಧ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಆರ್ಮ್ಸ್ ಆಯಕ್ಟ್ ಅಡಿ ಪ್ರಕರಣ ದಾಖಲಾಗಿದ್ದು, ಇದೀಗ ಸಿಂದಗಿ ಮೂಲದ ಬಸನಗೌಡ ಪಾಟೀಲ್ ಎಂಬಾತನನ್ನು ಬಂಧಿಸಲಾಗಿದೆ. ಜೊತೆಗೆ, ಪಿಸ್ತೂಲು ಮತ್ತು ಜೀವಂತ ಬುಲೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೊಪ್ಪಳ (ಕೊಪ್ಪಳ) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್ ಅರಸಿದ್ದಿ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕೊಪ್ಪಳ ಎಸ್ಪಿ ಡಾ ರಾಮ್ ಎಲ್ ಅರಸಿದ್ದಿ, ಕೊಪ್ಪಳದ ಯಲಬುರ್ಗಾ ಪಟ್ಟಣದಲ್ಲಿ ಏರ್ಫೈರ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಡು ಹಾರಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಸೋಶಿಯಲ್‌ ಮೀಡಿಯಾ ಟೀಂ ಮಾನಿಟರಿಂಗ್ ಮಾಡುವ ವೇಳೆ ಏರ್‌ಫೈರ್ ಮಾಡಿರುವ ವಿಷಯ ಗೊತ್ತಾಯಿತು.ಜನವರಿ 21 ರಂದು ಏರ್‌ಪೈರ್ ಮಾಡಿರುವ ವಿಷಯ ವಾಟ್ಸಪ್ ಮೂಲಕ ಗೊತ್ತಾಯಿತು. ಈ ಸಂಬಂಧ ಯಲಬುರ್ಗಾ ಪೊಲೀಸ್ ಠಾಣೆಗೆ ಆರ್ಮ್ಸ್ ಆ್ಯಕ್ಟ್ ಅಡಿ ಪ್ರಕರಣ ದಾಖಲಾಗಿದ್ದು, ಸಿಂದಗಿ ಮೂಲದ ಬಸನಗೌಡ ಪಾಟೀಲ್ ಅವರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ತುಂಗಾ ನದಿ ತೀರದಲ್ಲಿ ವಿದೇಶಿಗರ ಪಾರ್ಟಿ! ರೆಸಾರ್ಟ್ ಮೇಲೆ ಬಿತ್ತು ಕೇಸ್

ವೆಪನ್ ಲೈಸನ್ಸ್ ವಿಜಯಪುರ ಜಿಲ್ಲೆಗೆ ಮಾತ್ರ ಸಮೀತವಾಗಿತ್ತು. ಎರಡು ರೌಂಡ್ ಏರ್ಫೈರ್ ಮಾಡಿದ್ದಕ್ಕೆ ವೆಪನ್ ಸೀಜ್ ಮಾಡಲಾಗಿದೆ. ಸೋಶಿಯಲ್ ಮೋದಿಯನ್ನು ನಾವು ಸತತವಾಗಿ ಮೇಲ್ವಿಚಾರಣೆ ಮಾಡುತ್ತಿರುತ್ತೇವೆ. ವಿಲ್ಹಿಂಗ್, ಅಕ್ರಮ ಚಟುವಟಿಕೆಗಳ ಮೇಲೆ ಮಾನಿಟರಿಂಗ್ ಮಾಡುತ್ತಿರುತ್ತೇವೆ. ಸೋಶಿಯಲ್ ಮೀಡಿಯಾದಲ್ಲಿ ಈ ರೀತಿ ಮಾಡಬಾರದು ಎಂದು ಎಚ್ಚರಿಕೆ.

ಘಟನೆ ವಿವರ

ಕಳೆದ ಜನವರಿ 28 ರಂದು ಯಲಬುರ್ಗಾ ಪಟ್ಟಣದ ಪ್ರಸಿದ್ಧ ಶ್ರೀಧರ ಮುರಡಿಯಿಂದ ಅಡ್ಡಪಲ್ಲಕ್ಕಿ ಮಹೋತ್ಸವವನ್ನು ಆಯೋಜಿಸಲಾಗಿತ್ತು. ಈ ಸಂಭ್ರಮದ ಮೆರವಣಿಗೆಯಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ಮೂಲದ ಬಸನಗೌಡ ಪಾಟೀಲ್ ಎಂಬುವವರು ಇದ್ದರು. ಮೆರವಣಿಗೆ ಸಾಗುತ್ತಿದ್ದಾಗ ಭಕ್ತಿಯ ಉತ್ತುಂಗದಲ್ಲಿ ಅಥವಾ ತನ್ನ ಗತ್ತು ಪ್ರದರ್ಶಿಸುವ ಭರದಲ್ಲಿ ಬಸನಗೌಡ, ತನ್ನ ಬಳಿಯಿದ್ದ ಪಿಸ್ತೂಲನ್ನು ಸಾರ್ವಜನಿಕರ ಸಮ್ಮುಖದಲ್ಲೇ ಗಾಳಿಯಲ್ಲಿ ಗುಂಡು ಹಾರಿಸಿದ್ದರು.

ಇನ್ನು ಬಸನಗೌಡ ಗುಂಡು ಹಾರಿಸುತ್ತಿದ್ದ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದವರು ಮೊಬೈಲ್ ನಲ್ಲಿ ಸೆರೆಯಾಗಿದ್ದರು, ಬಳಿಕ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವರೈಲ್ ಆಗಿದ್ದರು.ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರಗಳ ಬಳಕೆ ಮತ್ತು ಗಾಳಿಯಲ್ಲಿ ಗುಂಡು ಹಾರಿಸುವುದು ಕಾನೂನುಬಾಹಿರವಾಗಿರುವುದರಿಂದ, ಕೊಪ್ಪಳ ಜಿಲ್ಲಾ ಪೊಲೀಸ್ ‘ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್’ ಈ ವಿಡಿಯೋವನ್ನು ಪತ್ತೆ ಹಚ್ಚಿ ತನಿಖೆ ಕೈಗೊಂಡಿತ್ತು.

ಕರ್ನಾಟಕದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *