
ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಸಿನೆಮಾಗಳಲ್ಲಿ ನಟಿಸಿ ಖ್ಯಾತಿ ಗಳಿಸಿರುವ ನಟಿ ಮೇಘನಾ ರಾಜ್ ಸದ್ಯ ಮಗ ರಾಯನ್ ಆರೈಕೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಗರ್ಭಿಣಿಯಾಗಿದ್ದಾಗಲೇ ಪತಿ ಚಿರು ಅಗಲಿದ್ದರಿಂದ, ಆ ಸಮಯದಲ್ಲಿ ನಟಿ ಪಟ್ಟಿರುವ ಯಾತನೆ, ಸಂಕಟ ಬಹುಶಃ ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲದ್ದು. ಒಂದೆಡೆ ಮಗುವಿನ ಜನನದ ಖುಷಿ, ಮತ್ತೊಂದೆಡೆ ಪತಿಯ ಅಕಾಲಿಕ ಮರಣ… ಈ ಸಂದರ್ಭದಲ್ಲಿ ತಾವು ಅನುಭವಿಸಿರುವ ನೋವಿನ ಕಥೆಯನ್ನು ಎಳೆಎಳೆಯಾಗಿ ನಟಿ ತೆರೆದಿಟ್ಟಿದ್ದಾರೆ.