ಪಂಜಾಬ್‌ನಲ್ಲಿ ಮತ್ತೊಂದು ಗುಂಡಿನ ದಾಳಿ: ಹಾಡಹಗಲೇ 23 ವರ್ಷದ ನವ ವಿವಾಹಿತೆಗೆ ಗುಂಡೇಟು : CCTVಯಲ್ಲಿ ದೃಶ್ಯ ಸೆರೆ | Firing On Newly Married Woman In Punjab

ಪಂಜಾಬ್‌ನಲ್ಲಿ ಮತ್ತೊಂದು ಗುಂಡಿನ ದಾಳಿ: ಹಾಡಹಗಲೇ 23 ವರ್ಷದ ನವ ವಿವಾಹಿತೆಗೆ ಗುಂಡೇಟು : CCTVಯಲ್ಲಿ ದೃಶ್ಯ ಸೆರೆ | Firing On Newly Married Woman In Punjab



ಪಂಜಾಬ್‌ನಲ್ಲಿ ಮತ್ತೊಂದು ಗುಂಡಿನ ದಾಳಿ: ಹಾಡಹಗಲೇ 23 ವರ್ಷದ ನವ ವಿವಾಹಿತೆಗೆ ಗುಂಡೇಟು : CCTVಯಲ್ಲಿ ದೃಶ್ಯ ಸೆರೆ | Firing On Newly Married Woman In Punjab

Newlywed woman shot in Patti: ಪಂಜಾಬ್‌ನ ಪಟ್ಟಿಯಲ್ಲಿ, ಮದುವೆಯಾದ ಕೇವಲ ಎರಡು ತಿಂಗಳಲ್ಲೇ ನವವಿವಾಹಿತೆಯೊಬ್ಬರಿಗೆ ಗುಂಡಿಕ್ಕಲಾಗಿದೆ. ಈ ಭಯಾನಕ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಪಂಜಾಬ್‌ನಲ್ಲಿ ಗುಂಡಿನ ದಾಳಿ ಪ್ರಕರಣಗಳ ಸಂಖ್ಯೆ ಮತ್ತೆ ಮತ್ತೆ ಕೇಳಿ ಬರುತ್ತಲೇ ಇದೆ. ಇಲ್ಲಿ ದುಷ್ಕರ್ಮಿಗಳು ಕೋಳಿ ಕುರಿಗಳ ಕೊಂದಂತೆ ಯಾವುದೇ ಭಯವಿಲ್ಲದೇ ಜನರನ್ನು ಗುಂಡಿಕ್ಕಿ ಕೊಲ್ಲುತ್ತಿದ್ದಾರೆ. ಹಾಗೆಯೇ ಈಗ ಪಂಜಾಬ್‌ನ ಗಡಿ ನಗರವಾದ ಪಟ್ಟಿಯಲ್ಲಿ ನವವಿವಾಹಿತ ಮಹಿಳೆಗೆ ಗುಂಡಿಕ್ಕಿದ್ದಾರೆ. ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಂಜಾಬ್‌ನ ಪಟ್ಟಿಯಲ್ಲಿ ಈ ಘಟನೆ ನಡೆದಿದೆ. ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡ ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ.

ಇದನ್ನೂ ಓದಿ: ಮತ್ತೆ ಮತ್ತೆ ಕಾಣಿಸುವ ಹೊಟ್ಟೆನೋವು ಗ್ಯಾಸ್ಟಿಕ್ ಅಂತ ನಿರ್ಲಕ್ಷಿಸಿಬೇಡಿ: ಈ ಕಿರುತೆರೆ ನಟಿಗೆ ಏನಾಯ್ತು ನೋಡಿ

ಪಂಜಾಬ್‌ನ ತರಣ್ ತರಣ್‌ನಲ್ಲಿ ಮಾರಕ ಗುಂಡಿನ ದಾಳಿ ನಡೆದ ಬೆನ್ನಲ್ಲೇ ಈ ದಾಳಿ ನಡೆದಿದೆ, ಇದು ಈ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಕಳವಳವನ್ನು ಹೆಚ್ಚಿಸಿದೆ. 23 ವರ್ಷದ ರೂಬಿ ಈ ಗುಂಡಿನ ದಾಳಿಯಲ್ಲಿ ಮೃತಪಟ್ಟವರು. ಕೇವಲ ಎರಡು ತಿಂಗಳ ಹಿಂದಷ್ಟೇ ಅವರು ಅನ್ಶ್ ಗ್ರೋವರ್ ಅವರನ್ನು ವಿವಾಹವಾಗಿದ್ದರು. ಶನಿವಾರ ಸಂಜೆ ಪಟ್ಟಿಯ ಗಾರ್ಡನ್ ಕಾಲೋನಿಯಲ್ಲಿರುವ ಅವರ ನಿವಾಸದ ಪ್ರವೇಶದ್ವಾರದ ಬಳಿಯೇ ಈ ಗುಂಡಿನ ದಾಳಿ ನಡೆದಿದೆ. ಫೆಬ್ರವರಿ 21 ರಂದು ಘಟನೆ ನಡೆದಿದ್ದು, ಸಿಸಿಟಿವಿ ದೃಶ್ಯ ಈಗ ವೈರಲ್ ಆಗ್ತಿದೆ. ರೂಬಿ ಅವರ ಪತಿ ತನ್ನ ಆಕ್ಟಿವಾ ಸ್ಕೂಟರ್‌ನಲ್ಲಿ ಮಾರುಕಟ್ಟೆಯಲ್ಲಿ ಕೆಲಸ ಮಾಡಲು ಮನೆಯಿಂದ ಹೊರಟ ಸ್ವಲ್ಪ ಸಮಯದ ನಂತರ ಈ ಘಟನೆ ಸಂಭವಿಸಿದೆ.

ಇದನ್ನೂ ಓದಿ: ಆಕೆಯ ವೆಚ್ಚ ಭರಿಸಲಾಗದು: ಹೆಂಡ್ತಿಯನ್ನೇ ಬಾಡಿಗೆಗೆ ನೀಡುವುದಾಗಿ ಘೋಷಿಸಿದ ಗಂಡ

ಗೇಟ್ ಬಳಿ ಅಪರಿಚಿತ ಯುವಕನೊಬ್ಬ ರೂಬಿ ಮೇಲೆ ಗುಂಡು ಹಾರಿಸಿದ ಘಟನೆಯಿಂದ ಕುಟುಂಬ ತೀವ್ರ ಆಘಾತಗೊಂಡಿದೆ ಎಂದು ರೂಬಿಯ ಅಜ್ಜಿ ರೀನು ಬಾಲಾ ಹೇಳಿದ್ದಾರೆ. ಘಟನೆಯಲ್ಲಿ ರೂಬಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಪಟ್ಟಿಯ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ವೈದ್ಯರು ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಘೋಷಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಅಮೃತಸರದ ಗುರುನಾನಕ್ ದೇವ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಆರೋಪಿಯ ಗುರುತು ಪತ್ತೆಯಾಗಿದ್ದು, ಪೊಲೀಸರಿಂದ ಆತನಿಗಾಗಿ ಶೋಧ ಕಾರ್ಯ ಆರಂಭವಾಗಿದೆ.

ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ. ಪಟ್ಟಿ ನಗರದ ಸ್ಟೇಷನ್ ಹೌಸ್ ಆಫೀಸರ್ ಇನ್ಸ್‌ಪೆಕ್ಟರ್ ಕನ್ವಲ್ಜಿತ್ ರೈ ಅವರು ಗುಂಡಿನ ದಾಳಿ ನಡೆದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಭಾಯಿಸಿ ತನಿಖೆ ಆರಂಭಿಸಿದ್ದಾರೆ.

ಶಂಕಿತ ದಾಳಿಕೋರನನ್ನು ಪಟ್ಟಿ ನಿವಾಸಿ ಕರಣ್ ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ಆತನನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ದಾಳಿಯ ಹಿಂದಿನ ಉದ್ದೇಶ ಇನ್ನೂ ಅಧಿಕೃತವಾಗಿ ಬಹಿರಂಗವಾಗಿಲ್ಲ. ಪೊಲೀಸರು ವೈಯಕ್ತಿಕ ದ್ವೇಷ ಸೇರಿದಂತೆ ಎಲ್ಲಾ ಸಂಭಾವ್ಯ ಕೋನಗಳಿಂದ ಪರಿಶೀಲಿಸುತ್ತಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ರೂಬಿಯ ಕುಟುಂಬ ಒತ್ತಾಯಿಸಿದ್ದು, ತ್ವರಿತ ನ್ಯಾಯ ಒದಗಿಸುವಂತೆ ಸ್ಥಳೀಯ ಅಧಿಕಾರಿಗಳನ್ನು ಒತ್ತಾಯಿಸಿದೆ.

ಕೆಲವು ದಿನಗಳ ಹಿಂದೆ ತರಣ್ ತರಣ್ ಜಿಲ್ಲೆಯಲ್ಲಿ ನಡೆದ ಗುಂಡಿನ ದಾಳಿ ಘಟನೆಯ ನಂತರ ಈಗ ಪಟ್ಟಿಯಲ್ಲಿ ಈ ಗುಂಡಿನ ದಾಳಿ ನಡೆದಿದೆ. ತರಣ್ ತರಣ್ ಜಿಲ್ಲೆಯ ಥಾಥಿಯನ್ ಮಹಾಂತನ್ ಗ್ರಾಮದ ಹಾಲಿ ಸರಪಂಚ್ ಹರ್ಭೇಂದ್ರ ಸಿಂಗ್ ಅವರನ್ನು ಮದುವೆ ಸಮಾರಂಭದಲ್ಲೇ ಗುಂಡು ಹಾರಿಸಿ ಕೊಲ್ಲಲಾಗಿತ್ತು. ಇಬ್ಬರು ಅಪರಿಚಿತ ದುಷ್ಕರ್ಮಿಗಳು ಕಾರ್ಯಕ್ರಮದಲ್ಲಿ ಗುಂಡು ಹಾರಿಸಿ ಸಿಂಗ್ ಅವರ ಸಾವಿಗೆ ಕಾರಣರಾದರು ಎಂದು ಹೇಳಿದ್ದಾರೆ. ಜಿಲ್ಲೆಯಲ್ಲಿ ಸತತವಾಗಿ ಗುಂಡಿನ ಹಿಂಸಾಚಾರದ ಘಟನೆಗಳು ನಡೆಯುತ್ತಿರುವುದರಿಂದ, ನಿವಾಸಿಗಳು ಸಾರ್ವಜನಿಕ ಸುರಕ್ಷತೆಯ ಬಗ್ಗೆ ಹೆಚ್ಚು ಕಳವಳ ವ್ಯಕ್ತಪಡಿಸಿದ್ದಾರೆ.



Source link

Leave a Reply

Your email address will not be published. Required fields are marked *