'ಸ್ಪೀಕರ್​ ಆನ್​ ಇದೆ, ಎಲ್ಲರೂ ಇದ್ದಾರೆ': ಭಾವಿ ಪತಿಗೆ ಹಿಂಟ್​ ಕೊಟ್ಟು ಪೇಚಿನಲ್ಲಿ​ Rashmika Mandanna- ವಿಡಿಯೋ ವೈರಲ್

'ಸ್ಪೀಕರ್​ ಆನ್​ ಇದೆ, ಎಲ್ಲರೂ ಇದ್ದಾರೆ': ಭಾವಿ ಪತಿಗೆ ಹಿಂಟ್​ ಕೊಟ್ಟು ಪೇಚಿನಲ್ಲಿ​ Rashmika Mandanna- ವಿಡಿಯೋ ವೈರಲ್

'ಸ್ಪೀಕರ್​ ಆನ್​ ಇದೆ, ಎಲ್ಲರೂ ಇದ್ದಾರೆ': ಭಾವಿ ಪತಿಗೆ ಹಿಂಟ್​ ಕೊಟ್ಟು ಪೇಚಿನಲ್ಲಿ​ Rashmika Mandanna- ವಿಡಿಯೋ ವೈರಲ್

ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಅವರ ಮದುವೆ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ, ‘ಅನಿಮಲ್’ ಸಿನಿಮಾ ಪ್ರಚಾರದ ವಿಡಿಯೋವೊಂದು ವೈರಲ್ ಆಗಿದೆ. ಸಂದರ್ಶನದಲ್ಲಿ, ರಶ್ಮಿಕಾ ಅವರು ವಿಜಯ್‌ಗೆ ಸ್ಪೀಕರ್ ಫೋನ್‌ನಲ್ಲಿ ಕರೆ ಮಾಡಿದಾಗ ನಡೆದ ತಮಾಷೆಯ ಘಟನೆಯ ಸಂಬಂಧದ ಗುಟ್ಟನ್ನು ಬಹಿರಂಗಪಡಿಸಿದೆ.

ನ್ಯಾಷನಲ್​ ಕ್ರಷ್​ ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಅವರ ಮದುವೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇವೆ. ಮದುವೆ ಆಗ್ತಿಲ್ಲ ಎಂದು ಕೊನೆಯವರೆಗೂ ಗುಟ್ಟಾಗಿಯೇ ಇಟ್ಟಿದ್ದ ಜೋಡಿ ಕೊನೆಗೂ ಕನ್​ಫರ್ಮ್​ ಮಾಡಿದೆ. ರಾಜಸ್ಥಾನದಲ್ಲಿ ಜೋಡಿ ಮದುವೆಯಾಗುತ್ತಿದೆ.

ಇವರ ಮದುವೆಯ ಸುದ್ದಿ ತಿಳಿದಾಗಿನಿಂದಲೂ ಸೋಷಿಯಲ್​ ಮೀಡಿಯಾದಲ್ಲಿ, ಇವರ ಹಳೆಯ ವಿಡಿಯೋಗಳೆಲ್ಲಾ ಮತ್ತೆ ಮತ್ತೆ ವೈರಲ್​ ಆಗುತ್ತಿವೆ. ಇವರಿಬ್ಬರೂ ನಟಿಸಿರುವ ಚಿತ್ರಗಳು, ಡೈಲಾಗ್​ಗಳು ಎಲ್ಲವೂ ಮತ್ತೆ ವೈರಲ್​ ಆಗುತ್ತಿವೆ.

ಏನಿಲ್ಲ, ಏನಿಲ್ಲ… ನಮ್ಮ ನಡುವೆ ಏನಿಲ್ಲ ಎಂದಿದ್ದ ಜೋಡಿ ಹಲವಾರು ಸಂದರ್ಭಗಳಲ್ಲಿ ರೆಡ್​ಹ್ಯಾಂಡ್​ ಆಗಿ ಸಿಕ್ಕಿಹಾಕಿಕೊಂಡಿದ್ದೂ ಇದೆ. ಅನಿಮಲ್​ ಸಿನಿಮಾ (Animal Film) ಸಮಯದಲ್ಲಿ ನಡೆದ ಸಂದರ್ಶನವೊಂದರ ವಿಡಿಯೋ ಇದೀಗ ಮತ್ತೆ ವೈರಲ್​ ಆಗ್ತಿದೆ. ಇದರಲ್ಲಿ ನಟ ನಂದಮೂರಿ ಬಾಲಕೃಷ್ಣ ಅವರು ಸ್ಪೀಕರ್​ನಲ್ಲಿ ಫೋನ್​ ಇಟ್ಟು ವಿಜಯ ದೇವರಕೊಂಡ ಅವರ ಜೊತೆ ಮಾತನಾಡುವಂತೆ ರಶ್ಮಿಕಾಗೆ ಹೇಳಿದ್ದರು.

ಏನೂ ಮಾಡಲು ತಿಳಿಯದೇ ಸ್ಪೀಕರ್​ ಆನ್ ಇಟ್ಟು ವಿಜಯ ದೇವರಕೊಂಡ ಅವರ ಜೊತೆ ಮಾತನಾಡಿದಾಗ, ಅವರು ಅತ್ಯಂತ ಪ್ರೀತಿಯಿಂದ ಕರೆಯುವ ಹೆಸರನ್ನು ಕರೆದಾಗ ರಶ್ಮಿಕಾಗೆ ಕಸಿವಿಸಿಯಾಯಿತು. ಎಲ್ಲರೂ ಜೋರಾಗಿ ನಕ್ಕಾಗ, ಸ್ಪೀಕರ್​ ಆನ್​ ಇದೆ. ಇಲ್ಲಿ ಎಲ್ಲರೂ ಇದ್ದಾರೆ ಎಂದು ರಶ್ಮಿಕಾ ಹೇಳಿ ಮತ್ತಷ್ಟು ತಮಾಷೆ ಮಾಡಿಸಿಕೊಂಡರು.

ಆ ಬಳಿಕ ನಂದಮೂರಿ ಅವರು ನಿಮಗೆ ಯಾರು ಇಷ್ಟ ಎಂದು ವಿಜಯ್​ ಅವರನ್ನು ಕೇಳಿದಾಗ ಅವರು ನನಗೆ ಅನಿಮಲ್​ ನಿರ್ದೇಶಕ ಸಂದೀಪ ರೆಡ್ಡಿ ವಾಂಗಾ ಅವರನ್ನು ಪ್ರೀತಿಸುತ್ತೇನೆ ಎಂದರು. ಬಳಿಕ ರಶ್ಮಿಕಾಗೆ ಇದೇ ಪ್ರಶ್ನೆ ಕೇಳಲಾಯಿತು.

ಆಗ ರಶ್ಮಿಕಾ ಅವರು ನಾನೂ ಸಂದೀಪ್​ ಅವರನ್ನು ತುಂಬಾ ಇಷ್ಟಪಡುತ್ತೇನೆ. ಅರ್ಜುನ್​ ರೆಡ್ಡಿ ಅವರ ಜೊತೆಯೂ ಕನೆಕ್ಷನ್​ ಇದೆ ಎಂದು ಅತ್ತ ಕಡೆಯಿಂದ ವಿಜಯ್​ ಅವರು ಕನೆಕ್ಷನ್ನಾ, ಅದೆಂಥ ಕನೆಕ್ಷನ್ನು ಎಂದು ಪ್ರಶ್ನಿಸಿದಾಗ ರಶ್ಮಿಕಾ ಫುಲ್​ ಸುಸ್ತಾಗಿ ಹೋದರು.

Source link

Leave a Reply

Your email address will not be published. Required fields are marked *