ಸೀರಿಯಲ್ ಆಯ್ತು, ಈಗ ಸ್ವಚ್ಚ ಮೈಸೂರು ಅಭಿಯಾನದ ರಾಯಭಾರಿ Bigg Boss ಸ್ಪರ್ಧಿ ಸೂರಜ್ ಸಿಂಗ್

ಸೀರಿಯಲ್ ಆಯ್ತು, ಈಗ ಸ್ವಚ್ಚ ಮೈಸೂರು ಅಭಿಯಾನದ ರಾಯಭಾರಿ Bigg Boss ಸ್ಪರ್ಧಿ ಸೂರಜ್ ಸಿಂಗ್

ಸೀರಿಯಲ್ ಆಯ್ತು, ಈಗ ಸ್ವಚ್ಚ ಮೈಸೂರು ಅಭಿಯಾನದ ರಾಯಭಾರಿ Bigg Boss ಸ್ಪರ್ಧಿ ಸೂರಜ್ ಸಿಂಗ್

ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿ ಸೂರಜ್ ಸಿಂಗ್ ಹಿಂದೆ ಮಾಡೆಲ್ ಆಗಿದ್ರೂ ಕೂಡ, ದೊಡ್ಮನೆಗೆ ಬಂದ ಬಳಿಕ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದರು. ಜೊತೆಗೆ ಒಂದರ ಮೇಲೊಂದು ಆಫರ್ ಗಳು ಸಹ ಬರೋದಕ್ಕೆ ಶುರುವಾಯ್ತು. ಇದೀಗ ಮತ್ತೊಂದು ಗರಿ ಸೂರಜ್ ಮುಡಿಗೇರಿದೆ.

ಬಿಗ್ ಬಾಸ್ ಸೀಸನ್ 12ರ ಮೂಲಕ ಕನ್ನಡ ಜನರಿಗೆ ಚಿರಪರಿಚಿತರಾದ ಮೈಸೂರಿನ ಹುಡುಗ ಸೂರಜ್ ಸಿಂಗ್ ಕನ್ನಡಿಗರ ಫೇವರಿಟ್ ಸ್ಪರ್ಧಿ ಕೂಡ ಹೌದು. ಅನಾವಶ್ಯಕ ವಿಷಯಕ್ಕೆ ಹೋಗಲ್ಲ, ಜಗಳ ಇಲ್ಲ, ಡ್ರಾಮಾ ಇಲ್ಲ ಏನೂ ಇಲ್ಲದೇ, ತಮ್ಮ ಗುಣದಿಂದಲೇ ಜನರ ಮನಸು ಗೆದ್ದಿದ್ದರು ಸೂರಜ್ ಸಿಂಗ್.

ಮಾಡೆಲ್ ಆಗಿ ಗುರುತಿಸಿಕೊಂಡಿದ್ದರೂ ಸಹ, ಕನ್ನಡಿಗರಿಗೆ ಹೆಚ್ಚು ಪರಿಚಿತರಾಗಿದ್ದು ಬಿಗ್ ಬಾಸ್ ಮೂಲಕ. ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟ ತಕ್ಷಣ ಸೂರಜ್ ಸಿಂಗ್ ಅದೃಷ್ಟವೇ ಬದಲಾಯಿತು ಎನ್ನಬಹುದು. ಯಾಕಂದ್ರೆ, ಅಲ್ಲಿಂದ ಹೊರ ಬಂದ ತಕ್ಷಣ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪವಿತ್ರ ಬಂಧನ ಧಾರಾವಾಹಿಯಲ್ಲಿ ಸೂರಜ್ ಸಿಂಗ್ ನಾಯಕ ದೇವದತ್ ದೇಶಮುಖ್ ಎನ್ನುವ ನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಭಿಮಾನಿಗಳು ಸೂರಜ್ ಅಭಿನಯವನ್ನು, ಸೀರಿಯಲ್ ಎರಡನ್ನೂ ಸಹ ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದಾರೆ.

ಅದರ ಬೆನ್ನಲ್ಲೇ ಇದೀಗ ಸೂರಜ್ ಸ್ವಚ್ಛ ಮೈಸೂರು ಅಭಿಯಾನದ ರಾಯಭಾರಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡಿರುವ ಸೂರಜ್, ಸ್ವಚ್ಛ ಮೈಸೂರು ಅಭಿಯಾನದ ರಾಯಭಾರಿಯಾಗುವ ಅವಕಾಶವನ್ನು ನೀಡಿದ ಮೈಸೂರು ನಗರ ಪಾಲಿಕೆಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಮೈಸೂರು ಮಹಾನಗರ ಪಾಲಿಕೆಯು ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್, ನಟ ವಸಿಷ್ಠ ಸಿಂಹ, ನಟಿ ಹರಿಪ್ರಿಯಾ, ಬಿಗ್​ಬಾಸ್ ಖ್ಯಾತಿಯ ಸೂರಜ್ ಸಿಂಗ್, ಗಾಯಕಿ ಅನನ್ಯಾ ಭಟ್ ಮತ್ತು ಆಲೋಕ್ ಅವರನ್ನು ನೂತನ ಸ್ವಚ್ಛತಾ ರಾಯಭಾರಿಗಳನ್ನಾಗಿ ನೇಮಿಸಿದೆ. ಈ ಸಾಲಿನಲ್ಲಿ ಸೂರಜ್ ಸಿಂಗ್ ಸೇರಿರುವುದು ಅವರ ಜನಪ್ರಿಯತೆಗೆ ಸಿಕ್ಕ ಗೆಲುವಾಗಿದೆ.

ಬಿಗ್ ಬಾಸ್ ಗೆ ಎಂಟ್ರಿ ಕೊಡುವ ಮುನ್ನ ಸೂರಜ್ ಸಿಂಗ್ ಇನ್ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ ಕೇವಲ 16K ಮಾತ್ರ ಇತ್ತು, ಆದರೆ ಎಂಟ್ರಿ ಕೊಟ್ಟ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಎಷ್ಟು ಜನಪ್ರಿಯತೆ ಸಿಕ್ಕಿದೆ ಅಂದ್ರೆ ಸದ್ಯ ಇವರಿಗೆ 437K ಫಾಲೋವರ್ಸ್ ಇದ್ದಾರೆ.

Source link

Leave a Reply

Your email address will not be published. Required fields are marked *