ಏಷ್ಯಾದಲ್ಲಿ 2ನೇ ಅತೀದೊಡ್ಡ ಅಮೇಜಾನ್ ಆಫೀಸ್ ಬೆಂಗಳೂರಿನಲ್ಲಿ ಆರಂಭ, ಬರೋಬ್ಬರಿ 7,000 ಉದ್ಯೋಗಿಗಳ ಕೆಲಸ ಮಾಡಲು ಸ್ಥಳವಕಾಶವಿರುವ ಅತೀ ದೊಡ್ಡ ಕಚೇರಿ ಇದಾಗಿದೆ. 11 ಮಹಡಿ, 1.1 ಮಿಲಿಯನ್ ಚದರ ಅಡಿ ವಿಸ್ತೀರ್ಣ ಹೊಂದಿದೆ.

ಏಷ್ಯಾದಲ್ಲಿ ಎರಡನೇ ಅತೀ ದೊಡ್ಡ ಅಮೇಜಾನ್ ಕಚೇರಿ ಬೆಂಗಳೂರಿನಲ್ಲಿ ಕಾರ್ಯಾರಂಭಗೊಡಿದೆ. 12 ಮಹಡಿಗಳ 1.1 ಮಿಲಿಯನ್ ಚದರ ಅಡಿ ವಿಸ್ತೀರ್ಣ ಈ ಕ್ಯಾಂಪಸ್‌ನಲ್ಲಿ ಬರೋಬ್ಬರಿ 7000 ಉದ್ಯೋಗಿಗಳು ಏಕಾಕಾಲದಲ್ಲಿ ಕೆಲಸ ಮಾಡಲು ಸಾಧ್ಯವಿದೆ. ಇ ಕಾಮರ್ಸ್, ಪೇಮೆಂಟ್, ಮಾರ್ಕೆಟಿಂಗ್, ಟೆಕ್ನಾಲಜಿ, ಸರ್ವೀಸ್, ಸೇಲ್ಸ್ ಸೇರಿದಂತೆ ಎಲ್ಲಾ ವಿಭಾಗ ಒಂದೇ ಕ್ಯಾಂಪಸ್‌ನಲ್ಲಿ ಕೆಲಸ ಮಾಡಲಿದೆ.

ಐದು ಏಕರೆ ಪ್ರದೇಶದಲ್ಲಿ ಅಮೇಜಾನ್ ಕಚೇರಿ ತಲೆ ಎತ್ತಿ ನಿಂತಿದೆ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ 15 ಕಿಲೋಮೀಟರ್ ದೂರದಲ್ಲಿ ಈ ಕಾರ್ಪೋರೇಟ್ ಕ್ಯಾಂಪಸ್ ಇಂದು ಉದ್ಘಾಟನೆಗೊಂಡಿದೆ. ಸಚಿವ ಎಂಬಿ ಪಾಟೀಲ್ ಅಮೇಜಾನ್ ನೂತನ ಕಚೇರಿ ಉದ್ಘಾಟನೆ ಮಾಡಿದ್ದಾರೆ.

ಅಮೇಜಾನ್ ಈಗಾಗಲೇ ಭಾರದಲ್ಲಿ 40 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಿದೆ. 2030ರ ವೇಳೆಗೆ ಮತ್ತೆ 35 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲಿದೆ. ಭಾರತದಲ್ಲಿ ಅತೀ ಹೆಚ್ಚು ಹೂಡಿಕೆ ಮಾಡುತ್ತಿರುವ ಅಮೇಜಾನ್ ಇದೀಗ ಹೊಸ ದಾಖಲೆ ಬರೆಯಲು ಸಜ್ಜಾಗಿದೆ.

ಏಷ್ಯಾದಲ್ಲಿ ಅಮೇಜಾನ್ ಕಂಪನಿಯ ಎರಡು ಅತೀ ದೊಡ್ಡ ಕಚೇರಿಗಳು ಭಾರತದಲ್ಲೇ ಇದೇ. ಏಷ್ಯಾದ ಅತೀ ದೊಡ್ಡ ಅಮೇಜಾನ್ ಆಫೀಸ್ ಇರುವುದು ಹೈದರಾಬಾದ್‌ನಲ್ಲಿ. ಇದೀಗ 2ನೇ ಅತೀ ದೊಡ್ಡ ಆಫೀಸ್ ಬೆಂಗಳೂರಿನಲ್ಲಿ ಆರಂಭಗೊಂಡಿದೆ. ಈ ಮೂಲಕ ಎರಡು ಐಟಿ ಸಿಟಿಗಳಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲೇ ಅಮೇಜಾನ್ ಹೂಡಿಕೆ ಮಾಡಿದೆ.

ಕರ್ನಾಟಕದಲ್ಲಿ ಅತೀ ವೇಗವಾಗಿ ಅಮೇಜಾನ್ ಕಂಪನಿ ಬೆಳೆಯುತ್ತಿದೆ. ಕರ್ನಾಟಕ ಮೂಲೆ ಮೂಲೆಯಲ್ಲೂ ಅಮೇಜಾನ್ ಡೆಲಿವರಿ ನೀಡುತ್ತಿದೆ. ತ್ವರಿತ ಡೆಲಿವರಿ ಸೇರಿದಂತೆ ಅಮೇಜಾನ್ ಕಂಪನಿ ಅತೀ ದೊಡ್ಡ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಕರ್ನಾಟಕದಲ್ಲಿ ವೇಗವಾಗಿ ಬೆಳೆಯುತ್ತಿದೆ ಅಮೇಜಾನ್

Source link