Earth Rotation ಗಂಟೆಗೆ 1670 KM ವೇಗದಲ್ಲಿ ಭೂಮಿ ತಿರುಗುವ ಅದ್ಭುತ ದೃಶ್ಯ ಸೆರೆ, ಆದ್ರೂ ಅನಭವಕ್ಕೆ ಬರ್ತಿಲ್ಲ ಏಕೆ? | Stunning Visuals Of Earth Rotating At 1670 Kmph Captured Why Everything Feels Still

Earth Rotation ಗಂಟೆಗೆ 1670 KM ವೇಗದಲ್ಲಿ ಭೂಮಿ ತಿರುಗುವ ಅದ್ಭುತ ದೃಶ್ಯ ಸೆರೆ, ಆದ್ರೂ ಅನಭವಕ್ಕೆ ಬರ್ತಿಲ್ಲ ಏಕೆ? | Stunning Visuals Of Earth Rotating At 1670 Kmph Captured Why Everything Feels Still



Earth Rotation ಗಂಟೆಗೆ 1670 KM ವೇಗದಲ್ಲಿ ಭೂಮಿ ತಿರುಗುವ ಅದ್ಭುತ ದೃಶ್ಯ ಸೆರೆ, ಆದ್ರೂ ಅನಭವಕ್ಕೆ ಬರ್ತಿಲ್ಲ ಏಕೆ? | Stunning Visuals Of Earth Rotating At 1670 Kmph Captured Why Everything Feels Still

ಗಂಟೆಗೆ 1670 KM ವೇಗದಲ್ಲಿ ಭೂಮಿ ತಿರುಗುವ ಅದ್ಭುತ ದೃಶ್ಯ ಸೆರೆ, ಭೂಮಂಡಲ ಹೇಗೆ ತಿರುಗುತ್ತದೆ ಅನ್ನೋ ಸ್ಪಷ್ಟ ಚಿತ್ರಣ ಸೆರೆ ಹಿಡಿಯಲಾಗಿದೆ. ಆದರೆ ಇಷ್ಟು ವೇಗಗದಲ್ಲಿ ತಿರುಗಿದರೂ ನಮಗೆ ಅನುಭವಕ್ಕೆ ಬರುತ್ತಿಲ್ಲ ಯಾಕೆ? 

ನವದೆಹಲಿ (ಫೆ.23) ಭೂಮಿ ತಿರುಗುತ್ತದೆ ಅನ್ನೋ ವಿಚಾರವನ್ನು ಶಾಲೆಯಿಂದ ನಾವು ಕಲಿಯುತ್ತಾ ಬಂದಿದ್ದೇವೆ. ಆದರೆ ವಿಜ್ಞಾನಿಗಳು ಸೆರೆ ಹಿಡಿದ ದೃಶ್ಯ, ಸ್ಯಾಟಲೈಟ್‌ಗಳು ಸೆರೆ ಹಿಡಿದು ದೃಶ್ಯದಲ್ಲಿ ನಾವು ನೋಡಿರುತ್ತೇವೆ. ಇದೀಗ ಭೂಮಿ ತಿರುಗುವಿಕೆ ಕುರಿತು ಅದ್ಭುತ ದೃಶ್ಯವೊಂದು ಸೆರೆಯಾಗಿದೆ. ವಿಶೇಷ ಅಂದರೆ ಭೂಮಿ ಗಂಟೆಗೆ 1670 ಕಿಲೋಮೀಟ್ ವೇಗದಲ್ಲಿ ತಿರುಗುತ್ತಿದೆ. ಈ ವೇಗವನ್ನು ಸಾಮಾನ್ಯವಾಗಿ ಹೇಳುವುದಾದರೆ ಭೂಮಿ ತಿರುಗುವಿಕೆ ವೇಗ ಜನರಲ್ ಯುದ್ದ ವಿಮಾನದ ವೇಗಕ್ಕಿಂತ ಹೆಚ್ಚು. ಈ ಅದ್ಭುತ ದೃಶ್ಯ ಇದೀಗ ಬಾರಿ ಸದ್ದು ಮಾಡುತ್ತಿದೆ.

24 ಗಂಟೆಯಲ್ಲಿ ಒಂದು ಸರ್ಕಲ್

ಭೂಮಿ ಪ್ರತಿ ಗಂಟೆಗೆ 1670 ಕಿಲೋಮೀಟರ್ ವೇಗದಲ್ಲಿ ತಿರುಗುತ್ತದೆ. ಒಂದು ಸಂಪೂರ್ಣ ಸರ್ಕಲ್‌ಗೆ 24 ಗಂಟೆ ತೆಗೆದುಕೊಳ್ಳುತ್ತದೆ. ಭೂಮಿ ತಿರುಗುವಿಕೆಯ ಈ ಅದ್ಭುತ ದೃಶ್ಯದ ಜೊತೆಗೆ ಕೆಲ ಚರ್ಚೆಗಳು ನಡೆಯುತ್ತಿದೆ. ಇಷ್ಟು ವೇಗವಾಗಿ ಭೂಮಿ ತಿರುಗುತ್ತಿದೆ ಎಂದರೆ ನಮ್ಮ ಅನುಭವಕ್ಕೆ ಯಾಕೆ ಬರುತ್ತಿಲ್ಲ ಅನ್ನೋ ಚರ್ಚೆಗಳು ನಡೆಯುತ್ತಿದೆ. ಇದಕ್ಕೆ ವಿಜ್ಞಾನಿಗಳು, ಸಂಶೋಧಕರು ಉತ್ತರವನ್ನು ಕಂಡುಕೊಂಡಿದ್ದಾರೆ.

ನಮ್ಮ ಅನುಭವಕ್ಕೆ ಯಾಕೆ ಬಂದಿಲ್ಲ

ಭೂಮಿ ಇಷ್ಟು ವೇಗವಾಗಿ ತಿರುಗುತ್ತಿದ್ದರೆ ನಮ್ಮ ಅನುಭವಕ್ಕೆ ಯಾಕೆ ಬಂದಿಲ್ಲ ಅನ್ನೋ ಪ್ರಶ್ನೆಗೆ ವಿಜ್ಞಾನಿಗಳು ಉತ್ತರಿಸಿದ್ದಾರೆ. ಭೂಮಿ ಒಂದೇ ಸ್ಥಿರತೆಯಲ್ಲಿ ತಿರುಗುತ್ತದೆ. ಹೀಗೆ ಭೂಮಿ ತಿರುಗುವಾಗ ಭೂಮಿ ಇತರ ಎಲ್ಲಾ ವಸ್ತುಗಳ ಒದರ ಜೊತೆ ತಿರುಗುತ್ತದೆ. ಅಂದರೆ ಭೂಮಿಲ್ಲಿನ ಗಾಳಿ, ಸಮುದ್ರ, ಕಟ್ಟಡ, ಜೊತೆಗೆ ನಾವು ಕೂಡ ಅದೇ ವೇಗದಲ್ಲಿ ಭೂಮಿ ಜೊತೆಗೆ ಅದೇ ಸ್ಥಿರತೆಯೊಂದಿಗೆ ತಿರುಗುತ್ತೇವೆ. ಹೀಗಾಗಿ ನಮಗೆ ಇದರ ಅನುಭವ ಆಗುವುದಿಲ್ಲ. ನಮ್ಮ ಸುತ್ತಮುತ್ತಲಿನ ಎಲ್ಲಾ ವಸ್ತುಗಳು ಅಷ್ಟೇ ವೇಗದಲ್ಲಿ ತಿರುಗುವ ಕಾರಣ ಅಥವಾ ಚಲಿಸುವ ಕಾರಣ ನಮಗೆ ಅನುಭವ ಆಗುವುದಿಲ್ಲ ಎಂದಿದ್ದಾರೆ.

Scroll to load tweet…

ಭೂಮಿ ಹೀಗೆ ತಿರುಗುವಾಗ ಅಂದರೆ ಉಲ್ಟಾ ಆದಾಗ ನಾವು, ನೀರು, ಕಟ್ಟಡ ಎಲ್ಲವೂ ತೇಲಾಡಬೇಕು ಅಥವಾ ಪಲ್ಟಿಯಾಗಬೇಕಲ್ಲ ಅನ್ನೋ ಪ್ರಶ್ನೆಯೂ ಎದುರಾಗಲಿದೆ. ಆದರ ಭೂಮಿ ತಿರುಗುವಾಗ ಸೃಷ್ಟಿಯಾಗುವ ತಳ್ಳುವ ಬಲಕ್ಕಿಂತ ಭೂಮಿಯ ಗುರುತ್ವಾಕರ್ಷ ಬಲ ಹೆಚ್ಚಿದೆ. ಹೀಗಾಗಿ ಯಾವ ಅನುಭವಕ್ಕೆ ಬರುವುದಿಲ್ಲ.

ಅದ್ಬುತ ದೃಶ್ಯವನ್ನು ಹಲವು ವಿಜ್ಞಾನಿಗಳು ಸೆರೆ ಹಿಡಿದಿದ್ದಾರೆ. ಕೆಲ ವರ್ಷಗಳ ಹಿಂದೆ ಲಡಾಖ್‌ನಲ್ಲಿ ಭೂಮಿ ತಿರುಗುವಿಕೆಯ ದೃಶ್ಯವನ್ನು ವಿಜ್ಞಾನಿಗಳು ಸೆರೆ ಹಿಡಿದಿದ್ದರು. ಇದೀಗ ಮತ್ತೊಂದು ವಿಡಿಯೋ ಭಮಂಡಲದ ಕೌತುಕವನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ.



Source link

Leave a Reply

Your email address will not be published. Required fields are marked *