ಮಂತ್ರಾಲಯದಲ್ಲಿ ನಡೆದ ಗುರುವೈಭವೋತ್ಸವ ಕಾರ್ಯಕ್ರಮದಲ್ಲಿ ನಟ ರಾಘವೇಂದ್ರ ರಾಜ್ಕುಮಾರ್ (ರಾಘವೇಂದ್ರ ರಾಜ್ಕುಮಾರ್) ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಲಾಯಿತು. ಈ ಬಗ್ಗೆ ಅವರ ಪುತ್ರ ಯುವ ರಾಜ್ ಕುಮಾರ್ ಮಾತನಾಡಿದ್ದಾರೆ. ‘ಇದಕ್ಕಿಂತ ಇನ್ನೇನೂ ಸಂತೋಷ ಇಲ್ಲ. ನಮ್ಮ ತಾತ ಮಂತ್ರಾಲಯ ಮಹಾತ್ಮೆ ಸಿನಿಮಾ ಮಾಡುವಾಗ ನಮ್ಮ ತಂದೆ ಹುಟ್ಟಿದ್ದು. ಅದಕ್ಕೆ ಅವರಿಗೆ ರಾಘವೇಂದ್ರ ಅಂತ ಹೆಸರು ಇಟ್ಟಿದ್ದು. ಇಂದು ಇಲ್ಲಿ ರಾಯರ ಸಮ್ಮುಖದಲ್ಲಿ ಗೌರವ ಡಾಕ್ಟರೇಟ್ ಸಿಗುತ್ತಿರುವುದು ಬಹಳ ಸಂತೋಷದ ವಿಷಯ. ರಾಯರ ಬಗ್ಗೆ ನಮ್ಮ ತಾತ ಅದ್ಭುತವಾದ ಸಿನಿಮಾ ಮಾಡಿದ್ದಾರೆ. ನಾವು ಈ ರೀತಿ ಮಾಡಲು ಸಾಧ್ಯವಿಲ್ಲ. ಇಂದು ನಮ್ಮ ಕುಟುಂಬದವರು ಇಲ್ಲಿಗೆ ಬಂದಿದ್ದಾರೆ. ತುಂಬ ಖುಷಿ ಆಗಿದೆ’ ಎಂದ ಯುವ ರಾಜ್ ಕುಮಾರ್ (ಯುವ ರಾಜ್ ಕುಮಾರ್) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.