Viral Video: ಇಂಥ ತಾಯಿಯೂ ಇರ್ತಾರಾ! ಮಗನಿಗಿಂತ ಸೀರೆಯೇ ಹೆಚ್ಚಾಯ್ತಾ?

Viral Video: ಇಂಥ ತಾಯಿಯೂ ಇರ್ತಾರಾ! ಮಗನಿಗಿಂತ ಸೀರೆಯೇ ಹೆಚ್ಚಾಯ್ತಾ?


ನವದೆಹಲಿ, ಫೆಬ್ರವರಿ 23: ನೂರಾರು ರೂಪಾಯಿ ಬೆಲೆಯ ಸೀರೆ ಕೆಳಗೆ ಬಿದ್ದಿದ್ದ ತಾಯಿಯೊಬ್ಬಳು ತನ್ನ ಮಗನ ಪ್ರಾಣವನ್ನೇ ಪಣಕ್ಕಿಟ್ಟಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (ವೈರಲ್ ವಿಡಿಯೋ) ಆಗುತ್ತಿದೆ. ಅಪಾರ್ಟ್‌ಮೆಂಟ್‌ನ 8ನೇ ಮಹಡಿಯಲ್ಲಿ ವಾಸಿಸುತ್ತಿದ್ದ ಮಹಿಳೆ ತನ್ನ ಬಾಲ್ಕನಿಯಿಂದ 7ನೇ ಮಹಡಿಯ ಬಾಲ್ಕನಿಗೆ ಬಿದ್ದಿದ್ದ ತನ್ನ ಸೀರೆಯನ್ನು ಪಡೆಯಲು ತನ್ನ ಮಗನಿಗೆ ಸೀರೆಯನ್ನು ಕಟ್ಟಿ ಕೆಳಗೆ ನೇತಾಡಿಸಿದ್ದಾಳೆ. ಆ ಸೀರೆಯನ್ನು ಹಿಡಿದುಕೊಂಡು ಕೆಳಗಿನ ಬಾಲ್ಕನಿಗೆ ಹೋಗಿ ಅಲ್ಲಿ ಬಿದ್ದಿದ್ದ ಅಮ್ಮನ ಸೀರೆಯನ್ನು ತೆಗೆದುಕೊಂಡು ಮತ್ತೆ ಸೀರೆಯಲ್ಲಿ ನೇತಾಡುತ್ತಾ ಬಂದಿದ್ದಾನೆ. ಅಪ್ಪಿತಪ್ಪಿ ಆ ಮಗುವೇನಾದರೂ ಕೈ ಜಾರಿ ಕೆಳಗೆ ಬಿದ್ದಿದ್ದರೆ ಬದುಕುವ ಸಾಧ್ಯತೆಯಂತೂ ಇರಲೇ ಇಲ್ಲ ಬಿಡಿ. ಹೀಗಾಗಿ, ಆ ತಾಯಿಗೆ ತನ್ನ ಮಗನ ಪ್ರಾಣಕ್ಕಿಂತ ಸೀರೆಯೇ ಮುಖ್ಯವಾಯಿತಾ ಎಂಬ ಪ್ರಶ್ನೆಯನ್ನು ನೆಟ್ಟಿಗರು ಕೇಳುತ್ತಿದ್ದಾರೆ. ಈ ಘಟನೆಯನ್ನು ಎದುರಿನ ಅಪಾರ್ಟ್‌ಮೆಂಟ್ ನಿವಾಸಿಗಳು ಮೊಬೈಲಿನಲ್ಲಿ ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *